ಹಳೇ ಮೈಸೂರು ಭಾಗದಲ್ಲಿ ಗೊಂಡೆಗಿಡ ಎಂದೂ ಉಳಿದ ಇತರೆಡೆ ಮೂಡುಗಟ್ಟಿನ ಗಿಡ, ಕರಂಡೆ ಮುಂಡಿ , ಗೊರಖ್ ಮುಂಡಿ, ಬೋಡಸರಮು, ಬೋಡತರಮು, ಕೊಟ್ಟಕಾರಂಡೈ ಮಣ್ಣಿ, ಶ್ರಾವಣಿ (ಮುಂಡರಿಕ) ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.
ಈ ಗಿಡವು ತೇವಾಂಶ ಇರುವ ಭೂಮಿಯಲ್ಲಿ ಹುಲುಸಾಗಿ ಬೆಳೆಯುತ್ತದೆ. ತೋಟ ಗದ್ದೆಗಳ ಬದಿಗಳ ಮೇಲೆ, ನೀರು ಹರಿಯುವ ಕಾಲುವೆಗಳ ಪಕ್ಕ,ಕೆರೆ ಕುಂಟೆ ಅಂಗಳದಲ್ಲಿ ಬೆಳೆಯುತ್ತದೆ. ಗಿಡವನ್ನು ಮುಟ್ಟಿದರೆ ಅಂಟು ಅಂಟಾಗಿದ್ದು, ಒಳ್ಳೆಯ ಸುವಾಸನೆ ಬೀರುತ್ತೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಮೂಡುಗಟ್ಟಿನ ಗಿಡದ ಎಲೆಗಳನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು,ದಿನವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ಗ್ರಾಂ ನಂತೆ ಸೇವಿಸುತ್ತಾ ಬಂದರೆ,ಚರ್ಮ ವ್ಯಾಧಿಗಳು ಗುಣವಾಗುತ್ತೆ. ದೇಹದಲ್ಲಿ ರಕ್ತ ಶುದ್ದಿಯಾಗುತ್ತೆ.
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಇದರ ಹೂವುಗಳನ್ನು ತಂದು ಒಣಗಿಸಿ 1 ಗ್ರಾಂ ನಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ದಿನಕ್ಕೊಂದು ಬಾರಿ ಸೇವಿಸುತ್ತಾ ಬಂದರೆ ದೇಹವು ತಂಪಾಗುತ್ತೆ.
ಈ ಗಿಡವನ್ನು ಸಮೂಲ ಸಹಿತ ತಂದು, ನುಣ್ಣಿಗೆ ಅರೆದು 5 ಗ್ರಾಂ ಪೇಸ್ಟನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ, ಮೂಲವ್ಯಾಧಿ ಗುಣವಾಗುತ್ತೆ. ಇದರ ಸಮೂಲ ಚೂರ್ಣ 3 ಗ್ರಾಂ ಒಣ ಶುಂಠಿ ಚೂರ್ಣ 3 ಗ್ರಾಂ ಬಿಸಿನೀರಿನಲ್ಲಿ ಕಲಸಿ ಸೇವಿಸಿದರೆ ಕೀಲುನೋವು ಗುಣವಾಗುತ್ತೆ. ಮೂಡುಗಟ್ಟಿನ ಸಮೂಲದ 10 ಮಿಲಿ ರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಎಲ್ಲಾ ರೀತಿಯ ತಲೆನೋವುಗಳು(ಶಿರೋವ್ಯಾಧಿಗಳು) ವಾಸಿಯಾಗುತ್ತವೆ.
ಹೆಂಗಸರಿಗೆ ಋತಶ್ರಾವದ ಸಮಯದಲ್ಲಿ ಅಧಿಕ ರಕ್ತ ಹೋಗುತ್ತಿದ್ದರೆ, ಮೂಡುಗಟ್ಟಿನ ಗಿಡದ ಸಮೂಲದ ಚೂರ್ಣವನ್ನು ದಿನಕ್ಕೆ 3 ಗ್ರಾಂ ನಂತೆ ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ, ಅಧಿಕ ರಕ್ತಶ್ರಾವ ನಿಲ್ಲುತ್ತೆ, ಋತುಶ್ರಾವ ಕ್ರಮಬದ್ಧವಾಗುತ್ತೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ವರ್ಷಕ್ಕೆ ಒಂದು ಬಾರಿ ಇದರ ಒಂದು ಹೂವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಂಗಿ ನೀರು ಕುಡಿದರೆ, ಕಣ್ಣುಗಳನ್ನು ಆರೋಗ್ಯವಾಗಿಡುತ್ತೆ, ದೃಷ್ಟಿ ಹೆಚ್ಚುತ್ತೆ,ಕಣ್ಣಿನ ಮೇಲೆ ಪೊರೆ ಬಾರದಂತೆ ಕಣ್ಣನ್ನು ಕಾಪಾಡುತ್ತೆ.ಈ ರೀತಿಯಾಗಿ ಎಷ್ಟು ವರ್ಷ ಮಾಡುತ್ತೇವೋ, ಅಷ್ಟು ವರ್ಷ ಕಣ್ಣಿನಲ್ಲಿ ಪೊರೆ ಬರುವುದಿಲ್ಲವೆಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಹೂವನ್ನು ನುಂಗಿದ ನಂತರ ಒಂದು ಗಂಟೆ ಹೊಟ್ಟೆಗೆ ಏನನ್ನು ಸೇವಿಸಬಾರದು.
ಸೂಚನೆ: ಸೇವಿಸುವುದಕ್ಕೂ ಮುಂಚೆ ಆಯುರ್ವೇದ ಪಂಡಿತರ ಸಲಹೆ ಸೂಚನೆಗನ್ನು ಪಾಲಿಸುವುದು ಅತಿ ಅವಶ್ಯ.
ಪ್ರೀತಿಯ ವಿಜಯಪಥ ಓದುಗರೆ
ಮುಂದಿ ಭಾನುವಾರ ಮತ್ತೊಂದು ಅಮೂಲ್ಯ ಗಿಡದೊಂದಿಗೆ ಭೇಟಿಯಾಗೋಣ.
Super