ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ನಾಗಮಂಗಲದ ಕಲ್ಲುದೇವನಹಳ್ಳಿಗೆ ಹೋಗಿಬರುವಾಗ ವೃದ್ಧೆಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರಿಗೆ ಕೈ ತೋರಿಸುವ ಮೂಲಕ ತಡೆದು ತನ್ನ ಕಷ್ಟವನ್ನು ಹೇಳಿಕೊಂಡರು. ಅವರ ಕಷ್ಟಕ್ಕೆ ಸ್ಪಂದಿಸಿ ನೆರವಾಗುವ ಭರವಸೆ ನೀಡಿದ್ದಾರೆ.
ವೃದ್ಧೆಗೆ ಮೂವರು ಹೆಣ್ಣುಮಕ್ಕಳಿದ್ದು, ಈ ಹಿಂದೆಯೇ ಪತಿ ತೀರಿಕೊಂಡಿದ್ದಾರೆ. ಆ ಮೂವರು ಮಕ್ಕಳಲ್ಲಿ ಒಬ್ಬರಿಗೆ ಮದುವೆಯಾಗಿದೆ. ಇನ್ನುಳಿದ ಇಬ್ಬರಿಗೆ ಮದುವೆ ಆಗಿಲ್ಲ. ಅವರು ಜೀವನ ನಿರ್ವಾಹಣೆಗಾಗಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ.
ಇನ್ನು ನಾನು ಗ್ರಾಮದಲ್ಲೇ ಒಬ್ಬಳೆ ಇದ್ದೇನೆ ನಮಗೆ ತುಂಬ ಕಷ್ಟ. ನಮ್ಮ ಎರಡು ಮಕ್ಕಳಿಗೂ ಮದುವೆಯಾಗಿಲ್ಲ ನೀವು ಸಹಾಯ ಮಾಡಿದರೆ ನಮ್ಮ ಕಷ್ಟ ಸ್ವಲ್ಪ ಮಟ್ಟಿಗಾದರೂ ದೂರವಾಗಲಿದೆ ಎಂದು ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಆಕೆಯ ಮಕ್ಕಳಿಗೆ ಕೆಸಲ ಕೊಡಿಸುವ ಭರವಸೆ ನೀಡಿದರು.
ನಾಗಮಂಗಲದ ಕಲ್ಲುದೇವನಹಳ್ಳಿಗೆ ಹೋಗಿಬರುವಾಗ ವೃದ್ಧೆಯೊಬ್ಬರು ಕೈ ಅಡ್ಡ ಹಾಕಿ ನನ್ನ ಕಾರು ನಿಲ್ಲಿಸಿದರು. ಏನೆಂದು ವಿಚಾರಿಸುವ ಹೊತ್ತಿಗೆ ತನ್ನ ಕಷ್ಟವನ್ನೆಲ್ಲ ನನ್ನೆದುರು ಹಂಚಿಕೊಂಡರು. ನನ್ನ ಬಳಿ ಹೇಳಿಕೊಂಡರೆ ಕಷ್ಟ ನೀಗಬಹುದು ಎಂಬುದು ಆಕೆಯ ವಿಶ್ವಾಸ. ಕುಮಾರಸ್ವಾಮಿ ನಮ್ಮ ಕಷ್ಟ ನಿವಾರಿಸಬಲ್ಲ ಎಂಬುದು ಇಂಥ ಅಸಂಖ್ಯ ಜನರ ಅಭಿಪ್ರಾಯವೂ ಹೌದು ಎಂದು ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ವೃದ್ಧೆಯ ನಿರೀಕ್ಷೆಯಂತೆ ಆಕೆಯ ಮಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ನಾನೂ ನೀಡಿದ್ದೇನೆ. ಜನರ ಇಂಥ ನಿರೀಕ್ಷೆಗಳು, ನಂಬಿಕೆಗಳು, ಅವರಿಗೆ ನೆರವಾಗಬೇಕು ಎಂಬ ನನ್ನ ಅದಮ್ಯ ಹಂಬಲವೇ ನಾನು ಇನ್ನೂ ರಾಜಕೀಯವಾಗಿ ಉಳಿಯುವಂತೆ ಮಾಡಿದೆ. ಜನರ ಈ ಮಟ್ಟದ ಪ್ರೀತಿ, ವಿಶ್ವಾಸ, ನಂಬಿಕೆ, ನಿರೀಕ್ಷೆಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ನಾಗಮಂಗಲದ ಕಲ್ಲುದೇವನಹಳ್ಳಿಗೆ ಹೋಗಿಬರುವಾಗ ವೃದ್ಧೆಯೊಬ್ಬರು ಕೈ ಅಡ್ಡ ಹಾಕಿ ನನ್ನ ಕಾರು ನಿಲ್ಲಿಸಿದರು.ಏನೆಂದು ವಿಚಾರಿಸುವ ಹೊತ್ತಿಗೆ ತನ್ನ ಕಷ್ಟವನ್ನೆಲ್ಲ ನನ್ನೆದುರು ಹಂಚಿಕೊಂಡರು.ನನ್ನ ಬಳಿ ಹೇಳಿಕೊಂಡರೆ ಕಷ್ಟ ನೀಗಬಹುದು ಎಂಬುದು ಆಕೆಯ ವಿಶ್ವಾಸ.ಕುಮಾರಸ್ವಾಮಿ ನಮ್ಮ ಕಷ್ಟ ನಿವಾರಿಸಬಲ್ಲ ಎಂಬುದು ಇಂಥ ಅಸಂಖ್ಯ ಜನರ ಅಭಿಪ್ರಾಯವೂ ಹೌದು.1/2 pic.twitter.com/KrEBgr2GAK
— H D Kumaraswamy (@hd_kumaraswamy) January 24, 2021