NEWSನಮ್ಮಜಿಲ್ಲೆನಮ್ಮರಾಜ್ಯ

ಅ.20 ಬಂದರೂ ಸಾರಿಗೆ ನೌಕರರಿಗೆ ಸೆಪ್ಟೆಂಬರ್‌ ತಿಂಗಳ ವೇತನ ಬಿಡುಗಡೆಯಾಗಿಲ್ಲ- ಬಸ್‌ಗಳು ತುಂಬಿದ್ದರೂ ಲಾಸ್‌ ಎಂಬ ಸಿದ್ಧ ಉತ್ತರಕ್ಕೆ ಅಂಟಿಕೊಂಡಿರುವ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಅಕ್ಟೋಬರ್‌ 20ನೇ ತಾರೀಖು ಬಂದರೂ ಸೆಪ್ಟೆಂಬರ್‌ ಮಾಹೆಯೆ ವೇತನ ಇನ್ನೂ ಬಿಡುಗಡೆಯಾಗಿಲ್ಲ.

ಕೆಳೆದ ಇದೇ ಅಕ್ಟೋಬರ್‌ 5ರ ನಂತರ ಆಗಸ್ಟ್‌  ತಿಂಗಳ ಅರ್ಧ ವೇತನವನ್ನು ಸಂಸ್ಥೆ ನೀಡಿತ್ತು. ಈ ವೇಳೆ ಸಚಿವ ಶ್ರೀರಾಮುಲು ಅವರು ದಸರಾ ಹಬ್ಬದ ಒಳಗಾಗಿ ನೌಕರರಿಗೆ ಸೆಪ್ಟೆಂಬರ್‌ ತಿಂಗಳ ಪೂರ್ತಿ ವೇತನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ದಸರಾ ಹಬ್ಬವೂ ಮುಗಿದು ವಾರಗಳು ಉರುಳುತ್ತಿದ್ದರೂ ಈವರೆಗೂ ವೇತನ ಮಾತ್ರ ಬಿಡುಗಡೆಯಾಗಿಲ್ಲ.

ಹೀಗೆಯೆ ಜುಲೈನಲ್ಲಿ ವೇತನ ನೀಡದಿದ್ದರಿಂದ ನೌಕರರು ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ತೊಂದರೆ ಅನುಭವಿಸಬೇಕಾಯಿತು. ನಂತರ ಸಚಿವರು ಗಣೇಶ ಹಬ್ಬಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್‌ ಈ ಎರಡೂ ತಿಂಗಳುಗಳ ವೇತನವನ್ನು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿದ್ದರು.

ಆದರೆ ಆಗಸ್ಟ್‌ ಕೊನೆಯಲ್ಲಿ ಜುಲೈ ತಿಂಗಳ ವೇತನ ನೀಡಿದ್ದರು. ನಂತರ ಆಗಸ್ಟ್‌ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ಗಣೇಶ ಹಬ್ಬಕ್ಕೂ ಮುನ್ನ ನೌಕರರ ಬ್ಯಾಂಕ್‌ ಖಾತೆಗಳಿಗೆ ಹಾಕಿದ್ದರು. ಆ ಬಳಿಕ ಅಂದರೆ ಅಕ್ಟೋಬರ್‌ ಮೊದಲ ವಾರ ಪ್ರಾರಂಭವಾಗಿದ್ದರೂ ಉಳಿದರ್ಧ ವೇತನ ಬಿಡುಗಡೆ ಮಾಡೇ ಇರಲಿಲ್ಲ.

ನೌಕರರು ದುಡಿದರೂ ಮತ್ತು ಸಂಸ್ಥೆಗಳು ಈಗ ಆದಾಯ ಗಳಿಸುತ್ತಿದ್ದರೂ ಏಕೋ ಏನೋ ವೇತನವನ್ನು ಮಾತ್ರ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಕಾರಣ ಕೇಳಿದರೆ ಅಧಿಕಾರಿಗಳು ವೇತನ ನೀಡುವಷ್ಟು ಆದಾಯ ಬರುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ.

ಹೀಗಾಗಿ ಮತ್ತೆ ನೌಕರರು ವೇತನ ಸಿಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಬಂಧಪಟ್ಟ ಸಚಿವರು ವೇತನ ಬಿಡುಗಡೆ ಮಾಡುವತ್ತ ಗಮನ ಹರಿಸಬೇಕಿದೆ.

ಇನ್ನುದೀಪಾವಳಿ ಹಬ್ಬದ ವೇಳೆಗೆ ಮತ್ತೆ ಎರಡು ತಿಂಗಳ ವೇತನ ಕೊಡಬೇಕಾಗುತ್ತಿದೆ. ಆದರೆ, ಈಗ ಸೆಪ್ಟೆಂಬರ್‌ ತಿಂಗಳ ವೇತನವನ್ನೇ ಇನ್ನೂ ನೀಡಿಲ್ಲ. ನಾವು ನಿತ್ಯ ಆದಾಯವನ್ನು ಕೊರತೆ ಇಲ್ಲದಂತೆ ತರುತ್ತಿದ್ದೇವೆ. ಆದರೂ ಅಧಿಕಾರಿಗಳು ಮಾತ್ರ ಆದಾಯವಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ನೋಡಿದರೆ ಎಲ್ಲಿ ಸೋರಿಕೆಯಾಗುತ್ತಿದೆ ಎಂದೇ ತಿಳಿಯುತ್ತಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.

ಈ ಬಗ್ಗೆ ಎಚ್ಚರಿಕೆ ವಹಿಸಿ ಜತೆಗೆ ಕೂಡಲೇ ಸೆಪ್ಟೆಂಬರ್‌ ತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದು ನೌಕರರು ಸಚಿವರು ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾರಿಗೆ ಸಂಸ್ಥೆಗಳು ಈಗ ಆದಾಯವನ್ನು ಗಳಿಸುತ್ತಿವೆ. ಆದರೆ ಅಧಿಕಾರಿಗಳ ದೃಷ್ಟಿಯಲ್ಲಿ ಇನ್ನೂ ಆದಾಯ ಬರುತ್ತಿಲ್ಲ. ಹೀಗೆ ಅಧಿಕಾರಿಗಳು ಏಕೆ ಹೇಳುತ್ತಿದ್ದಾರೆ. ಉದಾ: ಮೈಸೂರಿನಿಂದ ಬೆಂಗಳೂರಿಗೆ ಬರುವ ಬಹುತೇಕ ಎಲ್ಲ ಬಸ್‌ಗಳು ಸ್ಟ್ಯಾಂಡಿಂಗ್‌ಗೆ ಇರುತ್ತವೆ.

ಅಷ್ಟೊಂದು ಜನರನ್ನು ತುಂಬಿಕೊಂಡು ಬರುತ್ತಿದ್ದರೂ ಜನರು ಬಸ್‌ಗಳತ್ತ ಮುಖಮಾಡುತ್ತಿಲ್ಲ, ಕೊರೊನಾ ಭಯ ಎಂದು ಕಚೇರಿಯಲ್ಲೇ ಕುಳಿತು ಸಿದ್ಧ ಉತ್ತವರನ್ನು ಅಧಿಕಾರಿಗಳು ಕೊಡುತ್ತಿದ್ದಾರೆ. ಇವರ ಹೇಳಿಕೆಯನ್ನೇ ಆಧರಿಸಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿರುವುದರಿಂದ ಅಧಿಕಾರಿಗಳು ತಮ್ಮ ಭ್ರಷ್ಟಾಚಾರದಲ್ಲಿ ತೊಡಗಲು ಸಲೀಸಾಗುತ್ತಿದೆ.

ಇನ್ನು ಅಧಿಕಾರಿಗಳ ಸಿದ್ಧ ಉತ್ತರಕ್ಕಷ್ಟೇ ಸೀಮಿತವಾಗದೆ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿ ಮಾಧ್ಯಮಗಳ ಸುದ್ದಿ ಬಿತ್ತರಿಸಿದರೆ, ಅಧಿಕಾರಿಗಳ ಬಣ್ಣವನ್ನು ಬಯಲು ಮಾಡಬಹುದು. ಇದರಿಂದ ಸಾರ್ವಜನಿಕರಿಗೂ ಸತ್ಯ ತಿಳಿಸಿದಂತಾಗುತ್ತದೆ. ಜತೆಗೆ ಸರ್ಕಾರಕ್ಕೂ ಸರಿಯಾದ ಮಾಹಿತಿ ಕೊಟ್ಟಂತಾಗುತ್ತದೆ.

ಈ ನಡುವೆ ಸರ್ಕಾರ ಸೇವೆಗೆಂದೇ ಮೀಸಲಿಟ್ಟಿರುವ ಸಾರಿಗೆ ಸಂಸ್ಥೆಯಲ್ಲಿ ಲಾಭ-ನಷ್ಟವನ್ನು ಲೆಕ್ಕಹಾಕದೆ ನೌಕರರಿಗೆ ಬರಬೇಕಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದಲು ಕೇಳಿ ಬರುತ್ತಿದೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?