NEWSನಮ್ಮಜಿಲ್ಲೆ

ಪಿರಿಯಾಪಟ್ಟಣ: ಪುರಸಭೆಯಿಂದ ಬಡತನದ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳ ಕಡು ಬಡತನದ ಕುಟುಂಬಗಳಿಗೆ ಪುರಸಭಾ ನಿಧಿಯಿಂದ 5 ಲಕ್ಷ ರೂ. ಮೊತ್ತದ ಆಹಾರದ ಕಿಟ್‌ಗಳನ್ನು ಶಾಸಕ ಕೆ.ಮಹದೇವ್ ವಿತರಿಸಿದರು.

ಕೊರೊನಾ ಮಹಾಮಾರಿ ಅನೇಕ ವಲಯಗಳನ್ನು ಸಂಕಷ್ಟಕ್ಕೆ ದೂಡಿದ್ದು ಇದರಲ್ಲಿ ಸಂಘಟಿತ ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಆಡಳಿತಗಳು ಇವರ ನೆರವಿಗೆ ಬರಬೇಕು.

ಈನಿಟ್ಟಿನಲ್ಲಿ ಪಿರಿಯಾಪಟ್ಟಣ ಪುರಸಭೆಯ ಎಲ್ಲಾ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಕಡುಬಡವರನ್ನು ಗುರುತಿಸಿ ಅವರಿಗೆ ಹಣಕಾಸಿನ ನೆರವು ನೀಡುವ ಬದಲು ಆಹಾರ ಧಾನ್ಯಗಳನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ, ಈಗಾಲೆ ತಾಲೂಕು ಆಡಳಿತದ ವತಿಯಿಮದ ಆಶಾ, ಅಂಗನವಾಡಿ, ಅರ್ಚಕರು ಸೇರಿದಂತೆ ಅನೇಕರಿಗೆ ಪುಡ್‌ಕಿಟ್ ವಿತರಣೆ ಮಾಡಲಾಗಿದೆ ಎಂದು ಶಾಸಕ ಮಹದೇವ್‌ ತಿಳಿಸಿದರು.

ಪುರಸಭೆ ಅಧ್ಯಕ್ಷ ಮಂಜುನಾಥ್‌ಸಿಂಗ್ ಮಾತನಾಡಿ, ಕೊರೊನಾ ಅಲೆಯಲ್ಲಿ ಜನರು ದುಂದುವೆಚ್ಚಗಳನ್ನು ಕಡಿಮೆ ಮಾಡಿ ಇರುವ ಹಣವನ್ನು ಎಚ್ಚರಿಕೆಯಿಂದ ಸದುಪಯೋಗಪಡಿಸಿಕೊಳ್ಳಬೇಕು. ಜನರನ್ನು ಮನೆಯಲ್ಲಿ ಉಳಿಸಿ ರೋಗರುಜಿನ ಹರಡುವುದನ್ನು ತಪ್ಪಿಸುವುದು ಹರಸಾಹಸವೇ ಸರಿ, ಪುರಸಭೆ ಹಣದಿಂದ ಆಹಾರ ಕಿಟ್ ಖರೀದಿ ಪಟ್ಟಣದ ವ್ಯಾಪ್ತಿಯಲ್ಲಿ ಬಡವರನ್ನು ಗುರುತಿಸಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಪ್ರಸನ್ನ ಮಾತನಾಡಿ, ಸಾವಿರ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಉಚಿತ ಆಹಾರ ಕಿಟ್ ವಿತರಣೆಯನ್ನು ಕೊರೊನಾ ಸಂಕಷ್ಟದಲ್ಲಿ ಮುಳುಗಿರುವ ಮಡಿವಾಳ, ಸವಿತಾ ಸಮಾಜ, ಕುಂಬಾರ ಸಮುದಾಯ, ನೇಕಾರರು, ಅಕ್ಕಸಾಲಿಗರು, ವಾಹನ ಚಾಲಕರು.

ಹೀಗೆ ಇತರ ಸಮುದಾಯಗಳನ್ನು ಗುರುತಿಸಿ ಅವರಲ್ಲಿ ಕಡುಬಡವರಿಗೆ ಶಾಸಕರ ನಿರ್ದೇಶನದಂತೆ ಆಹಾರ ಕಿಟ್ಟ್‌ಗಳನ್ನು ನೀಡುತ್ತಿದ್ದು ಇವುಗಳ ಜೊತೆಗೆ ಉದ್ಯೋಗ ಪ್ರಮಾಣಪತ್ರ ನೀಡಬೇಕು ಎಂಬ ಶಾಸಕರು ಆದೇಶಿಸಿದ್ದಾರೆ. ಉದ್ಯೋಗ ಪ್ರಮಾಣಪತ್ರ ನೀಡಲಾಗುವುದು. ಕೊರೊನಾ ಸಂದರ್ಭದಲ್ಲಿ ಪಂಚಸೂತ್ರವನ್ನು ಅನುಸರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಆರೋಗ್ಯಾಧ್ಯಾಧಿಕಾರಿ ಡಾ.ಶರತ್‌ಬಾಬು, ಇಒ ಸಿ.ಆರ್.ಕೃಷ್ಣಕುಮಾರ್, ಮಾತನಾಡಿದರು. ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್.ವಿನೋದ್, ಪುರಸಭೆ ಸದಸ್ಯರಾದ ರವಿ, ಪಿ.ಸಿ.ಕೃಷ್ಣ, ಶಿವರಾಮೇಗೌಡ ಪ್ರಕಾಶ್‌ಸಿಂಗ್, ಪ್ರಸಾದ್, ಮಹೇಶ್, ನಿರಂಜನ್, ಮಹೇಶ್, ಆಶಾಪುಷ್ಪಲತಾ, ಆಶಾ, ರೇವತಿ, ಪ್ರಕಾಶ್, ಆರೋಗ್ಯ ನಿರೀಕ್ಷಕರಾದ ಪ್ರದೀಪ್, ಆದರ್ಶ, ಮುಖಂಡರಾದ ಅಣ್ಣಯ್ಯಶೆಟ್ಟಿ ಮತ್ತಿತರರು ಇದ್ದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?