ಬೆಂಗಳೂರು: ಕರ್ನಾಟಕ ಬಂದ್ ಕುರಿತು ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ರೈತ ಮುಖಂಡರ ಈ ನಡೆ ನೋಡಿದರೆ ಸರ್ಕಾರ ಮಾಡಿರುವುದನ್ನು ಬಹುತೇಕ ಒಪ್ಪಿಕೊಂಡಂತೆ ಕಾಣಿಸುತ್ತದೆ. ಈ ಪುರಷರ್ಥಕ್ಕಾಗಿ ಬಂದ್ಗೆ ಕರೆ ನೀಡಬೇಕಿತ್ತ ಎಂದು ಅಕ್ಷರ ತಿಳಿಯದ ಗ್ರಾಮೀಣ ರೈತರು ರೈತ ಸಂಘಟನೆ ಹೆಸರಿನಲ್ಲಿ ನವರಂಗಿ ಆಟ ಆಡುತ್ತಿರುವವರ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಇದನ್ನು ನೋಡಿದರೆ ರೈತ ಸಂಘಟನೆಗಳೇ ರೈತರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ ಎಂಬುವುದು ಸ್ಪಷ್ಟವಾಗುತ್ತಿದೆ. ಇದು ಅಲ್ಲದೆ ಸಂಘಟನೆಗಳ ಮುಖಂಡರ ನಡೆ ಒಬ್ಬ ಸಾಮಾನ್ಯ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಸಂಘಟನೆಗಳ ಮುಖಂಡರು ಕೆಲ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದು, ತಾವು ಹೇಳುವುದೊಂದು ಮಾಡುವುದೊಂದು ಎಂಬ ನೀತಿಯನ್ನು ಅಳವಡಿಸಿಕೊಂಡಿದ್ದಾರೆ.
ಇಂದು ಜೂಮ್ ಮೀಟಿಂಗ್ನಲ್ಲಿ ವಿವಿಧ ರೈತ ಮುಖಂಡರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ , ಸೆಪ್ಟೆಂಬರ್ 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ರಾಷ್ಟ್ರಿಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಇದೀಗ ಅಧಿವೇಶನ ನಡೆಯುತ್ತಿದ್ದು, ಸದನಲ್ಲಿ ಈ ಕುರಿತು ಚರ್ಚಿಸಿ ಸರ್ಕಾರ ಬಿಲ್ ಹಿಂಪಡೆಯದಿದ್ದರೆ ಬಂದ್ ಸಮಯವನ್ನು ಪ್ರಕಟ ಮಾಡುತ್ತೇವೆ ಎಂದು ರೈತರ ಮತ್ತು ಹೋರಾಟದ ದಿಕ್ಕನ್ನೇ ಬದಲಿಸುವ ಮಾತುಗಳನ್ನಾಡಿದ್ದಾರೆ. ಇಂಥ ರೈತರ ಮುಖಂಡರಿಂದ ರೈತರಿಗೆ ಸಹಾಯವಾಗುತ್ತದೆ ಎಂದು ಹೇಳಬೇಕೆ ಎಂಬುವುದು ರೈತರ ಆಕ್ರೋಶವಾಘಿದೆ.
ಇನ್ನು ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ಬಂದ್ಗೆ ಕರೆ ಕೊಟ್ಟಿದೆ. ಪಂಜಾಬ್ ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಚಳವಳಿ ತೀವ್ರವಾಗಿ ನಡೆಯುತ್ತಿದೆ. ಈ ಬಂದ್ಗೆ ನಾವು ಬೆಂಬಲ ಕೊಡುತ್ತೇವೆ. ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆಯನ್ನು ಕೈಬಿಟ್ಟರೆ ರಾಜ್ಯ ರೈತಸಂಘದಿಂದ ಬಂದ್ ಇರಲ್ಲ. ಒಂದು ವೇಳೆ ಇದೇ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದರೆ ಬಂದ್ ಮಾಡುತ್ತೇವೆ. ಪ್ರತಿಭಟನೆ ನೋಡಿ ಯಡಿಯೂರಪ್ಪನವರು ಮನಸ್ಸು ಬದಲಿಸಬಹುದು, ಕಾದುನೋಡುತ್ತೇವೆ ಎಂದು ತಿಳಿಸಿದ್ದಾರೆ.
ರೈತ ಸಂಘಟನೆಗಳ ಮುಖಂಡರ ಮೂರ್ಖ ತನದ ಪರಮಾವಧಿಯಿಂದ ಕಳೆದ 2-3 ದಶಕದಿಂದ ಸಂಘಟನೆಗಳು ನಮ್ಮ ಹೋರಾಟದ ಬಲವನ್ನು ಕಳೆದುಕೊಳ್ಳುತ್ತಿವೆ. ಇನ್ನಾದರೂ ಈ ರೀತಿಯ ಬೇಕಾಬಿಟ್ಟಿ ಹೋರಾಟದ ಬದಲು ಒಂದು ಮೌಲ್ಯಯುತ ಹೋರಾಟ ನಡೆಸಬೇಕಿದೆ.
Chenagi heliddare