NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಿ: ಸಿಎಂ, ಸಚಿವರಿಗೆ ಮನವಿ ಮಾಡಿದ ನಿವೃತ್ತ ಶಿಕ್ಷಕಿ ಜಗದಾಂಬಾ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ನೌಕರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ದಿಟ್ಟ, ಸೂಕ್ತವಾದ ಕ್ರಮ ತೆಗೆದುಕೊಂಡು ಒಂದು ಸರಿಯಾದ ನ್ಯಾಯ ಒದಗಿಸಿಕೊಡುವುದು ಜರೂರಾಗಿ ಆಗಬೇಕಿದೆ.

ನೌಕರರಿಗೆ ಅನ್ಯಾಯ ಆಗುತ್ತಿರುವುದರ ಬಗ್ಗೆ ನಾಡಿನ ದೊರೆಯಾದ ನೀವು ಗಮನ ಕೊಡಬೇಕು. ಯಾಕೆಂದರೆ ನೌಕರರಿಗೆ ಸಣ್ಣಪುಟ್ಟ ತಪ್ಪಿಗೆ ಅತೀ ಶೀಘ್ರಗತಿಯಲ್ಲಿ ಶಿಕ್ಷೆ ಮಾಡುವ ಅಧಿಕಾರಿಗಳ ಸಂಖ್ಯೆ ನಾಲ್ಕೂ ನಿಗಮಗಳಲ್ಲೂ ಹೆಚ್ಚಾಗಿದೆ ಎಂದು ನಾನು ಕೇಳಿದ್ದೇನೆ. ಅದು ನಿಲ್ಲಬೇಕು.

ದೊಡ್ಡದೊಡ್ಡ ತಪ್ಪನ್ನು ಮಾಡುವ ಅಧಿಕಾರಿಗಳಿಗೆ ಯಾವುದೇ ರೀತಿಯ ಶಿಕ್ಷೆ ಆಗುತ್ತಿಲ್ಲ. ಏನೊಂದು ತಪ್ಪು ಮಾಡದ ನೌಕರರು ಮಾತ್ರ ಇಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾನು ನೋಡಿದ್ದೇನೆ. ಮತ್ತು ಕೇಳಿದ್ದೇನೆ. ಈಗಲೂ ಅದನ್ನು ಗಮನಿಸುತ್ತಿದ್ದೇನೆ.

ಇನ್ನು ಇಲಾಖೆಯಲ್ಲಿ ಭ್ರಷ್ಟಾಚಾರ, ಲೂಟಿ ಮಾಡುವ ಅಧಿಕಾರಿಗಳಿಗೆ ತನಿಖೆಯನ್ನು ಮಾಡುತ್ತಿಲ್ಲ. ಈ ರೀತಿಯ ವಿಳಂಬ ಧೋರಣೆಯಿಂದ ಅಧಿಕಾರಿಗಳು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ ನೌಕರರಿಗೆ ಶಿಕ್ಷೆ ನೀಡುವ ಅಧಿಕಾರಿಗಳು ತಮಗೆ ಸರಿ ಸಮಾನವಾದ ಅಧಿಕಾರಿಗಳ ವಿಚಾರಣೆ ಮಾಡಲು ಸಾಧ್ಯವಿದೆಯೇ? ಇದರಿಂದಲೇ ಬರಿ ನೌಕರರಿಗೆ ಮಾತ್ರ ಶಿಕ್ಷೆಯಾಗುತ್ತಿದ್ದು, ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿದೆ. ಈ ನಿಯಮ ಬದಲಾಗಬೇಕಿದೆ.

ನೌಕರರಿರಲಿ, ಅಧಿಕಾರಿಗಳಿರಲಿ ಯಾರೇ ತಪ್ಪು ಮಾಡಿದರೂ ಸಮಾನವಾದ ತಪ್ಪಿಗೆ ಸಮಾನ ಶಿಕ್ಷೆ ಕೊಡಬೇಕು. ಆದರೆ, ಸಾರಿಗೆಯಲ್ಲಿ ಅಂತ ಯಾವುದೇ ನಿಯಮವಿಲ್ಲದಂತೆ ಅಧಿಕಾರಿಗಳು ತಪ್ಪಿಸಿಕೊಂಡು ನೌಕರರಿಗೆ ಮಾತ್ರ ಶಿಕ್ಷೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ಈ ಸಂಸ್ಥೆಯಲ್ಲಿ, ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಸಿಕ್ಕಿದಷ್ಟು ಬಾಚಿಕೊಳ್ಳುವ ಅಧಿಕಾರಿಗಳ ದಂಡು ಹೆಚ್ಚಾಗಿದೆ. ಪ್ರಾಮಾಣಿಕ ಅಧಿಕಾರಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ.

ಇನ್ನು ಸಾರಿಗೆಯ ಖಾಸಗಿ ಸಂಸ್ಥೆಯೊಂದು ಸುಮಾರು 20 ಸಾವಿರ ನೌಕರರಿಗೆ ಕೆಲಸಕೊಟ್ಟಿದೆ. ಜತೆಗೆ ಹೆಚ್ಚು ಟ್ರಿಪ್‌ಗಳು ಕೂಡ ಇರುವುದಿಲ್ಲ ಆದರೂ ಅದು ಲಾಭದತ್ತ ಸಾಗಿದ್ದು, ಈಗ ಬಿಎಂಟಿಸಿ ಸಂಸ್ಥೆಯನ್ನೇ ಗುತ್ತಿಗೆ ಪಡೆಯಲು ಮುಂದಾಗಿದೆ.

ಆ ಖಾಸಗಿ ಸಂಸ್ಥೆ ಲಾಭದಲ್ಲಿ ಇದೆ ಎಂದಾದರೆ ನಿತ್ಯ ಕೋಟ್ಯಂತರ ರೂ. ಆದಾಯ ಗಳಿಸುತ್ತಿರುವ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳು ಏಕೆ ಲಾಸ್‌ ಆಗುತ್ತಿವೆ. ಇಲ್ಲಿ ಗುಳುಮಣ್ಣಂದಿರಿರುವುದು ಹೆಚ್ಚಾಗಿರುವುದರಿಂದ ಮತ್ತು ಕೃಷ್ಣನ ಲೆಕ್ಕವನ್ನು ತೋರಿಸುತ್ತಿರುವುದರಿಂದ. ಸಂಸ್ಥೆಗಳು ಲಾಸ್‌ನತ್ತ ಮುಖಮಾಡಿವೆ.

ಇನ್ನು ಆ ಖಾಸಗಿ ಸಂಸ್ಥೆಯಲ್ಲಿ ಎಷ್ಟು ಎಂಡಿಗಳಿದ್ದಾರೆ, ಎಷ್ಟು ಅಧಿಕಾರಿಗಳಿದ್ದಾರೆ? ಯಾರು ಇಲ್ಲ. ಆದರೂ ಅದು ಲಾಭದಾಯಕ ಸಂಸ್ಥೆಯಾಗಿದೆ. ಜತೆಗೆ ಆ ಸಂಸ್ಥೆಯ ಮಾಲೀಕ ನೌಕರರ ಮೇಲೆ ವಿಶ್ವಾಸ, ಹೆಮ್ಮೆ ಹೊಂದಿದ್ದಾರೆ. ಆದರೆ ಸಾರಿಗೆ ಸಂಸ್ಥೆಯಲ್ಲಿ ಒಬ್ಬ ಘಟಕ ವ್ಯವಸ್ಥಾಪಕ ಒಬ್ಬ ಚಾಲನಾ ಸಿಬ್ಬಂದಿ ಬಗ್ಗೆ ಏನೋ ಒಂದು ಆರೋಪ ಮಾಡಿದ ಎಂದರೆ ಕೂಡಲೇ ಆತನ ವಿರುದ್ಧ ಅಮಾನತು ಅಸ್ತ್ರ ಪ್ರಯೋಗವಾಗುತ್ತದೆ.

ಇದರಿಂದ ಸಂಸ್ಥೆಗೆ ಬರುವ ಆದಾಯಕ್ಕೂ ಕತ್ತರಿ ಬೀಡುತ್ತಿದೆ. ಜತೆಗೆ ಹಲವಾರು ರೀತಿಯ ಉಚಿತ ಪಾಸ್‌ಗಳನ್ನು ಸರ್ಕಾರ ಕೊಟ್ಟಿದ್ದು, ಅದನ್ನು ಸಂಸ್ಥೆ ಮೇಲೆ ಹೇರಿ ಲಾಸ್‌ ಎಂದು ತೋರಿಸುತ್ತಿದೆ.

ಇನ್ನು ಆದಾಯ ಎಲ್ಲಿ ದಾರಿ ತಪ್ಪಿದೆ ಎಂಬ ವಿಚಾರ ಮಾಡದೆ, ನೌಕರರನ್ನೇ ಟಾರ್ಗೆಟ್ ಮಾಡಿ ಅವರಿಗೆ, ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ದುಃಖಕರ ಸಂಗತಿ. ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರೂ ಅದರ ಫಲ ನೌಕರರಿಗೆ ಸಿಗದಿರುವುದು ನಿಜಕ್ಕೂ ನೋವಿನ ಸಂಗತಿ.

ಒಬ್ಬ ನೌಕರನಿಗೆ ಆಗುವ ತೊಂದರೆಗಳನ್ನು ಮನಗಂಡು ವಿಚಾರವನ್ನು ಮಾಡಿದರೆ, ಅದಕ್ಕೆ ಉತ್ತರ ಸಿಗುವುದು. ಆದರೆ, ಕಾಮಾಲೆ ಕಣ್ಣಿನವನಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಅಧಿಕಾರಿಗಳು ನೌಕರರ ಕಷ್ಟ ಆಲಿಸದೆ ಶಿಕ್ಷೆಕೊಡಲು ಮುಂದಾಗುವುದು ಎಷ್ಟು ಸರಿ?

ಇದಕ್ಕೆಲ್ಲ ರಾಜ್ಯದ ದೊರೆಯಾದ ಮುಖ್ಯಮಂತ್ರಿಗಳಾದ ತಾವು ಪರಿಹಾರ ಕೊಡಬೇಕು. ಇಲ್ಲದಿದ್ದರೆ, ನೌಕರರ ಸಿಟ್ಟು ನೆತ್ತಿಗೇರಿ ನಿಮ್ಮ ವಿರುದ್ಧ ಎಲ್ಲಿ ಆ ಸಿಟ್ಟನ್ನು ತೋರಿಸಬೇಕೋ ಅಲ್ಲಿ ತೋರಿಸುತ್ತಾರೆ. ಅಷ್ಟೇ ಅಲ್ಲ ಅಧಿಕಾರಿಗಳಿಗೂ ಅವರ ತಪ್ಪಿಗೆ ತಕ್ಕ ಶಿಕ್ಷೆಯನ್ನು ನೌಕರರೆ ನೀಡುತ್ತಾರೆ….

ಆದರೆ, ಇದಾವುದಕ್ಕೂ ಅವಕಾಶ ಮಾಡಿಕೊಡದೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಅವರು ಸಮ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶಮಾಡಿ ಕೋಡಿ ಎಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

l ಜಗದಾಂಬಾ, ನಿವೃತ್ತ ಶಿಕ್ಷಕರು, ಮಳವಳ್ಳಿ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ