Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯ

MSRTC ನೌಕರರ ಮುಷ್ಕರ: ಅಮಾನತು ಆದೇಶ ನೋಡಿ ಮೂರ್ಛೆಹೋದ ನೌಕರ- ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ) ಮುಷ್ಕರ ನಿರತರನ್ನು ಗುರಿಯಾಗಿಸಿಕೊಂಡು ಅಮಾನತು ಮಾಡುತ್ತಿದೆ. ಚಾಲಕರೊಬ್ಬರು ಅಮಾನತು ಆದೇಶ ನೋಡಿ ಭಯಗೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮೂರ್ಛೆಹೋಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಈ ಘಟನೆ ನಡೆದಿದ್ದು, 33 ವರ್ಷದ ಬಾಪು ಗಡಸಿಂಗ್ ಮಾರುತಿ ಎಂಬ ಚಾಲಕನೆ ಆಸ್ಪತ್ರೆ ಸೇರಿರುವವರು. ಅವರು ಮುಷ್ಕರ ನಿರತ ನೌಕರರ ಭಾಗವಾಗಿದ್ದು, ಶಿವಾಜಿನಗರ ಡಿಪೋದಲ್ಲಿ ಪ್ರತಿಭಟನಾ ನಿತರೊಂದಿಗೆ ಇದ್ದರು. ಅದನ್ನು ಗಮನಿಸಿದ ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮುನ್ನಾ ಮಧ್ಯಾಹ್ನದ ಊಟಕ್ಕೆಂದು ಧನೋರಿಯಲ್ಲಿರುವ ತನ್ನ ಮನೆಗೆ ಹೋಗಿದ್ದ ಚಾಲಕ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮುಷ್ಕರ ನಿರತ ಮತ್ತೊಬ್ಬ ನೌಕರ ಸಂಜಯ್ ಮುಂಢೆ ತಿಳಿಸಿದ್ದಾರೆ.

ಇದುವರೆಗೆ, ರಾಜ್ಯಾದ್ಯಂತ 7,585 ಕ್ಕೂ ಹೆಚ್ಚು ಕಾರ್ಮಿಕರನ್ನು MSRTC ಅಮಾನತುಗೊಳಿಸಿದೆ. ಆದರೂ ನಾವು ಈ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ನಮ್ಮ ನೌಕರರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಲು ರಾಜ್ಯ ಸರ್ಕಾರ ಈ ಅಮಾನತು ಎಂಬ ಅಂತಿಮ ಕಾರ್ಡ್ ಅನ್ನು ಪ್ಲೇ ಮಾಡುತ್ತಿದೆ. ಇದರಿಂದ ಅನೇಕ ನೌಕರರು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುತ್ತಿದ್ದಾರೆ. ಆದರೂ ನಾವು ಅವರ ಈ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.

ಇನ್ನು ಇಂದಿನ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇನ್ನೂ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕೆಲಸಕ್ಕೆ ಮರಳುವ ಮೂಲಕ ಶೇ.100 ರಷ್ಟು ಬಸ್‌ಗಳು ರಸ್ತೆಗಿಳಿಯುವ ವಿಶ್ವಾಸವಿದೆ ಎಂದು ಪುಣೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌ KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ? ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್‌ ದರ ಹೆಚ್ಚಳ: ಪಟ್ಟಿ ರಿಲೀಸ್​ ಮಾಡಿದ ಸಾರಿಗ... KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ