ನ್ಯೂಡೆಲ್ಲಿ: ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿದ ವೈದ್ಯಕೀಯ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ದ ತ್ವರಿತ ಸಾಮೂಹಿಕ ಉತ್ಪಾದನೆಯತ್ತ ಒಂದು ಪ್ರಮುಖ ಹೆಜ್ಜೆಯಲ್ಲಿ, ವಿಜ್ಞಾನ ಮತ್ತು ತಾಂತ್ರಿಕ ಸಚಿವಾಲಯದ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮದ (ಎನ್ಆರ್ ಡಿಸಿ), ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಸೌಲಭ್ಯ ಕೋಶ (ಐಪಿಎಫ್‌ಸಿ) ಮೂಲಕ ಹಕ್ಕುಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಿದೆ.
ಮುಂಬೈನ ಇನ್ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್ (ಐಎನ್ಎಂ) ನಲ್ಲಿ ಇತ್ತೀಚೆಗೆ ರಚಿಸಲಾದ ಇನ್ನೋವೇಶನ್ ಸೆಲ್ನಲ್ಲಿ ಸೇವೆಯಲ್ಲಿರುವ ಭಾರತೀಯ ನೌಕಾಪಡೆಯ ವೈದ್ಯರು ಕಡಿಮೆ ವೆಚ್ಚದ ಪಿಪಿಇ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಪಿಪಿಇಗಳ ಪೈಲಟ್ ಬ್ಯಾಚ್ ಅನ್ನು ಈಗಾಗಲೇ ನೌಕಾ ಡಾಕ್ ಯಾರ್ಡ್ ಮುಂಬೈನಲ್ಲಿ ತಯಾರಿಸಲಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ನೌಕಾಪಡೆಯು ಅಭಿವೃದ್ಧಿಪಡಿಸಿದ ಪಿಪಿಇ ವಿಶೇಷ ಬಟ್ಟೆಯಿಂದ ಮಾಡಲ್ಪಟ್ಟಿದೆ, ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಪಿಪಿಇಗಳಂತೆ ಹೆಚ್ಚಿನ ‘ಉಸಿರಾಟದ ‘ ಅನುಕೂಲದ ಜೊತೆಗೆ ಹೆಚ್ಚಿನ ಮಟ್ಟದ ರಕ್ಷಣೆಯನ್ನು ನೀಡುತ್ತದೆ ಮತ್ತು ಆದ್ದರಿಂದ ಭಾರತದಲ್ಲಿ ಪ್ರಚಲಿತದಲ್ಲಿರುವ ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಬಳಸಲು ಹೆಚ್ಚು ಸೂಕ್ತವಾಗಿದೆ. ತಂತ್ರಜ್ಞಾನವನ್ನು ಐಸಿಎಂಆರ್ ಅನುಮೋದಿತ ಟೆಸ್ಟಿಂಗ್ ಲ್ಯಾಬ್‌ನಿಂದ ಪರೀಕ್ಷಿಸಲಾಗಿದೆ ಮತ್ತು ಮೌಲ್ಯೀಕರಿಸಲಾಗಿದೆ.
ಈ ಕಡಿಮೆ ವೆಚ್ಚದ ಪಿಪಿಇಯ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಲು ನೌಕಾಪಡೆ, ಐಪಿಎಫ್‌ಸಿ ಮತ್ತು ಎನ್‌ಆರ್‌ಡಿಸಿ ಯ ಪ್ರಮುಖ ತಂಡವು ಈಗ ಪ್ರಯತ್ನಿಸುತ್ತಿದೆ. ಪಿಪಿಇಗಳ ಪರವಾನಗಿ ಉತ್ಪಾದನೆಯನ್ನು ತ್ವರಿತಗತಿಯಲ್ಲಿ ತೆಗೆದುಕೊಳ್ಳಲು ಅರ್ಹ ಸಂಸ್ಥೆಗಳನ್ನು ಎನ್‌ಆರ್‌ಡಿಸಿ ಗುರುತಿಸುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಹಳ ಮಹತ್ವದ ಮತ್ತು ತುರ್ತು ಅವಶ್ಯಕತೆಯೆಂದರೆ ನಮ್ಮ ಮುಂಚೂಣಿಯ ಆರೋಗ್ಯ ವೃತ್ತಿಪರರನ್ನು ಆರಾಮದಾಯಕವಾದ ಪಿಪಿಇಗಳೊಂದಿಗೆ ಸಜ್ಜುಗೊಳಿಸುವ ಅವಶ್ಯಕತೆಯಾಗಿದೆ, ಇದನ್ನು ಹೆಚ್ಚು ಬಂಡವಾಳ ಹೂಡಿಕೆಯಿಲ್ಲದೆ ಕೈಗೆಟುಕುವ ವೆಚ್ಚದಲ್ಲಿ ಸ್ಥಳೀಯವಾಗಿ ಉತ್ಪಾದಿಸಬಹುದು. ಪರವಾನಗಿ ಪಡೆದ ಉತ್ಪಾದನೆಯನ್ನು ಪಡೆದುಕೊಳ್ಳಲು ಆಸಕ್ತಿ ಹೊಂದಿರುವ ಸಂಸ್ಥೆಗಳು ಮತ್ತು ನವೋದ್ಯಮಗಳು [email protected] ಅನ್ನು ಸಂಪರ್ಕಿಸಬಹುದು.
ನೌಕಾಪಡೆಯ ಇನ್ನೋವೇಟರ್ಸ್ ತಂಡವು ಮಿಷನ್ ರಕ್ಷಾ ಜ್ಞಾನ್ ಶಕ್ತಿಯ ಅಡಿಯಲ್ಲಿ ಸ್ಥಾಪಿಸಲಾದ ಐಪಿಎಫ್‌ಸಿಯೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 2018 ರಲ್ಲಿ ಪ್ರಾರಂಭವಾದಾಗಿನಿಂದ, ಮಿಷನ್ ರಕ್ಷಾ ಜ್ಞಾನ ಶಕ್ತಿಯ ಅಡಿಯಲ್ಲಿ ಸುಮಾರು 1500 ಐಪಿ ಸ್ವತ್ತುಗಳನ್ನು ರಚಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail