CrimeNEWSನಮ್ಮಜಿಲ್ಲೆ

ತಿ.ನರಸೀಪುರ: ಗಂಡನ ಮರ್ಮಾಂಗ ಹಿಚುಕಿ ಕೊಂದ ಪತ್ನಿ: ವಯಸ್ಸಿನ ಅಂತರಕ್ಕೆ ಬಲಿಯಾದ ಜೀವ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತನಗಿಂತ 20 ವರ್ಷ ದೊಡ್ಡವನಾದ ಗಂಡನಿಗೆ ನಿದ್ರೆ ಮಾತ್ರ ಕೊಟ್ಟು ಆತನ ಮರ್ಮಾಂಗ ಹಿಚುಕಿ, ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿ ಕೊಲೆ ಮಾಡಿದ ಪ್ರಕರಣ 9 ತಿಂಗಳ ನಂತರ ಬಯಲಾಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹುಣಸಗಹಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದರು, ವೆಂಕಟರಾಮು (50) ಹತ್ಯೆಯಾದವರು. 9 ತಿಂಗಳ ಹಿಂದೆ ವೆಂಕಟರಾಮಯ್ಯ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದರೆ, ಆತನ ಪತ್ನಿ ವೆಂಕಟರಾಮು ತಲೆಸುತ್ತು ಬಂದು ಸತ್ತುಹೋಗಿದ್ದಾರೆ ಎಂದು ಹಬ್ಬಿಸಿದ್ದರು.

ಆದರೆ ಸಹೋದರ ರವೀಂದ್ರ ಬನ್ನೂರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಕೊಲೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವೆಂಕಟರಾಮುವನ್ನು ಕೊಂದವರು ಬೇರಾರು ಅಲ್ಲ ಅವರ ಪತ್ನಿ ಮತ್ತು ಈಕೆಯ ಪ್ರಿಯಕರ ಅವಿನಾಶ್. ವೆಂಕಟರಾಮು ಮತ್ತು ಉಮಾ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು.ತನಗಿಂತಲೂ ವೆಂಕಟರಾಮು 20 ವರ್ಷ ದೊಡ್ಡವರು ಎಂಬ ಕ್ಷುಲ್ಲಕ ಕಾರಣಕ್ಕೆ ಗಂಡನ ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ಅಜ್ಜಿ ಮನೆ ಸೇರಿದ್ದರು. ಅಜ್ಜಿ ಮನೆಗೆ ವೆಂಕಟರಾಮುವನ್ನು ಕರೆದುಕೊಂಡು ಕಾಫಿಯಲ್ಲಿ ನಿದ್ರೆ ಮಾತ್ರ ಹಾಕಿ ಗಂಡನಿಗೆ ಕುಡಿಸಿದ್ದಳು.

ನಂತರ ಆತ ನಿದ್ರೆಗೆ ಜಾರಿದ ಮೇಲೆ ಆತನ ಮರ್ಮಾಂಗವನ್ನು ಹಿಚುಕಿ ನಂತರ ದಿಂಬಿನಿಂದ ಅದುಮಿ ಉಸಿರುಗಟ್ಟಿಸಿ ಕೊಂದಿದ್ದಳು.

ಕೊಲೆಯಾದ ವೆಂಕಟರಾಮುಗೆ 50ವರ್ಷ, ಆರೋಪಿಗೆ ಉಮಾಗೆ 30 ವರ್ಷ. ಇಬ್ಬರ ನಡುವೆ 20ವರ್ಷಗಳ ಅಂತರವಿದ್ದು ಸಂಸಾರ ಬಿರುಕುಬಿಟ್ಟಿತ್ತು ಎಂದು ಹೇಳಲಾಗಿದೆ. ವೆಂಕಟರಾಮು ಕೊಲೆ ಮಾಡಲು ವಯಸ್ಸಿನ ಅಂತರ ಪ್ರಮುಖ ಕಾರಣ ಅಂತ ಪೊಲೀಸ್ ಮುಂದೆ ಆರೋಪಿ ಒಪ್ಪಿಕೊಂಡಿದ್ದಾಳೆ.

ಆರೋಪಿಯು ಮತ್ತು ಆಕೆಯ ಪ್ರಿಯಕರ ಅವಿನಾಶ್ ನನ್ನು ಪೊಲೀಸರು ಬಂಧಿಸಿದ್ದು, ಸದ್ಯ ಇಬ್ಬರು ಕಂಬಿ ಹಿಂದೆ ಬಂಧಿಯಾಗಿದ್ದಾರೆ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ