ಮುಂಬೈ: ಎಂಎಸ್‌ಆರ್‌ಟಿಸಿ ನೌಕರರಿಗೆ ಮುಷ್ಕರ ವೇಳೆ ಘೋಷಣೆ ಮಾಡಿದಂತೆ ವೇತನ ಹೆಚ್ಚಳ ಮಾಡಿದ ನಂತರದ ಮೊದಲ ತಿಂಗಳ ನವೆಂಬರ್‌ನ ಪರಿಷ್ಕೃತ ವೇತನವನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಆದರೆ, ನೌಕರರು ವೇತನ ಹೆಚ್ಚಳದಲ್ಲಿ ತಾರತಮ್ಯತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವೆಂಬರ್ 25 ರಂದು ಪರಬ್ ಅವರು 1-10 ವರ್ಷಗಳಿಂದ ಸೇವೆಯಲ್ಲಿರುವವರಿಗೆ ಮೂಲ ವೇತನದಲ್ಲಿ ಮಾಸಿಕ 5,000 ರೂ., 11-20 ವರ್ಷಗಳ ಸೇವೆಗೆ 4,000 ರೂ. ಮತ್ತು ಕಳೆದ 20 ವರ್ಷ, ಅದಕ್ಕೂ ಮೇಲ್ಪಟ್ಟು ನಿಗದಮದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೇವಲ 2,500 ರೂ. ಮಾಸಿಕ ಭತ್ಯೆಯನ್ನೂ ಹೆಚ್ಚಿದ್ದಾರೆ.
ಆದರೆ, ಇದರಿಂದ ನೌಕರರು ಅಸಮಾಧಾನಗೊಂಡಿರುವುದಕ್ಕೆ ಅಧಿಕಾರಿಗಳೊಬ್ಬರು ಹೇಳಿಕೆ ನೀಡಿದ್ದು, ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡದ ಪರಿಣಾಮ,8-9 ವರ್ಷ ಕೆಲಸ ಮಾಡಿರುವ ಸಿಬ್ಬಂದಿಗಳ ವೇತನವು 12 ರಿಂದ 13 ವರ್ಷಗಳವರೆಗೆ ಕೆಲಸ ಮಾಡುವವರಿಗಿಂತ ಹೆಚ್ಚಾಗಿದೆ. ಇದು ಹಿರಿಯ ನೌಕರರ ಅಸಮಾಧಾನಕ್ಕೆ ಕಾರಣವಾಗಿ ಎಂದು ಅವರು ಕೂಡ ಬೇಸದ ವ್ಯಕ್ತಪಡಿಸಿದ್ದಾರೆ.
ಇದು ಹಿರಿಯ ಸಿಬ್ಬಂದಿಯಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಸಂಬಂಧ ಹಲವು ನೌಕರರು ತಮ್ಮ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ ಮತ್ತು ಪರಿಹಾರವನ್ನು ಶೀಘ್ರದಲ್ಲೇ ಕಂಡುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮುಷ್ಕರ ನಿರತ ನೌಕರರೊಬ್ಬರು ಹೇಳಿದ್ದಾರೆ.
ಈ ಪರಿಷ್ಕೃತ ವೇತನವನ್ನು ಮುಷ್ಕರದಲ್ಲಿ ಪಾಲ್ಗೊಂಡಿರುವ ಸುಮಾರು 73,000 ನೌಕರರು ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ. ಏಕೆಂದರೆ ಅವರು ಕೆಲಸಕ್ಕೆ ಹಾಜರಾದ ದಿನಗಳವರೆಗಷ್ಟೇ ವೇತನವನ್ನು ಪಾವತಿಸಲಾಗಿದೆ.
ಪ್ರತಿದಿನ ಕೆಲಸಕ್ಕೆ ಹಾಜರಾಗುವ ಉದ್ಯೋಗಿಗಳಿಗೆ ಪೂರ್ಣ ವೇತನವನ್ನು ನೀಡಲಾಗುತ್ತದೆ. ಇತರರು ಅವರ ಹಾಜರಾತಿಯನ್ನು ಆಧರಿಸಿ ಭಾಗಶಃ. ಒಂದೇ ಒಂದು ದಿನ ಹಾಜರಾಗದ ನೌಕರರಿಗೆ ಆ ದಿನದ ವೇತನವನ್ನೂ ಸಹ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.