ಬೆಂಗಳೂರು: ಕೊರೊನಾ ವಿಶ್ವಮಾರಿ ಕರ್ನಾಟಕದಲ್ಲಿ ಭಾರಿ ಸಾವು ನೋವುಗನ್ನೇ ದಾಖಲಿಸಿದ್ದು, ಈ ನಡುವೆ ರಾಜ್ಯದಲ್ಲಿ ಲಸಿಕಾ ಕಾರ್ಯ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದು ಹೀಗೇ ಮುಂದುವರಿದರೆ ಮೂರನೇ ಅಲೆ ತಡೆಯುವ ಸಂಭವ ತೀರಾ ಕಡಿಮೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು,ತ್ವರಿತವಾಗಿ, ಹೆಚ್ಚಿನ ಪ್ರಮಾಣದಲ್ಲಿ, ಪರಿಣಾಮಕಾರಿಯಾಗಿ ನಾವು ಲಸಿಕೆ ವಿತರಣೆ ನಡೆಸಬೇಕಿದೆ ಎಂದು ಸಲಹೆ ನೀಡಿದ್ದಾರೆ.