NEWSನಮ್ಮಜಿಲ್ಲೆನಮ್ಮರಾಜ್ಯ

ಬಿಎಂಟಿಸಿಯ ಕರಾಳ ಮುಖ ಭಾಗ-2: ಪಾಳಿ ರದ್ದುಪಡಿಸಿ ನೌಕರರ ಜೀವ ಹಿಂಡುತ್ತಿರುವ ಅಧಿಕಾರಿಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಬಿಎಂಟಿಸಿ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನದಿಂದಾಗಿ  ಖಾಸಗಿ ಕ್ಯಾಬ್ ಗಳಿಗೆ ಲಾಭ

  • ನಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಬಿಎಂಟಿಸಿ 

ಬೆಂಗಳೂರು: ಕೊರೊನಾ ಸೋಂಕನ್ನೆ ನೆಪವಾಗಿಟ್ಟುಕೊಂಡ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಚಯಿಸಿರುವ  ಹೊಸ ಪಾಳಿ ವ್ಯವಸ್ಥೆಯಿಂದ ಚಾಲಕ ಮತ್ತು ನಿರ್ವಾಹಕರು ದಿನಕ್ಕೆ ಹನ್ನೆರಡು ತಾಸು ದುಡಿದು ಹೈರಾಣ ಆಗುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನದಿಂದಾಗಿ ಖಾಸಗಿ ಕ್ಯಾಬ್ ಗಳಿಗೆ ಲಾಭ ಮಾಡಿಕೊಟ್ಟು ಬಿಎಂಟಿಸಿ ನಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.

ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರಗೆ ಎರಡನೇ ಪಾಳಿ, ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆ ವರೆಗೆ ಜನರಲ್ ಪಾಳಿ, ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ಮೂರನೇ ಪಾಳಿಯನ್ನು ಪರಿಚಯಿಸಿತ್ತು. ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೂರು ಪಾಳಿಯ ಬದಲಿಗೆ ಎರಡು ಪಾಳಿ ಪರಿಚಯಿಸಿತ್ತು.

ಹೊಸ ಪಾಳಿ ನೀತಿಯಿಂದಾಗಿ ಚಾಲಕರು ಮತ್ತು ನಿರ್ವಾಹಕರು ಪ್ರತಿ ನಿತ್ಯ ಎಂಟು ತಾಸು ಕೆಲಸದ ಬದಲಿಗೆ ಹನ್ನೆರಡು ತಾಸು ಕೆಲಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಹನ್ನೆರಡು ತಾಸು ದುಡಿಸಿಕೊಂಡರೂ ಹೆಚ್ಚುವರಿ ಒಂದು ರೂಪಾಯಿಯನ್ನೂ ನೀಡುತ್ತಿಲ್ಲ.

ಪಾಳಿ ರದ್ದು ಮಾಡಿ ಪಾಪಿಗಳು ಚಾಲಕ ಮತ್ತು ನಿರ್ವಾಹಕರಿಂದ ಹೆಚ್ಚುವರಿ ಸಮಯ ದುಡಿಸಿಕೊಂಡು ಬಿಎಂಟಿಸಿ ಸಂಸ್ಥೆಯನ್ನು ಶ್ರೀಮಂತಗೊಳಿಸುವ ಕನಸು ಕಟ್ಟಿಕೊಂಡಿರುವ ಪಾಪಿ ಅಧಿಕಾರಿಗಳ ಅವೈಜ್ಞಾನಿಕ ನೀತಿಯಿಂದಾಗಿ ಬಿಎಂಟಿಸಿ ಮತ್ತಷ್ಟು ನಷ್ಟದ ಹೊರಗೆ ಸಿಕ್ಕಿ ನಲಗುತ್ತಿದೆ.

ಜತೆಗೆ ಬಿಎಂಟಿಸಿ ಸಿಬ್ಬಂದಿಯು ಹೆಚ್ಚುವರಿ ನಾಲ್ಕು ತಾಸು ಪುಕ್ಕಟ್ಟೆಯಾಗಿ ದುಡಿಯವಂತಾಗಿದೆ. ಇದರ ಎಲ್ಲಾ ಲಾಭ ಊಬರ್, ಓಲಾ ಖಾಸಗಿ ವಾಹನಗಳ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ಬಿಎಂಟಿಸಿ ಅಧಿಕಾರಿಗಳ ಈ ಅವೈಜ್ಞಾನಿಕ ನೀತಿ ವಿರುದ್ಧ ಚಾಲಕರು ಮತ್ತು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ಮೂರು ಪಾಳಿ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಬಿಎಂಟಿಸಿ ಬಸ್ ಸೇವೆ ಆರಂಭವಾಗುತ್ತಿತ್ತು. ಪ್ರತಿ ನಿತ್ಯ 6500 ಬಸ್‌ಗಳು ಸಂಚರಿಸುತ್ತಿದ್ದವು. ಮೂರು ಪಾಳಿಯಲ್ಲಿ 35 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದಾಗಿ ಕಡಿಮೆ ಬಸ್ ಗಳಿಂದ ಹೆಚ್ಚು ಟ್ರಿಪ್ ಮಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚು ಸೇವೆ ಜತೆಗೆ ಅಷ್ಟೇ ಪ್ರಮಾಣದಲ್ಲಿ ಹಣವನ್ನು ಗಳಿಸುತ್ತಿತ್ತು.

ಮೊದಲ ಪಾಳಿ ಯಾಕೆ ರದ್ದು ? ಇದೀಗ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಪರಿಚಯಿಸಿದ್ದ ಮೊದಲ ಶಿಫ್ಟ್ ರದ್ದು ಮಾಡಲಾಗಿದೆ. ಬೆಳಗಿನ ಜಾವ ಸಂಚರಿಸುತ್ತದ್ದ ಬಸ್‌ಗಳನ್ನು ಅನಿವಾರ್ಯವಾಗಿ ನಿಲ್ಲಿಸಲಾಗಿದೆ.

ಬೆಳಗ್ಗೆ ತರಕಾರಿ ಮಾರುಕಟ್ಟೆಗಳಿಗೆ ಹೋಗುವವರು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕಾರ್ಖಾನೆಗಳಿಗೆ ಹೋಗುವರು ಬಿಎಂಟಿಸಿ ಬಸ್ ಗಳನ್ನೇ ನಂಬಿಕೊಂಡಿದ್ದರು. ಕೊರೊನಾ ನೆಪದಲ್ಲಿ ಬೆಳಗಿನ ಪಾಳಿ ರದ್ದು ಪಡಿಸಿರುವುದರಿಂದ ಅನಿವಾರ್ಯವಾಗಿ ಜನರು ಅನ್ಯ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬಿತರಾಗಿದ್ದಾರೆ.

ಇದರಿಂದ ಬಿಎಂಟಿಸಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಬಿಎಂಟಿಸಿ ಸಿಬ್ಬಂದಿಯಿಂದ ಹೆಚ್ಚುವರಿ ದುಡಿಮೆಯಿಂದ ಹೆಚ್ಚು ಲಾಭ ಮಾಡುವ ಅಧಿಕಾರಿಗಳ ಅಜ್ಞಾನ ಆಲೋಚನೆಯಿಂದಾಗಿ ಬಿಎಂಟಿಸಿ ನಷ್ಟ ಅನುಭವಿಸುವಂತಾಗಿದೆ ಎಂದು  ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಪಾಳಿ ಪದ್ಧತಿ ರದ್ದು ಮಾಡುವುದರಿಂದ ಬಿಎಂಟಿಸಿಗೆ ಲಾಭ ಅಗಲ್ಲ. ಬೆಳಗ್ಗೆ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡದ ಕಾರಣ ಓಲಾ, ಊಬರ್ ಮತ್ತು ಆಟೋಗಳ ಓಡಾಟ ಜಾಸ್ತಿಯಾಗಿದೆ. ಬಹುತೇಕ ಪ್ರಯಾಣಿಕರು ಅನಿವಾರ್ಯವಾಗಿ ಸ್ವಂತ ವಾಹನ ಮೊರೆ ಹೋಗುವಂತಾಗಿದೆ. ಇದರಿಂದ ಬೆಳಗ್ಗೆ ಎಲ್ಲಾ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ ಬೆಳಗಿನ ವೇಳೆ ಟ್ರಾಫಿಕ್ ಜಾಮ್ ಆಗಲು ಬಿಎಂಟಿಸಿ ಅಧಿಕಾರಿಗಳ ದುರಾಡಳಿತವೇ ಕಾರಣ. ಕೊರೊನಾ ಸೋಂಕು ತೀರಾ ಕಡಿಮೆಯಾಗಿದೆ. ಎಲ್ಲ ಸೇವೆ ಶೇ. 100 ರಷ್ಟ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಆದರೆ ಬಿಎಂಟಿಸಿ ಅಧಿಕಾರಿಗಳು ಕೊರೊನಾ ನೆಪದಲ್ಲಿ ಇನ್ನೂ ಕುಂಭಕರ್ಣ ನಿದ್ದೆಯಲ್ಲೇ ಬಿದ್ದುಕೊಂಡಿದ್ದಾರೆ.

ಅಧಿಕಾರಿಗಳ ಈ ನಡೆಯಿಂದ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಜತೆಗೆ ಅರ್ಥಿಕವಾಗಿ ಬಿಎಂಟಿಸಿಗೆ ನಷ್ಟವಾಗುತ್ತಿದೆ. ಒಂದು ವಾಹನ ಅತಿ ಹೆಚ್ಚು ಸಲ ಸಂಚರಿಸಿದರೆ ಮಾತ್ರ ಹೆಚ್ಚು ಲಾಭ ಗಳಿಸಲು ಸಾಧ್ಯ ಎಂಬ ಮೂಲ ಸತ್ಯವನ್ನೇ ಈ ದುರುಳ ಅಧಿಕಾರಿಗಳು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ