ಬಾಗಲಕೋಟೆ: ಘಟಪ್ರಭಾ ಕ್ಯಾಚಮೆಂಟ್ ಏರಿಯಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ 70 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತಿರುವದರಿಂದ ರೈತರು ಹಾಗೂ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.
ಹಿಡಕಲ್ ಡ್ಯಾಮ್‍ನಿಂದ 40 ಸಾವಿರ, ಹಿರಣ್ಯಕೇಶಿಯಿಂದ 13 ಸಾವಿರ, ಬಳ್ಳಾರಿ ನಾಲೆಯಿಂದ 9 ಸಾವಿರ ಹಾಗೂ ಹಳ್ಳಕೊಳ್ಳಗಳಿಂದ ಒಟ್ಟಾರೆಯಾಗಿ 70 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವದರಿಂದ ರೈತರು ಮತ್ತು ಸಾರ್ವಜನಿಕರು ನದಿಯ ದಡದಲ್ಲಿರುವ ಪಂಪ್ಸೆಟ್, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುಬೇಕು.
ಅಲ್ಲದೇ ಒಕ್ಕಲುತನದ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುವದರ ಜತೆಗೆ ಜಾಗೃತರಾಗಬೇಕು. ಮಳೆ ಹೆಚ್ಚಾಗಿರುವದರಿಂದ ತಮ್ಮ ತಮ್ಮ ಮನೆಯಿಂದ ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.