CrimeNEWSಸಂಸ್ಕೃತಿ

ಹೆಣ್ಣು ಮಗು ಹುಟ್ಟಿದಕ್ಕೆ ದಾಂಪತ್ಯ ಜೀವನದಲ್ಲಿ ಬಿರುಕು – ಮದುವೆಯಾದ ವರ್ಷಕ್ಕೇ ಠಾಣೆ ಮೆಟ್ಟಿಲೇರಿದ ದಂಪತಿ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಹೆಣ್ಣು ಮಗು ಹುಟ್ಟಿದೇ ಎಂಬ ಕಾರಣಕ್ಕೆ ಗಂಡ ಹೆಂಡತಿ ನಡುವೆ ಉಂಟಾದ ಜಗಳ, ಮದುವೆಯಾದ ಒಂದೇ ವರ್ಷಕ್ಕೆ ಠಾಣೆ ಮೆಟ್ಟಿಲೇರಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ನಡಸೆದಿದೆ.

ಮಂಚೇನಹಳ್ಳಿ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಯ ಮಗಳು ಬಿಎಸ್ಸಿ ಅಗ್ರಿಕಲ್ಚರ್ ಪದವೀಧರೆ ಕರಿಷ್ಮಾಳನ್ನು ಗೌರಿಬಿದನೂರು ತಾಲೂಕಿನ ಕೆಎಸ್‌ಆರ್‌ಟಿಸಿ ನೌಕರನ ಮಗ ಕಲಂದರ್ ಖಾನ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾಗಿ ಒಂದು ವರ್ಷ ತುಂಬಿದೆ. ಆಗಲೇ ಈ ಜೋಡಿಯ ಮಧ್ಯೆ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಕರಿಷ್ಮಾಗೆ ಮದುವೆಯಾದ ಮೇಲೆ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಲ್ಯಾಬ್ ಸಹಾಯಕಿಯಾಗಿ ಸರ್ಕಾರಿ ಹುದ್ದೆ ಸಿಕ್ಕಿದೆ. ಕರಿಷ್ಮಾ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇದ್ದರೆ, ಗಂಡ ಪತ್ನಿಯ ಜೊತೆ ಹೋಗದೆ ತಂದೆ ತಾಯಿಯ ಜೊತೆ ಗೌರಿಬಿದನೂರಿನಲ್ಲಿಇದ್ದರಾರೆ.

ಇದರಿಂದ ಇಬ್ಬರ ಮಧ್ಯೆ ವೈಮನಸ್ಸು ಮೂಡಿದೆ. ಇನ್ನೂ ಎರಡು ತಿಂಗಳ ಹಿಂದೆ ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಮಗು ಜನಿಸಿದ ಕಾರಣ ಮಗುವಿನ ತೂಕದಲ್ಲಿ ಹಾಗೂ ಆರೋಗ್ಯದಲ್ಲಿ ಏರು ಪೇರಾಗಿತ್ತು.

ಇಷ್ಟಕ್ಕೇ ವಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲಿತ್ತು ಎಂಬಂತೆ ರೊಚ್ಚಿಗೆದ್ದ ಕಲಂದರ್ ಹಾಗೂ ಆತನ ತಾಯಿ, ಹೆಣ್ಣು ಮಗು ಜನಿಸಿದ್ದಕ್ಕೆ 10 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಮನೆಗೆ ಬಾ ಇಲ್ಲವೆಂದ್ರೆ ಬೇಡ ಅಂತ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ಮನನೊಂದ ಕರಿಷ್ಮಾ ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿ ಇದ್ದಾಳೆ.

ಆದರೆ ಮಾತುಕತೆಗೆ ಅಂತ ಮಾವನ ಮನೆಗೆ ಬಂದ ಅಳಿಮಯ್ಯ ಹಾಗೂ ಆತನ ಸಂಬಂಧಿಗಳು, ಕರಿಷ್ಮಾ ಹಾಗೂ ಆಕೆಯ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಕರಿಷ್ಮಾ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆದ್ರೆ ಇತ್ತ ಕಲಂದರ್ ಮಾತ್ರ ಪತ್ನಿ ಆರೋಪವೆ ಸುಳ್ಳು, ಸಂಪ್ರದಾಯದಂತೆ ಬುರ್ಕಾ ಹಾಕಿಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಮಾಡ್ತಿದ್ದಾರೆ. ಮಾತುಕತೆಗೆ ಹೋದಾಗ ಪರಸ್ಪರ ತಳ್ಳಾಟ ನೂಕಾಟ ಗಲಾಟೆ ಆಗಿದ್ದು ನಿಜ, ಆದ್ರೆ ತನಗೆ ತನ್ನ ಪತ್ನಿ ಬೇಕು ಎಂದಿದ್ದಾನೆ.

ಇನ್ನೂ ಮದುವೆಯಾಗಿ ಒಂದು ವರ್ಷ ಆಗಿದೆ, ಇಬ್ಬರು ವಿದ್ಯಾವಂತರು, ಅದರಲ್ಲಿ ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದೆ. ಎರಡು ತಿಂಗಳ ಮಗುವಿದೆ, ನೆಮ್ಮದಿಯಾಗಿ ಜೀವನ ಮಾಡೋ ಬದಲು ಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ ಅಂತ ಮಂಚೇನಹಳ್ಳಿ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ, ಸುಖವಾಗಿ ಸಂಸಾರ ನಡೆಸಿ ಅಂತ ತಿಳಿಹೇಳಿ ಕಳುಹಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ