ಬೆಂಗಳೂರು: ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎನ್ ಕಿರಣ್ ಕುಮಾರ್ ಅಲಿಯಾಸ್ ಯಶವಂತ ಪೂಜಾರಿ (46) ಬಂಧಿತ ಆರೋಪಿ. ಈತನಿಂದ ಪೊಲೀಸರು 15 ಲಕ್ಷ ರೂ. ನಗದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿದ್ದರು.
ಆರ್ ಟಿ ನಗರದ ಗಿಡ್ಡಪ್ಪ ಬ್ಲಾಕ್ ನಿವಾಸಿಯಾದ ಕಿರಣ್ ಕುಮಾರ್ ಐಪಿಎಲ್ ಆರಂಭವಾದಾಗಿನಿಂದಲೂ ಬೆಟ್ಟಿಂಗ್ ನಡೆಸುತ್ತಿದ್ದ ಮೊಬೈಲ್ ಜಾಲತಾಣಗಳ ಮೂಲಕ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್ ಆಗೋ ದೆಹಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಸೋಲು-ಗೆಲುವು ಲೆಕ್ಕಚಾರದಲ್ಲಿ ಆರೋಪಿ ಬೆಟ್ಟಿಂಗ್ ಕಟ್ಟಿಸಿಕೊಂಡಿದ್ದ. ಫೋನ್, ವ್ಯಾಟ್ಸ್ ಆಪ್ ಮೂಲಕ ದಂಧೆಕೋರರನ್ನು ಸಂಪರ್ಕಸುತ್ತಿದ್ದ ಹಾಗೂ ಗೆದವರಿಗೆ ಹಣ , ಸೋತವರಿಂದ ಹಣವನ್ನು ಕಾನೂನು ಬಾಹಿರವಾಗಿ ಆನ್ ಲೈನ್ ಮೂಲಕ ಪಡೆಯುತ್ತಿದ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ