NEWSನಮ್ಮಜಿಲ್ಲೆವಿಜ್ಞಾನ

ಬೆಂಗಳೂರಿನಾದ್ಯಂತ ಪ್ರತಿಧ್ವನಿಸಿದ ನಿಗೂಢ ಶಬ್ದ: ಭೀತಿಗೊಂಡು ಮನೆಯಿಂದ ಹೊರ ಬಂದ ಜನರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶುಕ್ರವಾರ ಮಧ್ಯರಾತ್ರಿ 12-22ರ ಸುಮಾರಿನಲ್ಲಿ ಬೆಂಗಳೂರಿನಾದ್ಯಂತ ಪ್ರತಿಧ್ವನಿಸಿದ ನಿಗೂಢ ಶಬ್ಧವೊಂದು ಜನರ ಭೀತಿಗೆ ಕಾರಣವಾಗಿದ್ದು, ಮನೆಯಿಂದ ಹಲವು ಜನ ಹೊರಬಂದು ನೋಡುತ್ತಿದ್ದರು.  ಆದರೆ ಇದು ಉಗ್ರರ ದಾಳಿಯೇ ಅಥವಾ ಕ್ವಾರಿಯಲ್ಲಿನ ಸ್ಫೋಟವೇ ಎಂಬಂತಹ ನಾನಾ ಅನುಮಾನಗಳು ಉಂಟಾಗಿವೆ.

ಕುಮಾಸ್ವಾಮಿ ಲೇಔಟ್‌, ಆರ್ ಟಿ ನಗರ, ಮಲ್ಲೇಶ್ವರಂ, ರಾಜಾಜಿನಗರ, ರಾಜರಾಜೇಶ್ವರಿನಗರ, ಜೆಪಿನಗರ, ಜಯನಗರ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಸೇರಿದಂತೆ ನಗರದ ದಕ್ಷಿಣ ಹಾಗೂ ಪೂರ್ವ ಭಾಗದ ಹಲವೆಡೆ ಈ ಶಬ್ದ ಕೇಳಿಬಂದಿದೆ. ಈ ಶಬ್ದದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ, ಎಲ್ಲಿಂದ ಈ ಶಬ್ದ ಕೇಳಿಬಂತು ಎಂದು ನಗರದ ಪೊಲೀಸರು ಅಥವಾ ಕಂಟ್ರೋಲ್ ರೂಂ ಸಂಪರ್ಕಿಸಿದರೆ, ಅದರ ಸಣ್ಣ ಸುಳಿವು ಕೂಡಾ ಈವರೆಗೂ ಸಿಕ್ಕಿಲ್ಲ ಎನ್ನುತ್ತಾರೆ.

ಈ ಶಬ್ದ ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ವಿವಿಧ ಭಾಗದ ಗಸ್ತು ಸಿಬ್ಬಂದಿಗೆ ನಗರದ ಪೊಲೀಸರು ನಿರ್ದೇಶಿಸಿದ್ದಾರೆ. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ, ಏಪ್ರಿಲ್ 17, 2013ರಲ್ಲಿ ನಗರದ ಬಿಜೆಪಿ ಕಚೇರಿ ಹತ್ತಿರ ಇದೇ ರೀತಿಯ ಸ್ಫೋಟ ಸಂಭವಿಸಿತ್ತು.

ಸೂನಿಕ್ ಬೂಮ್ ನಂತಹ ಶಬ್ದ ಕೂಡಾ ಬೆಂಗಳೂರಿಗೆ ಪರಿಚಿತ. ಯುದ್ಧ ವಿಮಾನಗಳು ವೇಗವನ್ನು ಹೆಚ್ಚಿಸಿದಾಗಲೂ ಇಂತಹ ಶಬ್ದ ಕೇಳಿಬರುತ್ತದೆ. ಆದರೆ, ಇಂತಹ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ ಎಂದು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಚ್ ಎಎಲ್ ಕೂಡಾ ಈ ಶಬ್ಧದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿಲ್ಲ.

ಯಾವುದೇ ಭೂಕಂಪನದಂತಹ ಘಟನೆಗಳು ಕೂಡಾ ಸಂಭವಿಸಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ವಹಣಾ ಮಂಡಳಿ ಹೇಳಿದೆ. ಈ ಮಧ್ಯೆ ನಗರದ ಹೊರವಲಯದಲ್ಲಿ ಕ್ವಾರಿಯಲ್ಲಿ ಏನಾದರೂ ಇಂತಹ ಶಬ್ಧ ಬಂದಿರುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಹರಿಸಿದೆ.

ಸಾಮಾನ್ಯವಾಗಿ ಕ್ವಾರಿಗಳಲ್ಲಿ ಸಂಜೆ 5-30ರಿಂದ 6 ಗಂಟೆ ನಡುವೆ ಸ್ಫೋಟಗಳು ಆಗುತ್ತವೆ. ಆದರೆ, ಇದು ಮಧ್ಯರಾತ್ರಿ ಕೇಳಿಬಂದಿದೆ. ನಗರದೊಳಗೆ ಇಂತಹ ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಜಿ. ಪ್ರತಿಮಾ ಹೇಳಿದ್ದಾರೆ.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ