CrimeNEWSಸಿನಿಪಥ

ಸ್ಯಾಂಡಲ್‌ವುಡ್‌ನಲ್ಲಿ ಗಾಂಜಾ ನಶೆ: ಸತ್ತವ್ಯಕ್ತಿ ಬಗ್ಗೆ ಆರೋಪ ತರವಲ್ಲ ಎಂದ ದರ್ಶನ್‌

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಲೈಟ್ ಬಾಯ್ ನಿಂದ ಸಿನಿಮಾ ವೃತ್ತಿ ಆರಂಭಿಸಿ ಇಂದು ನಾಯಕ ನಟನಾಗಿ ಬೆಳೆಯುವವರೆಗೆ ಅಂದರೆ 26 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, ಡ್ರಗ್ಸ್ ಜಾಲದ ನಂಟು ನನ್ನ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ನಾನು ಯಾವ ಹೇಳಿಕೆಯೂ ನೀಡುವುದಿಲ್ಲ ಎಂದು ನಟ ದರ್ಶನ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ ಜಾಲ ನಂಟಿದೆ ಎಂಬ ಆರೋಪದ ಕೇಸಿಗೆ ಸಂಬಂಧಪಟ್ಟಂತೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ದರ್ಶನ್,  ಈ ಬಗ್ಗೆ ನಾನು ಯಾವ ಹೇಳಿಕೆಯೂ ನೀಡುವುದಿಲ್ಲ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಮಾಧ್ಯಮದವರು ಏನೇನು ಕಲ್ಪಿಸಿ, ಹಾಗೆಯೇ, ಹೀಗೆಯೇ, ಯಾವ ನಟರಾಗಿರಬಹುದು ಎಂದು ಪ್ರಶ್ನೆ ಮಾರ್ಕ್ ಹಾಕಿ ವರದಿ ಮಾಡಬೇಡಿ, ವಿಚಾರಣೆ ನಡೆಯಲಿ, ಸತ್ಯವಾಗಿದ್ದರೆ ಹೆಸರು ಬಹಿರಂಗವಾಗುತ್ತದೆ ಎಂದು ಮನವಿ ಮಾಡಿದರು

ಈ ನಡುವೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಈಗ ಪುರಾವೆ ನೀಡಲು ಸಿಸಿಬಿ ಕಚೇರಿ ಎದುರು ಸೋಮವಾರ ಇಂದ್ರಜಿತ್ ಲಂಕೇಶ್ ಹಾಜರಾಗಿ ಹೇಳಿಕೆ ನೀಡುತ್ತಿದ್ದಾರೆ.

ಇನ್ನು ನಟ ದಿವಂಗತ ಚಿರಂಜೀವಿ ಸರ್ಜ ಅವರ ಹೆಸರು ಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದರ್ಶನ್‌, ಅವರು ತೀರಿಕೊಂಡು ಕೇಲವ ಮೂರು  ತಿಂಗಳಾಗಿದೆ. ಈಗ ಅವರ ಬಗ್ಗೆ ಈ ಆರೋಪ ಮಾಡುವುದು ಸರಿಯಲ್ಲ.  ಒಬ್ಬ ವ್ಯಕ್ತಿ ಬದುಕಿರುವಾಗ ಏನೆ ಆರೋಪ ಮಾಡಿದರು ಅದನ್ನು ಸಮರ್ಥಿಸಿಕೊಳ್ಳಲು ಅವರಿರುತ್ತಾರೆ. ಆದರೆ ಅವರ ಕಾಲಾನಂತರ ಅವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.  ಒಂದು ವೇಳೆ ಡ್ರಗ್ ಆರೋಪದಲ್ಲಿ ಅಪ್ಪಿತಪ್ಪಿ ಅವರು ಅಪರಾಧಿ ಎಂದು ಸಾಬೀತಾಯಿತು ಎಂದಿಟ್ಟುಕೊಳ್ಳಿ, ಅವರನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡಿಸಲು ಆಗುತ್ತದೆಯೇ ಎಂದು ಕೇಳಿದರು.

ಒಳ್ಳೆಯವರು, ಕೆಟ್ಟವರು ಬರೀ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ ಎಲ್ಲಾ ಕಡೆ, ಪ್ರತೀ ಕ್ಷೇತ್ರದಲ್ಲಿಯೂ ಇರುತ್ತಾರೆ ಎಂದು ಹೇಳಿದ ದರ್ಶನ್ ತರಗತಿಯ ಉದಾಹರಣೆ ಕೊಟ್ಟರು. ಒಂದು ತರಗತಿಯಲ್ಲಿ ಚೆನ್ನಾಗಿ ಓದಿ ರ‍್ಯಾಂಕ್ ಪಡೆಯುವ ವಿದ್ಯಾರ್ಥಿ ಇರುತ್ತಾರೆ, ಸಾಧಾರಣ ಅಂಕ ಪಡೆಯುವವರು ಇರುತ್ತಾರೆ, ಶೂನ್ಯ ಮಾರ್ಕ್ಸ್ ತೆಗೆದುಕೊಳ್ಳುವರು ಕೂಡ ಇರುತ್ತಾರೆ, ಹಾಗೆಂದು ಇಡೀ ಕ್ಲಾಸ್ ನ ಮಕ್ಕಳು ದಡ್ಡರು, ಯಾರೂ ಸರಿ ಇಲ್ಲ ಎಂದು ಹೇಳಲಾಗುತ್ತದೆಯೇ, ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಉದ್ಯಮದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

1 Comment

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?