ನ್ಯೂಡೆಲ್ಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ನ್ಯೂಡೆಲ್ಲಿಯ ಕೆಂಪುಕೋಟೆಯಿಂದ ಸತತ ಒಂದೂವರೆ ಗಂಟೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಈ ವೇಳೆ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಜನತೆಯ ಸಹಕಾರ ಕೋರಿದ ಪ್ರಧಾನಿ ಮೋದಿ, ‘ವೋಕಲ್ ಫಾಲ್ ಲೋಕಲ್’ ಮಂತ್ರವನ್ನು ಅಳವಡಿಸಿಕೊಳ್ಳುವಂತೆ ದೇಶವಾಸಿಗಳಿಗೆ ಕರೆ ನೀಡಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಭಾರತ ಸ್ವಾವಲಂಬಿ ದೇಶವಾಗಬೇಕು ಎಂಬುದು ಸಮಸ್ತ ಭಾರತೀಯರ ಕನಸು. ಈ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ಮೋದಿ ಹೇಳಿದರು.
ಇನ್ನು ಯುವತಿಯ ಮದುವೆಗೆ ಇರುವ 18 ವರ್ಷ ವಯಸನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಿದರು. ನಮ್ಮ ಸೈನಿಕರ ಸೌರ್ಯ ಇಡೀ ವಿಶ್ವಕ್ಕೆ ಪರಿಚಯವಾಗಿ ಎಂದು ಹೆಮ್ಮೆಪಟ್ಟರು. ಆಹಾರ ದಾಸ್ತಾನು ಹೆಚ್ಚಿಸುವ ನಿಟ್ಟಿನಲ್ಲಿ ಅನ್ನದಾತರ ಶ್ರಮವು ಬಹಳವಿದೆ ಎಂದು ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ನಮ್ಮ ದೇಶದ ಗಡಿಯನ್ನು ಆಕ್ರಮಿಸಿಕೊಳ್ಳಲು ಬರುವ ತಂಟೆಕೋರರ ಹೆಡೆಮುರಿಕಟ್ಟಲು ನಮ್ಮ ಸೈನಿಕರು ಸಜ್ಜಾಗಿದ್ದಾರೆ. ನಾವು ಈಗಾಗಲೇ ಸ್ವಾವಲಂಬಿ ಭಾರತದೆಡೆಗೆ ಸಾಗಲು 101 ಯುದ್ಧೋಪಕರಗಳ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದ್ದು, ನಮ್ಮಲೇ ಆ ಎಲ್ಲಾ ಯಂತ್ರಗಳನ್ನು ಮಾಡಲು ಯೋಜನೆ ರೂಪಿಸಿ ಆ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಕೊರೊನಾಗೆ ಸಂಶೋಧನೆ ತೀವ್ರವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಸಿಹಿ ಸುದ್ದಿ ಬರಲಿದೆ ಅದು ಬಂದ ಕೂಡಲೇ ನಾವು ಕೊರೊನಾ ನಿಯಂತ್ರಣ ಔಷಧವನ್ನು ತೀವ್ರವಾಗಿ ಉತ್ಪಾದಿಸಲಯ ಮುಂದಾಗುತ್ತೇವೆ ಎಂದು ತಿಳಿಸಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತ ಬದಲಾದರೆ ವಿಶ್ವ ಬದಲಾಗುತ್ತದೆ. ವಿಶ್ವಕ್ಕೆ ಭಾರತದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಭಾರತ ವಿಶ್ವ ಕಲ್ಯಾಣಕ್ಕಾಗಿ ದುಡಿಯಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಭಾರತವನ್ನು ಸ್ವಾವಲಂಬಿ ಮಾಡಿದಾಗ ಮಾತ್ರ ಜಾಗತಿಕ ವೇದಿಕೆಯಲ್ಲಿ ದೇಶದ ಪ್ರಭಾವ ಹೆಚ್ಚಾಗಲು ಸಾಧ್ಯ ಎಂದ ಮೋದಿ, ಆತ್ಮ ನಿರ್ಭರ ಭಾರತ ಕಟ್ಟುವಲ್ಲಿ ಸಮಸ್ತ ಭಾರತೀಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ದೇಶದ ಹಲವು ರಾಜ್ಯಗಳು ನೆರೆಬಂದು ಬಳಲುತ್ತಿದ್ದು, ಅವುಗಳ ನೆರವಿಗೆ ಕೇಂದ್ರ ಸರ್ಕಾರ ನಿಲ್ಲಲಿದೆ ಈ ಬಗ್ಗೆ ಬೇಕಾದ ಹಣಕಾಸಿನ ನೆರವನ್ನು ಬಿಡುಗಡೆ ಮಾಡಲಿದೆ ಎಂದು ನೆರೆಯಿಂದ ತತ್ತರಿಸಿರುವ ರಾಜ್ಯಗಳಿಗೆ ಧೈರ್ಯ ತುಂಬಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail