NEWSನಮ್ಮಜಿಲ್ಲೆನಮ್ಮರಾಜ್ಯ

ಐಎಎಸ್‌, ಐಪಿಎಸ್‌ ಇಲ್ಲದ ಖಾಸಗಿ ಸಂಸ್ಥೆ ಲಾಭದತ್ತ- ಎಲ್ಲವೂ ಇರುವ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ನಷ್ಟದತ್ತ : ಎತ್ತಣ ಮಾಮರ ಎತ್ತಣ ಕೋಗಿಲೆ

ವಿಜಯಪಥ ಸಮಗ್ರ ಸುದ್ದಿ
  • ಸಾರಿಗೆ ಸಂಸ್ಥೆಯಲ್ಲಿ ಆದಾಯದ ಕೊರತೆ ಅಂತ ಹೇಳುವ ಎಲ್ಲರಿಗೂ ನಿತ್ಯ ಅಧಿಕಾರಿಗಳ ಕಿರುಕುಳ ಅನುಭವಿಸುತ್ತಿರುವ ನಿಮ್ಮ ನೊಂದ ಸಾರಿಗೆ ನೌಕರರ ಒಂದು ಮನವಿ.

ಒಬ್ಬ ವ್ಯಕ್ತಿ ಒಂದು ವಾಹನವನ್ನು ಖರೀದಿ ಮಾಡಿ ಆ ಒಂದು ವಾಹನದಿಂದ ಇವತ್ತು ಸಾವಿರಾರು ವಾಹನಗಳ ಮಾಲೀಕರಾಗಿ ಬೆಳೆದಿದ್ದಾರೆ. ನಮಗೂ ಹೆಮ್ಮೆಯಿದೆ. ಆ ಮಹಾನ್‌ ವ್ಯಕ್ತಿ ಎಂದರೆ ವಿಜಯ ಸಂಕೇಶ್ವರ ಅವರು.

ಅವರ ಕಂಪನಿಯಲ್ಲಿ ಯಾವುದೇ ಐಎಎಸ್ ಅಥವಾ ಐಪಿಎಸ್ ಅದಿಕಾರಿಗಳಿಲ್ಲ. ಆದರೂ ಇವತ್ತು ಸಾರಿಗೆ ಕ್ಷೇತ್ರಗಳಲ್ಲಿ ಗಣನೀಯ ಲಾಭದತ್ತ ನಡೆಯುತ್ತಿದೆ. ಅಲ್ಲಿ ದುಡಿಯುವರು ನಮಂತ ಚಾಲಕ ತಾಂತ್ರಿಕ ಸಿಬ್ಬಂದಿಗಳೆ.

ಆದರೆ ನಮ್ಮ ಸಾರಿಗೆ ಸಂಸ್ಥೆಯಲ್ಲಿ ಸಂಸ್ಥೆಯನ್ನು ಮುನ್ನಡೆಸಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಇದ್ದರೂ ಸಹ ನಮ್ಮ ಸಂಸ್ಥೆ ಲಾಸ್‌ನಲ್ಲಿ ನಡೆಯಲು ಕಾರಣವೇನು? ಅಲ್ಲಿ ದುಡಿಯುವ ನೌಕರಿಗೆ ನಮಗಿಂತ ಹೆಚ್ಚಿನ ವೇತನ ಸಿಗುತ್ತಿದೆ.

ನಮಗೆ ಅವರಿಗಿಂತ ಕಡಿಮೆ ವೇತನ. ಒಂದು ಖಾಸಗಿ ಸಂಸ್ಥೆ ಅಲ್ಲಿರುವ ಎಲ್ಲಾ ನೌಕರಿಗೆ ಅನೇಕ ಸೌಲಭ್ಯವನ್ನೂ ನೀಡುತ್ತಿದೆ. ಆದರೆ ನಮ್ಮ ಸಾರಿಗೆ ಒಂದು ಸರ್ಕಾರಿ ಅಂಗ ಸಂಸ್ಥೆ ಆಗಿ ನಮಗ್ಯಾಕೆ ಈ ಅವ್ಯವಸ್ಥೆ ಹೇಳಿ ಸಹೋದರರೆ?.

ಇಲ್ಲಿ ಇರುವ ಕೆಲವಂದು ಭ್ರಷ್ಟ ಅಧಿಕಾರಿಗಳಿಂದ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಹಾಗೂ ಇಲ್ಲಿರುವ ಕೆಲವೊಂದು ಸಂಘಟನೆ ನಿರ್ಧಾರದಿಂದ ಈ ಸ್ಥಿತಿಗೆ ಬರಲು ಕಾರಣವಾಗಿದೆ. ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ನಮ್ಮ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯುತಿತ್ತು.

ಇನ್ನು ವಿಜಯ ಸಂಕೇಶ್ವರ ಅವರು ನಡೆಸುತ್ತಿರುವ ಸಂಸ್ಥೆಗೆ ಯಾವುದೆ ಸರ್ಕಾರದ ಸೌಲಭ್ಯಗಳಿಲ್ಲ. ಆದರೆ ನಮ್ಮ ಸಂಸ್ಥೆಗೆ ಸರ್ಕಾರದಿಂದ ಕೆಲವೊಂದು ಆರ್ಥಿಕ ಸೌಲಭ್ಯ ಸಿಕ್ಕರೂ ನಿಗಮಗಳನ್ನು ಲಾಭದತ್ತ ಕೊಂಡೊಯೊಲು ಸಾಧ್ಯವಾಗುತ್ತಿಲ್ಲ. ಕಾರಣ ಇಲ್ಲಿ ಸೃಷ್ಟಿಯಾಗಿರುವ ಬಕಾಸುರರನ್ನು ಸಂಸ್ಥೆಯಿಂದ ಹೊರದಬ್ಬಬೇಕಾಗಿದೆ. ಜತೆಗೆ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುವಂತ ಕೆಲವು ಸಂಘಟನೆ ಮುಖಂಡರಿಗೂ ಗೇಟ್‌ಪಾಸ್‌ ಕೊಡಬೇಕಿದೆ.

ಈ ಕೆಟ್ಟ ಹುಳುಗಳು ಇರುವರೆಗೂ ನಮ್ಮ ಸಂಸ್ಥೆ ಹಾಗೂ ಇಲ್ಲಿ ದುಡಿಯುವ ಕೆಳ ಹಂತದ ನೌಕರರು ಯಾವತ್ತು ಮೇಲೆ ಬರಲು ಸಾಧ್ಯವಿಲ್ಲ. ಕೆಲವು ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ನೌಕರನ್ನು ಬೀದಿಪಾಲು ಮಾಡಿದ್ದೂ ಈಗ ನಾವೆ ಸಾಚಾ ಅನ್ನುವ ರೀತಿಯಲ್ಲಿ, ಎಲ್ಲಾ ನಾವೆ ಮಾಡಿದ್ದೂ ಸಂಸ್ಥೆ ನಾವೆ ಉಳಿಸಿಕೊಂಡು ಬಂದಿದ್ದು ಅಂತ ಹೇಳುತ್ತಿದ್ದಾರೆ.

ಈ ರೀತಿ ಹೇಳುತ್ತಿರುವ ಸಹೋದರರು ಆವತ್ತಿಂದ ಬೆಳೆದು ಬಂದಂತ ನೀವು ಸರಿಯಾದ ಮಾರ್ಗದರ್ಶನ ನೀಡಿದ್ದರೆ ಇವತ್ತು ಈ ಸ್ಥಿತಿಗೆ ಬರುತ್ತಿರಲಿಲ್ಲ. ನಿಮ್ಮ ಕೆಟ್ಟ ಸಲಹೆಗಳಿಂದ ಹಾಗೂ ಭ್ರಷ್ಟ ಅಧಿಕಾರಿಗಳಿಂದ ಇಲ್ಲಿಗೆ ಬಂದು ನಿಂತಿದೆ.

ಸಾರಿಗೆ ಸಹೋದರರೆ ಇನ್ನಾದರೂ ಎಚ್ಚೆತುಕೊಳ್ಳಿ ಈಗ ಹೇಳುತ್ತಿರುವುದು ನೀವು ಮುಷ್ಕರ ಮಾಡಿ ಅರ್ಧ ವೇತನ ಕೊಡಿಸುತ್ತೀರಿ ಎಂದು. ಆದರೆ ಮೊದಲಿನಿಂದಲೂ ಸರಿಯಾದ ಮಾರ್ಗದಲ್ಲಿ ಬಂದ್ದಿದರೆ ಈವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಮನಸ್ಥಿತಿಯಿಂದ ಹೊರ ಬನ್ನಿ. ನಿಮ್ಮ ಹಕ್ಕುಗಳನ್ನು ಪಡೆಲು ಮುಂದಾಗಿ ಈ ಬಗ್ಗೆ ಯೋಚನೆ ಮಾಡಿ ಸ್ನೇಹಿತರೆ.

ಇಂತಿ ನೊಂದ ಸಾರಿಗೆ ನೌಕರ ಮಿತ್ರರು

Leave a Reply

error: Content is protected !!
LATEST
ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ