ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಬೀಡನಹಳ್ಳಿಯ ಶ್ರೀ ನಂದಿ ಬಸವೇಶ್ವರ ಸ್ವಾಮಿಯ 4ನೇ ಬಂಡಿ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲಿ ಬಂಡಿ ಮಹೋತ್ಸವ ಸಾಯಂಕಾಲ 4ಗಂಟೆಯಲ್ಲಿ ಮೊಳ್ಳೆ ಕೆಂಪಣ್ಣನವರ ಕರಿಗೌಡರ ಕುಟುಂಬದವರು ಮತ್ತು ದೊಡ್ಡನಿಂಗಯ್ಯನವರ ಕುಟುಂಬದವರು ಬಂಡಿ ಮತ್ತು ಎತ್ತುಗಳನ್ನು ಅಲಂಕರಿಸಿ ಗ್ರಾಮದ ರಾಜಬೀದಿಯಲ್ಲಿ ಬಡಿಗಳನ್ನು ಓಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಬಂಡಿ ಓಡಿಸುವ ಉತ್ಸವದಲ್ಲಿ ಭಾಗವಹಿಸಿದ್ದರು.
ಬಂಡಿಗಳ ಓಡಿಸುವುದನ್ನು ನೋಡುವುದೆ ಒಂದು ನಯನ ಮನೋಹರವಾಗಿತ್ತು. ಇದಕ್ಕೂ ಮುನ್ನ ಬಂಡಿಗಳಿಗೆ ಶ್ರೀಸ್ವಾಮಿಯ ಅರ್ಚಕರಾದ ಮಹದೇವಪ್ಪ ಮತ್ತು ಶ್ರೀ ಸ್ವಾಮಿ ದೇವರ ಗುಡ್ಡಪ್ಪನವರದಾ ನಂಜುಂಡೇಗೌಡ ಮತ್ತು ರಾಜೇಶ್ ಅವರು ಮಂಗಳ ವಾದ್ಯಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿದರು.