ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆಯೇ ? ಇಲ್ಲ ಪಕ್ಷದ ಹೈ ಕಮಾಂಡ್ ಬಿಎಸ್‌ವೈ ಅವರಿಂದ ಬಲವಂತವಾಗಿ ಕಸಿದುಕೊಳ್ಳಲು ಮುಂದಾಗಿದೆಯೇ ?
ಹೌದು ಇಂಥದೊಂದು ಪ್ರಶ್ನೆ ಈಗ ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೊಗಶಾಲೆಯಲ್ಲಿ ಹರಿದಾಡುತ್ತಿದೆ. ಅದಕ್ಕೆ ಇಂಬು ನೀಡುವಂತೆ ನಿನ್ನೆ ಕೆಲ ಸಚಿವರನ್ನು ಕರೆದು ಈ ಬಗ್ಗೆ ಪಕ್ಷದ ಹೈ ಕಮಾಂಡ್ ಮಟ್ಟದಲ್ಲಿ ಚರ್ಚಿಸಲಾಗಿದೆ.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಕೆಳಗಿಳಿಸಿದ್ದರೆ ಮತ್ತೆ ಯಾರನ್ನು ಆ ಸ್ಥಾನಕ್ಕೆ ತರಲು ನೀವು ಬಯಸುತ್ತೀರಿ ಎಂದು ಪ್ರತ್ಯೇಕವಾಗಿ ಸಚಿವರಿಂದ ಅಭಿಪ್ರಾಯವನ್ನು ಸ್ವೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ರಾಜ್ಯ ರಾಜಕೀಯದಲ್ಲಿ ಕೊರೊನಾ ಮಹಾಮಾರಿ ನಡುವೆ ಬಿಎಸ್‌ವೈ ಸಿಎಂ ಸ್ಥಾನಕ್ಕೂ ಕಂಟಕ ಎದುರಾಗಿದೆ. ಇದರಿಂದ ಕಂಗಾಲಾಗಿರುವ ಬಿಎಸ್‌ವೈ ಅವರು ತಮ್ಮ ಸ್ಥಾನ ಉಳಿಸಿಕೊಳ್ಳವ ನಿಟ್ಟಿನಲ್ಲಿ ಆಪ್ತ ಸಚಿವರು ಮತ್ತು ಶಾಸಕರ ನಡುವೆ ನಿರಂತ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಅವರಿಗೆ ವಯಸ್ಸಾಗಿರುವುದರಿಂದ ಪಕ್ಷದಕಲ್ಲಿ ಸಹಜವಾಗಿ ಪದತ್ಯಾಗ ಮಾಡಿ ಯುವಕರಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ಪಾಲಿಸುವಂತೆ ಪಕ್ಷದಲ್ಲಿನ ಕೆಲವರು ಮನವಿ ಮಾಡಿದರೆ, ಇನ್ನು ಕೆಲವರು ಆಗ್ರಹಪೂರ್ವಕವಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇನೇ ಇರಲಿ ಈ ಬಾರಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹೊತ್ತಲ್ಲಿ ಸಿಎಂ ಸ್ಥಾನವನ್ನು ಬಿಎಸ್‌ವೈ ಅವರು ಬಿಡುವ ಸಂಕಷ್ಟವಂತೂ ಎದುರಾಗಿರುವುದು ಬಹಿರಂಗವಾಗಿಲ್ಲ ಎಂದು ಹೇಳಲಾಗದು.
Hogli banni bereyavarige avakasha kodli en dabakidane ivanu