ಬೆಂಗಳೂರು: ಕನ್ನಡದ ಕಿರುತೆರೆ ಹಾಗೂ ಚಿತ್ರನಟಿ ಸೌಜನ್ಯ ಗುರುವಾರ ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ (25) ಇಂದು ಬೆಳಗ್ಗೆ ಪಿಎಗೆ ತಿಂಡಿ ತರಲು ಕಳುಹಿಸಿ ಫ್ಯಾನಿಗೆ ತಮ್ಮ ವೇಲ್ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿಗೂ ಮುನ್ನ ಡೇತ್ ನೋಟ್ ಬರೆದಿಟ್ಟಿರುವ ಸೌಜನ್ಯ ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣವಲ್ಲ ಎಂದು ತಿಳಿಸಿದ್ದಾರೆ.
ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕೋವಿಡ್ 19 ನಿಂದ ಚಿತ್ರರಂಗದ ಚಟುವಟಿಕೆ ಸ್ಥಗಿತಗೊಂಡು ಅವಕಾಶ ಸಿಗದ ಕಾರಣ ಖಿನ್ನತೆಗೆ ಒಳಗಾಗಿ ಸೌಜನ್ಯ ಆತ್ಮಹತ್ಯೆಗೆ ಶರಣಾರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.