ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವರ್ತೂರಿನಲ್ಲಿ ನಡೆದಿದೆ.
ವರ್ತೂರು ನಿವಾಸಿ ಪದ್ಮಾವತಿ (39) ಆತ್ಮಹತ್ಯೆ ಮಾಡಿಕೊಂಡವರು. ಪದ್ಮಾವತಿಯ ಪತಿ ಭಾಸ್ಕರ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಆದರೆ ಆತ ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಆಕೆ ತನ್ನ ಪ್ರಾಣವನ್ನೇ ತೆತ್ತಿದ್ದಾಳೆ.
ಈಕೆ 15 ವರ್ಷದ ಹಿಂದೆ ಸಾಫ್ಟ್ ವೇರ್ ಇಂಜಿನಿಯರ್ ಭಾಸ್ಕರ್ ನನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ಗಂಡು ಮಗುವಿದೆ.
ಭಾಸ್ಕರ್ ಮೋಜು- ಮಸ್ತಿ ಅಂತ ತೇಲಾಡುತ್ತಿದ್ದ. ಅಲ್ಲದೆ ಪಾರ್ಟಿಗಳಿಗೂ [ಪತ್ನಿಯನ್ನು ಕರೆದುಕೊಂಡು ಹೋಗಿ, ಡಾನ್ಸ್ ಮಾಡುವಂತೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಇನ್ನು ಈ ಕರಾತಕ ಬೇರೆಯವರ ಜತೆ ಡಾನ್ಸ್ ಮಾಡುತ್ತಿದ್ದಲ್ಲದೇ ತನ್ನ ಪತ್ನಿಯನ್ನು ಪರಪುರುಷರೊಂದಿಗೆ ಡಾನ್ಸ್ ಮಾಡುವಂತೆ ಪಾರ್ಟಿಗಳಲ್ಲಿ ತಾಕೀತು ಮಾಡುತ್ತಿದ್ದ, ಒಂದು ವೇಳೆ ಒಪ್ಪದಿದ್ದರೆ ನಿಂದಿಸುತ್ತಿದ್ದ ಎಂಬ ಆರೋಪ ಭಾಸ್ಕರನ ವಿರುದ್ಧ ಕೇಳಿ ಬಂದಿದೆ.
ಪತಿ ಈ ರೀತಿ ನೀಡುತ್ತಿದ್ದ ಮಾನಸಿಕ ಕಿರುಕುಳ ಸಹಿಸಲಾಗದೇ ಬೇಸತ್ತ ಪದ್ಮಾವತಿ ಈ ಮೊದಲು ಮೂರು ಬಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಆದರೆ ನಾಲ್ಕನೇ ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವರ್ತೂರ್ ಠಾಣೆಯ ಪೊಲೀಸರು ಭಾಸ್ಕರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.