Please assign a menu to the primary menu location under menu

CrimeNEWSನಮ್ಮಜಿಲ್ಲೆಸಿನಿಪಥ

ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆ ಪ್ರಕರಣಕ್ಕೆ ಬಿಗ್ ಟ್ವೀಸ್ಟ್‌

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ.ಗಳ ವಂಚನೆಗೆ ಯತ್ನಿಸಿದ ಪ್ರಕರಣ ಪೊಲೀಸರಿಗೆ ಅಷ್ಟೇನೂ ಸವಾಲು ಅನ್ನಿಸಿಲ್ಲ. ಆದರೆ, ನಟ ದರ್ಶನ್ ತಮ್ಮ ಆಪ್ತ ವಲಯದಲ್ಲಿರುವ ನಂಬಿಕೆ ದ್ರೋಹಿ ಯಾರು ಎಂಬ ಹುಡುಕಾಟ ಶುರು ಮಾಡಿದ್ದಾರೆ.

ಈ ಸಂಬಂಧ ಮೈಸೂರಿನಲ್ಲಿ ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ದರ್ಶನ್, ನಿರ್ಮಾಪಕ ಉಮಾಪತಿಯತ್ತ ಬೊಟ್ಟು ಮಾಡಿದ್ದಾರೆ. ನಿನ್ನೆ ಏಕಾಏಕಿ ಮೈಸೂರಿನ ಎನ್.ಆರ್. ಉಪವಿಭಾಗ ಪೊಲೀಸ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ದರ್ಶನ್, ತನ್ನ ಹೆಸರಿನ ಆಸ್ತಿಗೆ ಸಂಬಂಧಪಟ್ಟ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ಬ್ಯಾಂಕ್ ಸಾಲ ಪಡೆಯಲು ಯತ್ನಿಸಲಾಗಿದೆ ಎಂದು ತಿಳಿಸಿದ್ದರು.

ಇನ್ನು ನಿನ್ನೆ ಪೊಲೀಸರು ಆರೋಪಿ ಅರುಣಾ ಕುಮಾರಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಇಂದು ಸಿಆರ್ ಪಿಸಿ 41/ಎ ಅನ್ವಯ ನೋಟಿಸ್ ನೀಡಿ ಬಿಟ್ಟು ಕಳುಹಿಸಿದ್ದು, ಯಾವುದೇ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬರಬೇಕು. ಸಾಕ್ಷ್ಯನಾಶ ಮಾಡಬಾರದು ಅಂತೆಲ್ಲ ಷರತ್ತು ವಿಧಿಸಲಾಗಿದೆ.

ಆರೋಪಿ ಅರುಣಾ ಕುಮಾರಿ ಮತ್ತು ದೂರುದಾರ ಹರ್ಷ ಮೆಲಂಟಾ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಅದಕ್ಕೆ ಸಂಬಂಧಪಟ್ಟ ಸಿಸಿ ಕ್ಯಾಮರಾ ಫುಟೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಇತ್ತ ನಟ ದರ್ಶನ್ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು ಒಂದು ಗಂಟೆ ಸುದೀರ್ಘವಾಗಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಇದೆಲ್ಲವೂ ಶುರುವಾಗಿದ್ದು ಏಪ್ರಿಲ್ 9ರಂದು. ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೆಲಂಟಾ ಬ್ಯಾಂಕ್ ಲೋನ್‍ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ದರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ದರ್ಶನ್ ಹೇಳಿದರು.

ಇನ್ನು ಸುದ್ದಿಗೋಷ್ಠಿ ಉದ್ದಕ್ಕೂ ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೆಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು.

ವಾಟ್ಸಪ್ ಚಾಟ್, ಆಡಿಯೋ ವೈರಲ್
ಇನ್ನು ವಂಚನೆ ಯತ್ನ ಕಥೆಯೊಳಗಿನ ಮತ್ತೊಂದು ಉಪಕತೆಯನ್ನೂ ದರ್ಶನ್ ಜಗಜ್ಜಾಹೀರು ಮಾಡಿದ್ರು. ಆರೋಪಿ ಅರುಣಾಕುಮಾರಿ ತನ್ನ ಪುತ್ರನೊಂದಿಗೆ ಈಗ ಬೆಂಗಳೂರಿನಲ್ಲಿದ್ದಾಳೆ. ಗಂಡನಿಂದ ದೂರವಾಗಿ ಆರೇಳು ವರ್ಷಗಳಾಗಿವೆ. ಇನ್ನು ಅಚ್ಚರಿಯ ವಿಚಾರ ಏನಂದರೆ, ಆಕೆಯ ಗಂಡ ಕುಮಾರ್ ಪ್ರಕರಣದ ದೂರುದಾರ ಹರ್ಷ ಮೆಲಂಟಾ ಮಾಲೀಕತ್ವದ ಹೋಟೆಲ್‍ನಲ್ಲೇ ಕೆಲಸ ಮಾಡುತ್ತಿದ್ದಾರೆ.

ಸುದ್ದಿಗೋಷ್ಠಿ ಮಧ್ಯ ಮಾತನಾಡಿದ ಕುಮಾರ್, ನನ್ನ ಹೆಂಡತಿಯಾಗಿದ್ದ ಅರುಣಕುಮಾರಿ ಓದಿರೋದೇ ಪಿಯುಸಿ. ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆದ್ಲೋ ಗೊತ್ತಿಲ್ಲ ಅಂತ ಮುಗ್ಧತೆ ತೋರಿಸಿದರು. ಇದೆಲ್ಲದರ ನಡುವೆ ಉಮಾಪತಿ ಮಹಿಳೆಯೊಂದಿಗೆ ಮಾಡಿರುವ ವಾಟ್ಸಪ್ ಚಾಟ್, ಆಡಿಯೋ, ಅರುಣಾ ಕುಮಾರಿ ದರ್ಶನ್ ತೋಟಕ್ಕೆ ಹೋದ ದೃಶ್ಯ ಎಲ್ಲವು ವೈರಲ್ ಆಗಿದೆ.

ಸುದ್ದಿಗೋಷ್ಠಿಯಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಂಬಂಧಿ ಧೀರಜ್ ಪ್ರಸಾದ್, ಸ್ನೇಹಿತರಾದ ನಾಗರಾಜ್, ಶರ್ಮಾ, ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ಇದ್ದರು.

Leave a Reply

error: Content is protected !!
LATEST
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು KSRTC ಮಂಡ್ಯ: ಚಾಲಕನ ಮೇಲೆ ವ್ಯಕ್ತಿ ಹಲ್ಲೆ -ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಯುವ ನಾಯಕತ್ವ ತರಬೇತಿ ಶಿಬಿರ- ವಿಶೇಷ ಶಿಬಿರಗಳಿಂದ ನಾಯಕತ್ವ ಕೌಶಲ್ಯ ವೃದ್ಧಿ ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ...