ಕೊಳ್ಳೇಗಾಲ: ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮಾಜಿ ಶಾಸಕರಾದ ಎಸ್.ಬಾಲರಾಜ್, ಎ.ಆರ್ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಯವರ ನೇತೃತ್ವದಲ್ಲಿ “ಸೈಕಲ್ ಜಾಥಾ” ಹಮ್ಮಿಕೊಳ್ಳಲಾಗಿತ್ತು.
ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಗಣಪತಿ ದೇವಸ್ಥಾನದಿಂದ ತಾಲೂಕು ಕಚೇರಿ ವರೆಗೆ ಹಾಗೂ ಯಳಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ತಾಲೂಕು ಕಚೇರಿಯ ವರೆಗೆ ಕಾರ್ಯಕರ್ತರು “ಸೈಕಲ್ ಜಾಥಾ” ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಇಂತಹ ಜನವಿರೋಧಿ ಕೆಟ್ಟ ಸರ್ಕಾರವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಛೀಮಾರಿ ಹಾಕಿದ ಅವರು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಪಂ ಮಾಜಿ ಅಧ್ಯಕ್ಷರು ಹಾಗೂ ಉಸ್ತುವಾರಿಗಳೂ ಆದ ಮರೀಗೌಡ, ಹಿರಿಯ ಮುಖಂಡ ಹಾಗೂ ಡಿಸಿಸಿ ವಕ್ತಾರರೂ ಆದ ವಡಗೆರೆ ದಾಸ್, ಕ್ರಿಯಾಶೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ ಚಂದ್ರು, ತೋಟೇಶ್, ಜಿಪಂ ಸದಸ್ಯರಾದ ಜೆ.ಯೋಗೀಶ್, ಕೆ.ಪಿ ಸದಾಶಿವ ಮೂರ್ತಿ, ಉಪ್ಪಾರ ನಿಮಗದ ಮಾಜಿ ಅಧ್ಯಕ್ಷರಾದ ಮಧುವನಹಳ್ಳಿ ಶಿವಕುಮಾರ್, ನಗರಸಭಾ ಸದಸ್ಯರಾದ ಶಾಂತರಾಜು, ರಾಘವೇಂದ್ರ, ರಮೇಶ್, ಹರ್ಷ.
ಪಪಂ ಸದಸ್ಯರಾದ ಮಲ್ಲಯ್ಯ, ಮಲ್ಲು, ಮಹೇಶ್, ರಂಗನಾಥ್, ಮಹದೇವನಾಯ್ಕ, ಮುಖಂಡರಾದ ಮುಡಿಗುಂಡ ಶಾಂತರಾಜು, ಆಲ್ದೂರ್ ರಾಜಶೇಖರ ಮೂರ್ತಿ, ಕೃಷ್ಣಾಪುರ ದೇವರಾಜು, ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ: ಮಹದೇವಸ್ವಾಮಿ ಎನ್. ಹೊಂಗನೂರು