CrimeNEWSದೇಶ-ವಿದೇಶ

ಗಂಡನ ಕೊಂದು ಬೆಡ್‌ ರೂಮ್‌ನಲ್ಲೇ ಸಮಾಧಿ ಮಾಡಿದ ಹೆಂಡತಿ

ವಿಜಯಪಥ ಸಮಗ್ರ ಸುದ್ದಿ

ಅಗರ್ತಲಾ: ತ್ರಿಪುರ ರಾಜ್ಯದ ರಾಜಧಾನಿ ಮತ್ತು ಹೊರಾ ನದಿಯ ದಡದಲ್ಲಿರುವ ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಅವರೇ ಮಲಗುತ್ತಿದ್ದ ಕೋಣೆಯಲ್ಲಿ ಸಮಾಧಿ ಮಾಡಿ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಪತಿಯನ್ನು ಕೊಲೆ ಮಾಡಿದ ಪತ್ನಿಭಾರತಿ ರೇಂಗ್ (25) ಎಂಬಾಕೆ. 30 ವರ್ಷದ ಸಂಜಿತ್ ರೇಂಗ್ ಕೊಲೆಯಾದವ. ಭಾರತಿ ತನ್ನ ಗಂಡ ಸಂಜಿತ್ ಅನ್ನು ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿ ತನ್ನ ಬೆಡ್ ರೂಮಿನಲ್ಲೇ ಸಮಾಧಿ ಮಾಡಿ, ಸಂಜೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.

ಭಾರತಿ ನೀಡದ ಹೇಳಿಕೆ ಮೇರೆಗೆ ಪೊಲೀಸರು ಧಲೈ ಜಿಲ್ಲೆಯ ಗಂಡಚೆರಾ ಉಪವಿಭಾಗದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಪತಿಯ ಶವ ಬೆಡ್‍ರೂಮಿನಲ್ಲಿ ದೊರಕಿದೆ.

ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಭಾರತಿ ಪತಿಯನ್ನು ಹತ್ಯೆ ಮಾಡಲು ಕಾರಣವೇನು ಎಂದು ಬಾಯಿಬಿಟ್ಟಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ದಂಪತಿಗೆ ಆರು ವರ್ಷದ ಮಗಳಿದ್ದು, ಭಾರತಿಯನ್ನು ಎಷ್ಟೇ ವಿಚಾರಣೆ ಮಾಡಿದರೂ ಆಕೆ ಗಂಡನನ್ನು ಯಾಕೆ ಕೊಂದೆ ಎಂದು ಹೇಳುತ್ತಿಲ್ಲ. ಈ ಸಂಬಂಧ ತನಿಖೆ ಮುಂದುವರಿಸಿರುವ ಪೊಲೀಸರು ಬೇರೆಬೇರೆ ಪೊಲೀಸ್‌ ಧಾಟಿಯಲ್ಲಿ ಆಕೆಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ