ತುಮಕೂರು: 60 ವರ್ಷ ವಯಸ್ಸಾದ ಪ್ರತಿಯೊಬ್ಬರಿಗೂ ಇನ್ನು ಮುಂದೆ ವೃದ್ಧಾಪ್ಯ ವೇತನವನ್ನು ಮನೆಬಾಗಿಲಿಗೇ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 60 ವರ್ಷ ವಯೋಮಿತಿ ಮೀರಿದವರ ದಾಖಲೆಗಳು ನಮ್ಮಲ್ಲಿಯೇ ಲಭ್ಯವಿದ್ದು, 60 ವರ್ಷ ಮೀರಿದವರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.
ಹೀಗಾಗಿ ಇನ್ನು ಮುಂದೆ 60 ವರ್ಷ ಮೀರಿದ ಎಲ್ಲರಿಗೂ ವೃದ್ಧಾಪ್ಯ ಪಿಂಚಣಿ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ 60 ವರ್ಷ ಮೀರಿದವರು ಅರ್ಜಿ ಸಲ್ಲಿಸದೇ ಇದ್ದರೂ ಪಿಂಚಣಿ ಪಡೆಯುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಈಗಾಗಲೇ ಈ ಯೋಜನೆಯನ್ನು ಉಡುಪಿ ಹಾಗೂ ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, 10 ಸಾವಿರ ಮಂದಿಗೆ ಈ ರೀತಿ ಪಿಂಚಣಿ ನೀಡಲಾಗುತ್ತಿದೆ ಎಂದರು.
ಇದೀಗ ತುಮಕೂರು ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೆ ತರಲಾಗುವುದು. ಮುಂದಿನ ಎರಡು ತಿಂಗಳೊಳಗೆ ರಾಜ್ಯವ್ಯಾಪಿ ಅನುಷ್ಠಾನಕ್ಕೆ ತರಲಾಗುವುದು ಎಂದು ವಿವರಿಸಿದರು.
ಇಂತಹ ಕ್ರಮಗಳಿಂದ ಪಿಂಚಣಿ ವ್ಯವಸ್ಥೆಯಲ್ಲಿ ಆಗುತ್ತಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಾಗಿದ್ದು, ತ್ವರಿತವಾಗಿ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದರಿಂದ ನಾಡಕಚೇರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು. ಜತೆಗೆ ವೃದ್ಧರು ಪಿಂಚಣಿಳಿಗಾಗಿ ಸಾವಿರಾರು ರೂಪಾಯಿಯನ್ನು ಕೆಳೆದುಕೊಳ್ಳುವುದು ತಪ್ಪುತ್ತದೆ ಎಂದು ಹೇಳಿದರು.
ಎಲ್ಲರಿಗೂ ಕೊಡುತ್ತಿರುವುದು ಬಹಳ ಪುಣ್ಯದ ಕೆಲಸ. ಅಸಂಖ್ಯಾತ ಅಸಾಹಯಕ ಹಿರಿಯರಿಗೆ ಸ್ವಲ್ಪ ವಾದರೂ ಖಂಡಿತವಾಗಿ ಸಹಾಯ ವಾಗುತ್ತದೆ. ಧನ್ಯವಾದ ಅಶೋಕ್ ರವರಿಗೆ
ನಿಮ್ಮ ಅನಿಸಿಕೆ ಹಂಚಿಕೊಂಡಿರುವುದಕ್ಕೆ B.A.Jagannath ಧನ್ಯವಾದಗಳು ನಿಮಗೆ
65 ವರ್ಷ ಕಳೆದರೂ ಯಾವ ಪಿಂಚಣಿನು ಕೊಡ್ತಾ ಇಲ್ಲ ತುಮಕೂರು ಜಿಲ್ಲೆ ಶಿರಾ ತಾಲ್ಲಕಿನ ಕೆಲ ವೃದ್ದರಿಗೆ