ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕಳೆದ ಏಪ್ರಿಲ್ 7 ರಿಂದ ಕೈಗೊಂಡ ಅನಿ ರ್ದಿಷ್ಟ ಮುಷ್ಕರದ ಅವಧಿ ಹಾಗೂ ಏಪ್ರಿಲ್ 28 ರಿಂದ ಘೋಷಿಸಲಾದ ಕೋವಿಡ್ ಲಾಕ್ಡೌನ್ ಪ್ರಾರಂಭದ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಮಾಸಿಕ ಬಸ್ ಪಾಸ್ಗಳು ಲಾಕ್ ಡಾನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ವ್ಯವಾಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ್ ತಿಳಿಸಿದ್ದಾರೆ.
ಇಂತಹ ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಅಥವಾ ಗರಿಷ್ಟ 18 ದಿನಗಳವರೆಗೆ ಅಂದರೆ ಜುಲೈ 8ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಕಳೆದ ಏಪ್ರಿಲ್ 8 ರಿಂದ 27ರ ಅವಧಿಯಲ್ಲಿ ಮಾಸಿಕ ಬಸ್ ಪಾಸ್ಗಳನ್ನು ಪಡೆದಂತಹ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಆದೇಶಿಸಲಾಗಿದ್ದು, ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಕೋರಿದ್ದಾರೆ.