ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವಿಗೆ ನ್ಯಾಯ ಸಿಗುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಜಿಲ್ಲೆಯ ಎಲ್ಲಾ ವೈದ್ಯರು ನಿರ್ಧಸಿರುವುದರಿಂದ ಇಂದು ಕೋವಿಡ್ ಪರೀಕ್ಷೆ ನಡೆದಿಲ್ಲ.
ಹೀಗಾಗಿ ಇಂದು ಕೊರೊನಾ ಮಹಾಮಾರಿ ಬಗ್ಗೆ ಜಿಲ್ಲೆಯ ಮಟ್ಟಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದು ಅಲ್ಲದೆ ಟಿಎಚ್‌ಒ ಡಾ. ನಾಗೇಂದ್ರ ಅವರ ಸಾವಿಗೆ ಕಾರಣವಾಗಿರುವ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವವರೆಗೆ ಮತ್ತು ಇರುವ ವೈದ್ಯರು, ವೈದ್ಯೇತರ ಕೋವಿಡ್ ವಾರಿಯರ್ಸ್‌ಗಳಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಇದು ಅಲ್ಲದೆ ಡಾ. ನಾಗೇಂದ್ರ ಅವರ ಸಾವಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯದ ಎಲ್ಲಾ ಸರ್ಕಾರಿ ವೈದ್ಯರು ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಸರ್ಕಾಋ ಈ ಬಗ್ಗೆ ಇನ್ನು ಏನು ಕ್ರಮ ಕೈಗೊಂಡಿಲ್ಲ.
Super nirdhara sarkarakke olle dagali