NEWSನಮ್ಮಜಿಲ್ಲೆರಾಜಕೀಯ

ಮತಗಟ್ಟೆ ಅಧಿಕಾರಿಗಳಿಗೆ ಹಾವೇರಿ-ಬ್ಯಾಡಗಿ-ಹಾನಗಲ್‍ನಲ್ಲಿ ಮೊದಲ ಹಂತದ ತರಬೇತಿ

ಉಪ ಚುನಾವಣೆ : ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಿ  l  ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಮುಕ್ತ ಹಾಗೂ ಪಾರದರ್ಶಕ ಮತದಾನ ಪ್ರಕ್ರಿಯೆಗೆ ಮತಗಟ್ಟೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ. ಆಯೋಗದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ ನೀಡಿದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್‍ನಲ್ಲಿ ಆಯೋಜಿಸಲಾದ ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ಮೊದಲ ಸುತ್ತಿನ ಚುನಾವಣಾ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಅವರು ತರಬೇತಿಗೆ ನಿಯೋಜಿತ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ನಿಯೋಜಿತಗೊಂಡಿರುವ ತಾವು ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಚುನಾವಣಾ ಆಯೋಗದ ಕಾಲಕಾಲದ ನಿಯಮಾವಳಿಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಯಾವುದೇ ಸಂಶಯಗಳು ಉಂಟಾದರೆ ತರಬೇತಿ ಅವಧಿಯಲ್ಲಿ ಸ್ಪಷ್ಟಪಡಿಸಿಕೊಳ್ಳಬೇಕು. ಯಾವುದೇ ಗೊಂದಲ ಹಾಗೂ ತಪ್ಪುಗಳು ಇಲ್ಲದಂತೆ ಅತ್ಯಂತ ನಿಖರವಾಗಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿ, ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುವವರಿಗೆ ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಅರಿವಿರಬೇಕು.

ಇವಿಎಂ ಮತ್ತು ವಿವಿಪ್ಯಾಟ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ಚುನಾವಣಾ ಏಜೆಂಟರುಗಳ ನೇಮಕ, ಮತಗಟ್ಟೆ ವ್ಯಾಪ್ತಿ ಗುರುತಿಸುವಿಕೆ, ಮತದಾನಕ್ಕೆ ಮತದಾರರ ಗುರುಪತ್ರ ಪರಿಗಣಿಸುವಿಕೆ, ಮತದಾನದ ಗೌಪ್ಯಕತೆ ಕಾಪಾಡುವುದು ಸೇರಿದಂತೆ ಅತ್ಯಂತ ಪಾರದರ್ಶಕವಾಗಿ ಪಕ್ಷಾತೀತವಾಗಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮತಗಟ್ಟೆಗಳಿಗೆ ತಲುಪಿದ ನಂತರ ಎಲ್ಲ ಲಕೋಟೆಗಳನ್ನು ದಾಖಲೆಗಳನ್ನು ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಕಡ್ಡಾಯವಾಗಿ ಅಣುಕು ಮತದಾನ ಮಾಡಬೇಕು. ಮತದಾನ ಕ್ರಮಬದ್ಧವಾಗಿ ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಪ್ರತಿ 2 ಗಂಟೆಗೆ ಆದ ಮತದಾನವನ್ನು ದಾಖಲಿಸಿಕೊಂಡು ಎಸ್‍ಎಂಎಸ್ ಕಳಿಸಬೇಕು.

ಮತಯಂತ್ರದ ಯಾವುದೇ ಘಟಕ ಕಾರ್ಯನಿರ್ವಹಿಸದಿದ್ದಲ್ಲಿ ಸೆಕ್ಟರ್ ಆಫಿಸರ್‍ಗಳಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು. ಮತದಾನದ ಸಂದರ್ಭದಲ್ಲಿ ಸಿಯು ಹಾಗೂ ಬಿಯು ಬದಲಾವಣೆ ಮಾಡುವ ಸಂದರ್ಭದಲ್ಲಿ ಹೊಸದಾಗಿ ಅಳವಡಿಸಿ ಪ್ರತಿ ಅಭ್ಯರ್ಥಿಗೆ ಒಂದು (ನೋಟಾ ಸಹಿತ) ಮತ ಹಾಕಿ ಅಣಕು ಮತದಾನ ಪೂರ್ಣಗೊಳಿಸಬೇಕು.

ಸಂಜೆ 7 ಗಂಟೆಯ ನಂತರ ಮತದಾನಕ್ಕಾಗಿ ಮತಗಟ್ಟೆ ಹೊರಗೆ ಸರದಿಯಲ್ಲಿರುವ ಮತದಾರರಿಗೆ ಕೊನೆಯ ಮತದಾರನಿಂದ ಪ್ರಾರಂಭಿಸಿ ಚೀಟಿಯನ್ನು ನೀಡಿ ಮತದಾನಕ್ಕೆ ಅವಕಾಶ ಮಾಡಿಕೋಡಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಗಂಡು ಮತ್ತು ಹೆಣ್ಣು ಮತದಾರರ ಅಂಕಿಸಂಖ್ಯೆ ದಾಖಲಿಸಿಬೇಕು. ಪುರುಷ ಹಾಗೂ ಮಹಿಳಾ 2 ಗಂಟೆಗಳಿಗೊಮ್ಮೆ ಮತದಾರರ ಸಂಖ್ಯೆಯನ್ನು ಪಿ.ಆರ್.ಓ ಗಮನಕ್ಕೆ ತರಬೇಕು. ಕಂಟ್ರೋಲ್ ಯುನಿಟ್‍ದಲ್ಲಿ ತಪ್ಪು ಸಂದೇಶ ಬಂದಲ್ಲಿ ತಕ್ಷಣ ಪಿಆರ್‍ಓ ಗಮನಕ್ಕೆ ತರಬೇಕು ಎಂದು ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದರು.

ಪಿಆರ್‍ಓಗಳು ಹಾಗೂ ಎಪಿಆರ್‍ಓಗಳು ಪಿಆರ್‍ಓ ದಿನಚರಿ ಹಾಗೂ ಪಿಆರ್‍ಓ ಘೋಷಣೆ ಎರಡೂ ಮಹತ್ವವಾದವುಗಳು ಅವುಗಳನ್ನು ಸರಿಯಾಗಿ ಭರ್ತಿಮಾಡಬೇಕು. ಮತದಾರರ ಲೆಕ್ಕಪತ್ರ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ನೀಡಿದ ದಾಖಲಾತಿಗಳು ಹಾಗೂ ಮಶಿನ್‍ನಲ್ಲಿರುವ ದಾಖಲಾತಿಗಳು ಸರಿಯಾಗಿರಬೇಕು. ನಿಖರ ಹಾಗೂ ಸ್ಪಷ್ಟ ಮಾಹಿತಿ ನೀಡಬೇಕು. ಒಂದು ವೇಳೆ ತಪ್ಪಾದಲ್ಲಿ ನೇರವಾಗಿ ನೀವೆ ಹೊಣೆಯಾಗಿರುತ್ತೀರಿ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಎಲ್ಲ ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡವರಿಗೆ ವಿದ್ಯುನ್ಮಾನ ಮತಯಂತ್ರದ ಕುರಿತಂತೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ವಿವರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಚುನಾವಣಾ ತರಬೇತಿಯ ನೋಡಲ್ ಅಧಿಕಾರಿಗಾಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂದಾನೆಪ್ಪ ವಡಗೇರಿ, ತಹಶೀಲ್ದಾರ ಗಿರೀಶ ಸ್ವಾದಿ, ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಸವಣೂರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಲ್ಲಪ್ಪ ಇತರರು ಉಪಸ್ಥಿತರಿದ್ದರು.

ಹಾವೇರಿಯ ಹುಕ್ಕೇರಿಮಠ ಕಾಲೇಜಿನಲ್ಲಿ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಲ್ಲೇಶಪ್ಪ ಹುಲ್ಯಾಳ, ಬಸವರಾಜ ಮಮದಾಪುರ, ಬಸವರಾಜ ಕೋರಿ, ರಮೇಶ ಕೆ.ಸಿ., ನಾಗರಾಜ ನಡುವಿನಮಠ, ಚಿದಾನಂದ ಜೇಡಿಮಠ, ಓಂಪ್ರಕಾಶ ಯತ್ನಾಳ, ಪಂಚಾಕ್ಷರಿ ಮೂರಾಮಟ್ಟಿ, ಎಸ್.ಎಸ್.ಮರಳಿಹಳ್ಳಿ, ಗೀತಾ ಸುತ್ತಕೋಟಿ, ನಟರಾಜ ಬಿದರಿ, ನಾಗರಾಜ ಹೊಸಳ್ಳಿ ಅವರು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ