ಮೈಸೂರು: ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮನನೊಂದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಿರುಕುಳ ನೀಡಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನಾ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಸರ್ಕಾರ ಜಿಲ್ಲಾ ಪಂಚಾಯಿತಿ ಸಿಇಒ ಪಿ.ಕೆ. ಮಿಶ್ರ ಅವರನ್ನು ವರ್ಗಾವಣೆ ಮಾಡಿದೆ. ಆದರೆ ಅದಕ್ಕೆ ಒಪ್ಪದ ವೈದ್ಯರು ಸಿಇಒ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಇದರಿಂದ ಕಳೆದ ಎರಡು ದಿನದಿಂದ ಯಾವುದೇ ಕೋವಿಡ್ ಟೆಸ್ಟ್ ಆಗಿಲ್ಲ. ಇದರಿಂದ ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಎಷ್ಟಾಗುವುದು ಎಂಬ ಭಯದಲ್ಲಿ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಆದರೆ ವೈದ್ಯರು ನಾವು ಪ್ರತಿಭಟನೆ ಕೈಬಿಡುತ್ತೇವೆ ನೀವು ಅಧಿಕಾರಿಯ ಪರ ನಿಂತು ತನಿಖೆಗೆ ಸೂಚಿಸಿದ್ದೀರಿ ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ತಿಳಿದು ಅಧಿಕಾರಿ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳುತ್ತಿದ್ದೀರಿ. ಅದೇ ರೀತಿ ಕೊರೊನಾ ವಾರಿಯರ್ಸ್‌ಗಳನ್ನು ಕೂಡಲೇ ಅಮಾನತು ಮಾಡದೇ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿದ ಬಳಿಕ ಅಮಾನತು ಮಾಡುತ್ತೇವೆ ಎಂದು ಲಿಖಿತ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ.
ಅದಕ್ಕೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವೈದ್ಯಕೀಯ ಶೀಕ್ಷಣ ಸಚಿವ ಡಾ.ಸುಧಾಕರ್ ನಿಮಗೆ ಇಷ್ಟವಿದ್ದರೆ ಕೆಲಸಮಾಡಿ ಇಲ್ಲದಿದ್ದರೆ ತೊಲಗಿ ಎಂದು ಖಾರವಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರಿಂದ ವೈದ್ಯ ಸಮೂಹ ಕೆರಳುವ ಸಾಧ್ಯತೆ ಹೆಚ್ಚಾಗಿದೆ.
Sachivare savadanavagi bageharisi iralarade iruve bittkobedi