ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ಕೊರೊನಾ ಟೆಸ್ಟ್ ವರದಿ ತರುವವರೆಗೂ ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಿಲ್ಲ ಎಂದು ತುಂಬು ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ನಿರಾಖರಿಸುತ್ತಿದ್ದಂತೆ ಮಗು ಸ್ಥಳದಲ್ಲೇ ಜನನವಾಗಿ ಮೃತಪಟ್ಟಿರುವ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ 7.30ರಲ್ಲಿ ಘಟನೆ ನಡೆದಿದೆ. ಬಳಿಕ ಆ ಮಗು ಹೆಣ್ಣೋ ಗಂಡೋ ಎಂಬುದನ್ನು ತಿಳಿಸದೆ ನರ್ಸ್ ಒಬ್ಬರು ಆ ಮಗು ಸತ್ತಿದೆ ಎಂದು ಹೇಳಿ ಮಗುವನ್ನು ಕಸದ ರೀತಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಮಗುವಿನ ತಂದೆ ಇಸ್ಮಾಯಿಲ್ ತಿಳಿಸಿದ್ದಾರೆ.
ನಿನ್ನೆ ಹೆರಿಗೆಗೆ ಟೈಮ್ ಕೊಡಲಾಗಿತ್ತು. ಅದರಂತೆ ಆಸ್ಪತ್ರೆಗೆ ಇಸ್ಮಾಯಿಲ್ ತನ್ನ ತುಂಬು ಗರ್ಭಿಣಿಯನ್ನು ಕರೆದುಕೊಂಡು ಬಂದಿದ್ದಾರೆ. ಆ ವೇಳೆ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ ಕೊರೊನಾ ಟೆಸ್ಟ್ ವರದಿ ಬರಲು ತಡವಾಗಿತ್ತು.
ಆದರೆ ಬುಧವಾರ ಹೊಟೆನೋವು ತಾಳಲಾರದೆ ಬೆಳಗ್ಗೆ 7.30ರ ಸುಮಾರಿಗೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ಕೋವಿಡ್ ವರದಿ ಕೇಳಿದ್ದಾರೆ ಇಂದು ಕೊಡುತ್ತಾರೆ ಮೊದಲು ದಾಖಲಿಸಿಕೊಳ್ಳಿ ಎಂದು ಇಸ್ಮಾಯಿಲ್ ಮನವಿ ಮಾಡಿದ್ದಾರೆ. ಅದರೆ ವೈದ್ಯರು ತಿರಸ್ಕರಿಸಿದ್ದಾರೆ. ಈ ವೇಳೆ ಕೂರಲು ವ್ಯವಸ್ಥೆ ಇಲ್ಲದ ಕಾರಣ ಗರ್ಭಿಣಿ ನಿಂತುಕೊಂಡಿದಂತೆಯೇ ಡಿಲವರಿಯಾಗಿ ಮಗು ಕೆಳಗೆ ಬಿದ್ದು ಮೃತಪಟ್ಟಿದೆ.
ಜನನವಾದ 3-4 ನಿಮಿಷದ ಬಳಿಕ ನರ್ಸ್ ಒಬ್ಬರು ಬಂದು ಮಗು ನೋಡಿ ಸತ್ತಿದೆ ಎಂದು ಹೇಳಿ ಎತ್ತಿಕೊಂಡು ಹೋಗಿದ್ದಾರೆ. ಬಳಿಕ ಜನರೆಲ್ಲ ಸೇರಿ ಗಲಾಟೆ ಮಾಡಿದ್ದರಿಂದ ಬಾಣಂತಿಯನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಇಲ್ಲಿಯವರೆಗೂ ತಾಯಿ ಮಗುವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಇಸ್ಮಾಯಿಲ್ ಮಾಧ್ಯಮಗಳಲ್ಲಿ ಗೋಳಾಡುತ್ತಿದ್ದಾರೆ.