CrimeNEWSದೇಶ-ವಿದೇಶ

6 ವರ್ಷದ ಬಾಲಕಿಯ ಮೇಲೆ ಅಜ್ಜ, ಮಾವನಿಂದಲೇ ಅತ್ಯಾಚಾರ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಭೂಪಾಲ್: ಮಧ್ಯಪ್ರದೇಶದ ರಾಜಧಾನಿಯಲ್ಲಿ 6 ವರ್ಷದ ಪುಟ್ಟ ಬಾಲಕಿಯ ಮೇಲೆ ಅಜ್ಜ ಹಾಗೂ ಮಾವ ಇಬ್ಬರೂ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇದನ್ನು ನೋಡಿದರೆ ನಿತ್ಯ ಹೆಣ್ಣು ಮಕ್ಕಳು ಅತ್ಯಾಚಾರದ ಬೆಂಕಿಯಲ್ಲಿ ಬೇಯುತ್ತಲೇ ಇದ್ದಾರೆ. ಅಪ್ರಾಪ್ತೆಯರ ಮೇಲೆ ಕುಟುಂಬಸ್ಥರೇ ನಡೆಸುವ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು, ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದ್ರೂ ಇಂಥ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬುವುದೇ ಖೇದಕರ ಸಂಗತಿ.

6 ವರ್ಷದ ಪುಟ್ಟ ಬಾಲಕಿ ತನ್ನ ತಮ್ಮನೊಂದಿಗೆ ಎಂದಿನಂತೆ ಆಟವಾಡುತ್ತಿದ್ದಳು. ಬಾಲಕಿಯ ತಾಯಿಯ ಸೋದರನೇ ಆದ ಆರೋಪಿ ಇಬ್ಬರು ಮಕ್ಕಳಿಗೂ ಸಮೋಸ ಕೊಡಿಸುವುದಾಗಿ ಆಸೆ ತೋರಿಸಿದ್ದಾನೆ.

ಖುಷಿಯಿಂದಲೇ ಹೊರಟ ಇಬ್ಬರು ಮಕ್ಕಳನ್ನು ಆರೋಪಿ ಮಾವ ಸಂಬಂಧಿಕರ ಮನೆಯೊಂದಕ್ಕೆ ಕರೆ ತಂದಿದ್ದಾನೆ. ಅಲ್ಲಿ ಬಾಲಕಿಯ ತಾಯಿಯ ತಂದೆಯೂ ಇದ್ದನು. ಅಜ್ಜ-ಮಾವನನ್ನು ಕಂಡು ಸಂಭ್ರಮಿಸುತ್ತಿದ್ದ ಬಾಲಕಿ ಮೇಲೆ ಈ ಕಾಮುಕರಿಗೆ ಕರುಣೆಯೇ ಬಂದಿಲ್ಲ. ಇಬ್ಬರು ದುರುಳರು ಆಟವಾಡುತ್ತಿದ್ದ ಬಾಲಕಿಯ ಮೇಲೆ ಅಮಾನುಷ ಕೃತ್ಯವೆಸಗಿದ್ದಾರೆ.

ಮೊಮ್ಮಗಳು ಎಂಬ ಸಂಬಂಧವನ್ನೇ ಮರೆತು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಈ ಹೀನ ಕೃತ್ಯವೆಸಗಿದ್ದಾರೆ. ಬಾಲಕಿಯ ಜೊತೆಯಲ್ಲೇ ಬಂದಿದ್ದ ತಮ್ಮನ ಎದುರಲ್ಲೇ ಅಮಾನುಷವಾಗಿ ವರ್ತಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಇಬ್ಬರು ಮಕ್ಕಳಿಗೆ ಆರೋಪಿಗಳು ಸಮೋಸ ಕೊಡಿಸಿದ್ದಾರೆ. ಯಾರಿಗೂ ಏನನ್ನೂ ಹೇಳದಂತೆ ಬಾಲಕಿಗೆ 20 ರೂಪಾಯಿ ಕೊಟ್ಟು ಮನೆಗೆ ಕರೆ ತಂದು ಬಿಟ್ಟು ಹೋಗಿದ್ದಾರೆ.

ಸದಾ ಲವಲವಿಕೆಯಿಂದ ಮುದ್ದು ಮುದ್ದಾಗಿ ಮಾತನಾಡುತ್ತಿದ್ದ ಬಾಲಕಿ ಘಟನೆ ಬಳಿಕ ಮಂಕಾಗಿದ್ದಳು. ಯಾರೊಂದಿಗೆ ಮಾತನಾಡದೇ ಇದ್ದಿದ್ದನ್ನು ಬಾಲಕಿಯ ತಾಯಿ ಗಮನಿಸಿದ್ದಾರೆ. ಏನಾಯಿತು ಎಂದು ವಿಚಾರಿಸಿದ್ದಾರೆ. ತೀವ್ರವಾಗಿ ಹೆದರಿದ್ದ ಬಾಲಕಿ ಮೊದಲು ಏನನ್ನೂ ಹೇಳಲಿಲ್ಲ. ನಂತರ ತಾಯಿ ಬಳಿ ಅಜ್ಜ, ಮಾವ ತನ್ನೊಂದಿಗೆ ಹೇಗೆ ನಡೆದುಕೊಂಡರು ಎಂದು ಹೇಳಿಕೊಂಡಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿಗೆ ಆಘಾತವಾಗಿದೆ. ತಂದೆ, ಸೋದರನೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುವುದು ಘಟನೆ ನಡೆದ ಆರೇಳು ದಿನಗಳ ಬಳಿಕ ಗೊತ್ತಾಗಿದೆ. ಕೂಡಲೇ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಡಿದ್ದಾರೆ. 48 ವರ್ಷದ ಅಜ್ಜ ಹಾಗೂ 20 ವರ್ಷದ ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಆರೋಪಿಗಳು ಕಂಬಿ ಹಿಂದೆ ಬಂಧಿಯಾಗಿದ್ದಾರೆ.

Leave a Reply

error: Content is protected !!
LATEST
ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ