Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯ

ಆಗಸ್ಟ್‌ ಮೊದಲವಾರದಲ್ಲೇ ಮತ್ತೊಮ್ಮೆ ಅಪ್ಪಳಿಸಲಿದೆ ಕೊರೊನಾ ವಿಶ್ವಮಾರಿ !

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಮಹಾಮಾರಿ ಆಗಸ್ಟ್‌ 10ರೊಳಗೆ ಮತ್ತೊಮ್ಮೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಮಾಡಲಿದೆ ಎಂದು ಜೀವನ್ ರಕ್ಷಾ ಅಂಕಿ ಅಂಶಗಳು ತಿಳಿಸಿವೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇದರ ಪ್ರಕಾರ ಆಗಸ್ಟ್ 10ರ ವೇಳೆಗೆ 1.26 ಮಿಲಿಯನ್ (12.6 ಲಕ್ಷ) ಹೊಸ ಕೇಸ್ ಒಳಗೊಂಡಂತೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 32.1 ಮಿಲಿಯನ್ (321 ಲಕ್ಷ) ತಲುಪುವ ಸಾಧ್ಯತೆ ಹೆಚ್ಚಾಗಿದ್ದು, ಜನರು ಆದಷ್ಟು ಮುಂಜಾಗ್ರತೆ ಕ್ರಮ ತೆಗದೆದುಕೊಳ್ಳಬೇಕಿದೆ.

ಇನ್ನೊಂದು ಅಘಾತಕಾರಿ ವಿಷಯ ವೆಂದರೆ ದೇಶದಲ್ಲಿ ಸಾವಿನ ಸಂಖ್ಯೆ 4.40 ಲಕ್ಷ ಮುಟ್ಟುವ ಸಾಧ್ಯತೆ ಇದ್ದು. ಕರ್ನಾಟಕದಲ್ಲಿ ಕೋವಿಡ್ ಸಂಖ್ಯೆ 29.35 ಲಕ್ಷ ಪ್ರಕರಣಗಳಾಗುವ ಸಾಧ್ಯತೆಯಿದೆ, ಆಗಸ್ಟ್ 10 ರೊಳಗೆ ರಾಜ್ಯದಲ್ಲಿ 37,275 ಸಾವಿನ ಸಂಖ್ಯೆ ಏರಿಕೆಯಾಗಿಲಿದೆಯಂತೆ.

ಭಾರತ ಮತ್ತು ಕರ್ನಾಟಕವು ಈವರೆಗೆ ಮಾಡಿದ ಉತ್ತಮ ಕಾರ್ಯಗಳು, ವಿಶೇಷವಾಗಿ ಸುಧಾರಿತ ಕಂಟೈನ್ ಮೆಂಟ್ ನಿರ್ವಹಣೆ ಮುಂದುವರಿಯಬೇಕಿದೆ. ಪ್ರತಿ ಜಿಲ್ಲಾಡಳಿತವು ಕೋವಿಡ್‌ನ 7 ದಿನಗಳ ಮೂವಿಂಗ್ ಗ್ರೋತ್ ರೇಟ್ (ಎಂಜಿಆರ್) ಶೇಕಡಾ 2 ಕ್ಕಿಂತ ಕಡಿಮೆಯಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜೀವನ್ ರಕ್ಷಾ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದ್ದಾರೆ.

ಕಳೆದ ವಾರ, ಕರ್ನಾಟಕದ 14 ಜಿಲ್ಲೆಗಳಲ್ಲಿ 7 ದಿನಗಳ ಎಂಜಿಆರ್ ಶೇಕಡಾ 1 ಕ್ಕಿಂತ ಕಡಿಮೆಯಿದ್ದರೆ, 15 ಜಿಲ್ಲೆಗಳಲ್ಲಿ ಎಂಜಿಆರ್ 1-2% ಇತ್ತು. ಕೊಡಗು ಜಿಲ್ಲೆಯಲ್ಲಿ ಮಾತ್ರ ಶೇ.3 ರಷ್ಟು ಕಡಿಮೆ ಎಂಜಿಆರ್ ಹೊಂದಿತ್ತು. ಇದು ಮುಂಬರುವ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.

ರಾಜ್ಯದ ಶೇ.80 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆಯುವವರೆಗೆ ಎಲ್ಲಾ ಜಿಲ್ಲೆಗಳು 7 ದಿನಗಳ ಎಂಜಿಆರ್ ಅನ್ನು ಶೇ,2 ಕ್ಕಿಂತ ಕಡಿಮೆ ಇದ್ದರೆ, ಕರ್ನಾಟಕವು ನಿಸ್ಸಂದೇಹವಾಗಿ ಮೂರನೇ ಅಲೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ಷ್ಮ ಕಂಟೈನ್‌ಮೆಂಟ್ ವಲಯಗಳು ಮತ್ತು ಹಳ್ಳಿಗಳಲ್ಲಿ , ಆರ್‌ಟಿ-ಪಿಸಿಆರ್ ಪರೀಕ್ಷೆ ಲಭ್ಯವಾಗುವಂತೆ ಮಾಡಬೇಕು. ರಾಪಿಡ್ ಆಂಟಿಜೆನ್ ಪರೀಕ್ಷೆಗಳ ಬದಲು ಸರಿಯಾದ ರೀತಿಯ ಜನರನ್ನು ಪರೀಕ್ಷಿಸುವುದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ