ವಿಯೆಟ್ನಾಂ: ಬಳಸಿ ಬಿಸಾಕಿದ್ದ ಕಾಂಡೋಮ್ಗಳನ್ನು ಒಂದೆಡೆ ಸಂಗ್ರಹಿಸಿ, ಅವುಗಳನ್ನು ತೊಳೆದು ಮತ್ತೆ ಮಾರಾಟ ಮಾಡಲು ಕೂಡಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ಮಾಡಿ ಅವಘಲನ್ನು ವಶಕ್ಕೆ ಪಡೆದಿರುವ ಘಟನೆ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 360 ಕೆಜಿ ( ಅಂದಾಜು 3,45,000 ಕಾಂಡೋಮ್ಗಳು) ಕಾಂಡೋಮ್ಗಳನ್ನು ಜಪ್ತಿ ಮಾಡಿದ್ದಾರೆ. ಜತೆಗೆ, ಗೋದಾಮಿನಲ್ಲಿದ್ದ ಮಹಿಳೆ ಒಬ್ಬರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಅಂದ ಹಾಗೆ, ಇಂಥ ಮನೆಹಾಳು ಐಡಿಯಾಗೆ ಇಳಿದಿದ್ದ ಕಿರಾತಕರು ಬಳಸಿ ಬಿಸಾಕಿದ್ದ ಕಾಂಡೋಮ್ಗಳನ್ನು ಸಂಗ್ರಹಿಸಿ ಅವುಗಳನ್ನು ಬಿಸಿನೀರಿನಲ್ಲಿ ತೊಳೆದು ಮೊದಲು ಶುದ್ಧ ಮಾಡುತ್ತಿದ್ದರಂತೆ. ಬಳಿಕ ಕೋಲಿನ ಸಹಾಯದಿಂದ ಅವುಗಳನ್ನು ಮೂಲಾಕಾರಕ್ಕೆ ತಂದು ಬಳಿಕ ಹೊಚ್ಚಹೊಸ ಪ್ಯಾಕೇಟ್ನಲ್ಲಿ ಹಾಕಿ ಮಾರಾಟಕ್ಕೆ ಅಣಿಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Super busines