ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಲಸಿಗರಿಗೆ ಡಮ್ಮಿ ಖಾತೆ ನೀಡುವ ಮೂಲಕ ಅವರನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಒಮ್ಮೆ ಬಳಸಿ ಎಸೆಯುವ (ಯೂಸ್ ಅಂಡ್ ಥ್ರೋ ) ವಸ್ತುಗಳಾಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್-ಕಾಂಗ್ರೆಸ್ ನಿಂದ ಹೋಗಿ ಬಿಜೆಪಿ ಸೇರಿರುವ ಶಾಸಕರಿಗೆ ಅನ್ಯಾಯ ಮಾಡಿದ್ದಾರೆ. ಈ ಅನುಭವ ಅವರಿಗೆ ಆಗುತ್ತಿರುವುದು ಅವರಿಗೆ ರಾಜಕೀಯದ ಒಂದು ಪಾಠ ಎಂದು ಹೇಳಿದರು.
ನಾನು ವಿಧಾನಸಭೆಯಲ್ಲಿ ಈ ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯವಾಗಿ ಸಮಾಧಿ ಆಗುತ್ತಿದ್ದರೆಂದು. ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಐಸಿಯು, ವೆಂಟಿಲೇಟರ್ನಲ್ಲಿ ನಡೆಯುತ್ತಿದೆ ಎಂದು ಕಿಚ್ಚಾಯಿಸಿದರು.
ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಅವರ ಕಥೆ ಈಗ ಏನಾಗಿದೆ ನೋಡಿ. ಎಂಟಿಬಿ ನಾಗರಾಜ್ಗೆ ಈ ಮೊದಲು ವಸತಿ ಖಾತೆ ಇತ್ತು. ಪಾಪ ಈಗ ಏನಾಗುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ.