NEWSನಮ್ಮಜಿಲ್ಲೆ

ಬಿಎಂಟಿಸಿಯ ಕರಾಳ ಮುಖ ಭಾಗ-1: ನಾಲ್ಕು ತಾಸು ಹೆಚ್ಚುವರಿ ದುಡಿಮೆ- ನೌಕರರು ಹೈರಾಣು

ವಿಜಯಪಥ ಸಮಗ್ರ ಸುದ್ದಿ
  • ನಾಲ್ಕು ತಾಸು ಹೆಚ್ಚುವರಿ ದುಡಿಸಿಕೊಂಡರೂ  ಐದು ರೂಪಾಯಿಯನ್ನು ಕೂಡ ಹೆಚ್ಚುವರಿ ವೇತನ ನೀಡದ ಸಂಸ್ಥೆ

  • ಬಿಎಂಟಿಸಿ ಈ ನಿರ್ಧಾರದಿಂದಾಗಿ ಚಾಲಕರು ಮತ್ತು ನಿರ್ವಾಹಕರು ಕಂಗಾಲು

  • ಸಿಬ್ಬಂದಿಯ ಮೇಲೆ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ಕೆಲ ಅಧಿಕಾರಿಗಳಿಂದ ಎರಡು ಪಾಳಿಯ

    ಕೆಟ್ಟ ನಿರ್ಧಾರ 

  • ಬಹುತೇಕ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಕರ್ತವ್ಯವೇ ಸಿಗುತ್ತಿಲ್ಲ

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದ ಬಿಎಂಟಿಸಿ ಸಿಬ್ಬಂದಿಯ ಮೇಲೆ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ದಿನಕ್ಕೆ ನಾಲ್ಕು ತಾಸು ಹೆಚ್ಚುವರಿಯಾಗಿ ಅಧಿಕಾರಿಗಳು ದುಡಿಸಿಕೊಳ್ಳುತ್ತಿದ್ದಾರೆ.

ಬೆಳಗ್ಗೆ ಹತ್ತು ಗಂಟೆಗೆ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದರೆ ರಾತ್ರಿ ಹತ್ತು ಗಂಟೆ ನಂತರವೇ ಮನೆಗೆ ಹೋಗಬೇಕು. ಇನ್ನು ಬಸ್ ಎಲ್ಲಿ ನಿಲ್ಲುತ್ತದೆಯೋ ಅಲ್ಲಿಂದಲೇ ಮನೆಗೆ ತೆರಳಬೇಕು.

ಗಣನೀಯವಾಗಿ ಬಸ್‌ಗಳ ಸಂಖ್ಯೆಯನ್ನು ಬಿಎಂಟಿಸಿ ಸ್ಥಗಿತಗೊಳಿಸಿರುವುದರಿಂದ ದೂರದಿಂದ ಬರುವ ಚಾಲಕ ಮತ್ತು ನಿರ್ವಾಹಕರು ಮನೆ ಸೇರಲು ಪರದಾಡುವಂತಾಗಿದೆ. ಅದರಲ್ಲೂ ಮನೆಯಲ್ಲಿ ಕೆಲಸ ಮಾಡಿ 12 ತಾಸು ಕೆಲಸ ಮಾಡಲು ಆಗದೇ ಬಿಎಂಟಿಸಿ ಮಹಿಳಾ ಸಿಬ್ಬಂದಿ ಒತ್ತಡಕ್ಕೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ನಾಲ್ಕು ತಾಸು ಹೆಚ್ಚುವರಿ ದುಡಿಸಿಕೊಂಡರೂ ಅದಕ್ಕೆ ಐದು ರೂಪಾಯಿಯನ್ನು ಕೂಡ ಹೆಚ್ಚುವರಿ ವೇತನ ನೀಡುತ್ತಿಲ್ಲ. ಈ ಪಾಪಿ ಅಧಿಕಾರಿಗಳು. ಈ ಮೂಲಕ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಕೆಲಸದ ಅವಧಿ ವಿಚಾರದಲ್ಲಿ ಕಾರ್ಮಿಕ ಕಾನೂನುಗಳನ್ನು ಬೆಂಗಳೂರು ಮಹಾನಗರ ಸಂಸ್ಥೆ ಉಲ್ಲಂಘನೆ ಮಾಡುತ್ತಿದೆ.

ಬಿಎಂಟಿಸಿ ಈ ನಿರ್ಧಾರದಿಂದಾಗಿ ಚಾಲಕರು ಮತ್ತು ನಿರ್ವಾಹಕರು ಕಂಗಾಲಾಗಿದ್ದಾರೆ. ಬಲವಂತದ ರಜೆಗಳು, ಡ್ಯೂಟಿ ಕಡಿತ ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 35 ಸಾವಿರ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡಿದರೆ ಯಾವುದೇ ತೊಂದರೆಯಾಗಲ್ಲ. ಜತೆಗೆ ಬೆಂಗಳೂರಿನಾದ್ಯಂತ ಬಡವರು ಸುಖಕರ ಪ್ರಯಾಣ ಮಾಡಲು ಸಾಧ್ಯ.

ಆದರೆ ಕೆಲ ಅಧಿಕಾರಿಗಳ ಈ ಕೆಟ್ಟ ನಡೆಯಿಂದ ಎರಡು ಪಾಳಿ ಮಾಡಿದ್ದು,ಬಹುತೇಕ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಕರ್ತವ್ಯವೇ ಸಿಗುತ್ತಿಲ್ಲ. ಅಗತ್ಯ ಬಸ್‌ಗಳಿಗೆ ಬಿಎಂಟಿಸಿ ಸಿಬ್ಬಂದಿ ತುಂಬಿದ ಮೇಲೆ ಕರ್ತವ್ಯಕ್ಕೆ ಹಾಜರಾಗುವರಿಗೆ ಬಲವಂತವಾಗಿ ರಜೆ ಮೇಲೆ ಕಳಿಸಲಾಗುತ್ತಿದೆ.

ರಜೆ ಇಲ್ಲದ ಚಾಲಕ ಮತ್ತು ನಿರ್ವಾಹಕರಿಗೆ ವೇತನ ಕಡಿತ ಷರತ್ತಿನೊಂದಿಗೆ ಮನೆಗೆ ಕಳುಹಿಸಲಾಗುತ್ತಿದೆ. ಇದು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಲ್ಲಿ ಮತ್ತೆ ಆಕ್ರೋಶ ಮನೆ ಮಾಡಲು ಕಾರಣವಾಗಿದೆ.

ಹೋರಾಟದ ಬಗೆಗಿನ ಸಿಟ್ಟು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಹೋರಾಟ ನಡೆಸಿದ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ತೀರ್ಮಾನದಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರವೇ ಸ್ಥಗಿತಗೊಂಡಿತ್ತು.

ಇದರಿಂದಾಗಿ ಬಿಎಂಟಿಸಿ ಮೇಲಾಧಿಕಾರಿಗಳು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಆ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುವ ಬಿಎಂಟಿಸಿ ಅಧಿಕಾರಿಗಳು ಇದೀಗ ಕೊರೊನಾ ಹೆಸರಿನಲ್ಲಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ನಾನಾ ತರಹದ ಹಿಂಸೆ ನೀಡುತ್ತಿದ್ದಾರೆ.

ಪಾಳಿ ರದ್ದು ಮಾಡಿ ಬಿಎಂಟಿಸಿ ಸಿಬ್ಬಂದಿ ದಿನ ನಿತ್ಯ ನಾಲ್ಕು ತಾಸು ವೇತನವಿಲ್ಲದೇ ದುಡಿಯುವ ಸಿಬ್ಬಂದಿ ಮತ್ತೊಂದೆಡೆ ಬಲವಂತದ ರಜೆ ತೆಗೆದುಕೊಂಡು ತಿಂಗಳ ಸಂಬಳದಲ್ಲಿ ಕಡಿತ ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಆದರೆ, ಕೆಲಸವಿಲ್ಲದೆ ಅರಟೆ ಹೊಡೆದುಕೊಂಡು ದಿನಪೂರ್ತಿ ಕುಳಿತುಕೊಳ್ಳುವ ಕೆಲ ಅಧಿಕಾರಿಗಳು ಮತ್ತು ನೌಕರರಿಗೆ ಕೇರಿ ಅಥವಾ ಘಟಕಗಳಿಗೆ ಬಂದು ಒಂದು ಸಹಿ ಮಾಡಿದರೆ ಸಾಕು ವವೇತನದ ಜತಗೆ ಎಲ್ಲರೀತಿಯ ಸೌಲಭ್ಯಗಳು ಸಿಕ್ಕಿಬಿಡುತ್ತವೆ.

ಇಂಥ ಅವೈಜ್ಞಾನಿಕ ಪದ್ಧತಿ ಮೊದಲು ದೂರಾಗಬೇಕು. ಜತೆಗೆ ಕರ್ತವ್ಯಕ್ಕೆ ಹಾಜರಾದ ಚಾಲಕ ಮತ್ತು ನಿರ್ವಾಹಕರಿಗೆ ಡ್ಯೂಟಿ ಕೊಡದೆ ಹೋದರೆ ಆಯಾಯ ಘಟಕದ ಅಧಿಕಾರಿಗಳ ಜೇಬಿನಿಂದಲೇ ವೇತನ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ. ಅಧಿಕಾರಿಗಳ ಈ ಉಪಟಳವನ್ನು ನಿಯಂತ್ರಿಸಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ.

ಇಲ್ಲ ಕೊರೊನಾ ಕಾರಣವನ್ನು ಸರ್ಕಾರ ಸಮರ್ಥಿಸಿಕೊಂಡರೆ ಡ್ಯೂಟಿಗೆ ಬರುವ ಚಾಲಕ ಮತ್ತು ನಿರ್ವಾಹಕರನ್ನು ವಾಪಸ್‌ ಕಳುಹಿಸಿದರೆ ಸರ್ಕಾರವೇ ವೇತನ ನೀಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ