ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೋಮವಾರ ಮುಂಜಾನೆಯಿಂದಲೇ ಕನ್ನಡಪರ ರೈತರಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ.
ಮುಂಜಾಣೆ 5.30ಕ್ಕೆ ಪ್ರತಿಭಟನೆ ಮಾಡಲು ಮುಂದಾದ ಪ್ರತಿಭಟನಾಕಾರರನ್ನು ಉಪ್ಪಾರ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರಿಂದ 6ಗಂಟೆ ವೇಳೆ ಅಲ್ಲಿ ಪ್ರತಿಭಟನೆ ವಿಫಲಗೊಂಡಿತು. ಆದರೆ ನಂತರ ಕರವೇ ನಾರಯಣಗೌಡ ಬಣ ಮತ್ತು ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ಕಾವು 6.30ರ ವೇಳೆ ತೀವ್ರಗೊಂಡಿದೆ.
ಇನ್ನು ಬೆಂಗಳೂರಿನೆ ರೈಲು ನಿಲ್ದಾಣದಲ್ಲಿ ರೈಲು ತಡೆಗೆ ಮುಂದಾದ ಕರವೇ ಸೇರಿ ಇತರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಆದರೆ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ರೈತ ವಿರೋಧಿ ನೀತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರೈತರೊಂದಿಗೆ ವಿವಿಧ ಸಂಘಟನೆಗಳು ಕೂಡ ಕೈ ಜೋಡಿಸಿದ್ದರಿಂದಾಗಿ ರಾಜ್ಯ ಬಂದ್ ಬಿಸಿ ಏರತೊಡಗಿದೆ.
ಈ ನಡುವೆ ರೈಲು ತಡೆಗೆ ಮುಂದಾದ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.