NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಪ್ರಕರಣ: ಶಾಸಕ ಮಹೇಶ್‌ಗೆ ಜವಾಬ್ದಾರಿ ವಹಿಸಿದ ಸಚಿವ ಶ್ರೀರಾಮುಲು

ವಜಾಗೊಂಡ ನೌಕರರು ನ. 20 ರೊಳಗೆ ಲೇಬರ್ ಕೋರ್ಟ್‌ನಲ್ಲಿ ಅರ್ಜಿ ಹಾಕಲು ಸೂಚನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ಅವರ ಮನೆಯಲ್ಲಿ ನ.10ರಂದು ಕೊಳ್ಳೇಗಾಲ ಶಾಸಕ ಮಹೇಶ್ ಮತ್ತು ಸಚಿವ ಶ್ರೀರಾಮುಲು ಅವರು ಚರ್ಚಿಸಿಸ ಬಳಿಕ ವಜಾ, ಅಮಾನತು, ವರ್ಗಾವಣೆ ಆದ ಸಾರಿಗೆ ನೌಕರರನ್ನು ಪುನರ್ ನೇಮಕ ಮಾಡುವ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ತಿಳಿಸಿದ್ದಾರೆ.

ಶ್ರೀರಾಮುಲು ಅವರು ಸಾರಿಗೆ ನೌಕರರ ಸಮಸ್ಯೆಗಳನ್ನು  ಬಗೆಹರಿಸೇಕೆಂಬ ಜವಾಬ್ದಾರಿಯನ್ನು ಕೊಳ್ಳೇಗಾಲ ಶಾಸಕ ಮಹೇಶ್ ಅವರಿಗೆ ನೀಡಿದ್ದಾರೆ. ಅದರಂತೆ ಮಹೇಶ್ ಅವರು ನಾನು ಮತ್ತು ಕೂಟದ ಪದಾಧಿಕಾರಿಗಳ ಜತೆ ಚರ್ಚೆ ಮಾಡಿ ವಜಾ, ಅಮಾನತು, ವರ್ಗಾವಣೆ ನೌಕರರ ಬಗ್ಗೆ ಮಾತನಾಡಲು ನಿನ್ನೆ (ನ.11) ಮಧ್ಯಾಹ್ನ 2 ಗಂಟೆಗೆ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸಿದ್ದರು.

ಮಹೇಶ್ ಅವರ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳು ಮತ್ತು ನಮ್ಮೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಜಾ ಆದ ಎಲ್ಲಾ ನೌಕರರು ಹತ್ತು ದಿನದ ಒಳಗೆ ಲೇಬರ್ ಕೋರ್ಟ್‌ನಲ್ಲಿ ಕೇಸ್‌ ಹಾಕಬೇಕು. ನಂತರ ಲೋಕ ಅದಾಲತ್ ಗೆ ಒಂದು ದಿನಾಂಕವನ್ನು ನಿಗದಿಪಡಿಸಿ ಅಂದು ಎಲ್ಲಾ ನೌಕರರನ್ನು ಪುನರ್ ನೇಮಕ ಮಾಡುತ್ತೇವೆ ಎಂದು ಲೇಬರ್ ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ವಜಾ ಆದ ನೌಕರರು ಇದೇ ನವೆಂಬರ್‌ 20 ರೊಳಗೆ ಲೇಬರ್ ಕೋರ್ಟ್‌ನಲ್ಲಿ ಅರ್ಜಿ ಹಾಕಬೇಕು. ಬಿಎಂಟಿಸಿ ನೌಕರರು ಬೆಂಗಳೂರು ಲೇಬರ್‌ ಕೋರ್ಟ್‌ನಲ್ಲಿ ಹಾಕಬೇಕು. ಉಳಿದ ksrtc,kkrtc,nwkrtc ವಜಾ ಆದ ನೌಕರರು ತಮ್ಮ ತಮ್ಮ ಜಿಲ್ಲೆಗಳ ಲೇಬರ್ ಕೋರ್ಟ್‌ನಲ್ಲಿ ಅರ್ಜಿ ಹಾಕಬೇಕು.

ಇನ್ನು ವರ್ಗಾವಣೆ ಆದ ನೌಕರರ ಬಗ್ಗೆ ಒಂದು ವಾರದಲ್ಲಿ ಎಂಡಿಗಳ ಜೊತೆಯಲ್ಲಿ ಸಭೆ ಏರ್ಪಡಿಸಿ ಅದನ್ನು ಬಗೆಹರಿಸುವುದಾಗಿ ಮಹೇಶ್ ಭರವಸೆ ನೀಡಿದ್ದಾರೆ.

ವಜಾ ಆದ ಎಲ್ಲಾ ನೌಕರರು ಲೇಬರ್ ಕೋರ್ಟ್‌ನಲ್ಲಿ ನ.20ರ ಒಳಗೆ ಅರ್ಜಿ ಹಾಕಬೇಕು. ಪ್ರಕರಣ ದಾಖಲಿಸದ ನೌಕರರಿಗೆ ಪುನರ್ ನೇಮಕಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ವಜಾ ಆದ ನೌಕರರು ಲೇಬರ್ ಕೋರ್ಟ್‌ನಲ್ಲಿ ಕೇಸು ದಾಖಲಿಸಿ ಎಂದು ಕೂಟದ ಅಧ್ಯಕ್ಷ ಚಂದ್ರ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ