ಹೊಸದುರ್ಗ: ರಾಷ್ಟ್ರೀ ಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಶ್ರಮಪಟ್ಟು ಓದಿ ಐಎಎಸ್, ಐಪಿಎಸ್ ಅಧಿಕಾರಿಗಳಾಗುವುದರಲ್ಲಿ ತಪ್ಪೇನಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಪಟ್ಟ ಣದಲ್ಲಿ ಮಂಗಳವಾರ ನಡೆದ ಸೇವೆ ಮತ್ತು ಸಮರ್ಪಣ ಅಭಿಯಾನ ಪ್ರಚಾರ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ರಾಷ್ಟ್ರೀ ಯ ಸ್ವಯಂಸೇವಕ ಸಂಘದ 4,000ರಿಂದ 5,000 ಮಂದಿ ವ್ಯವಸ್ಥಿತವಾಗಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತನನ್ನು ಪ್ರಧಾನಿಯನ್ನಾಗಿ ಮಾಡಿರುವಾಗ ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಮಾಡುವುದು ಕಷ್ಟವೇನೂ ಅಲ್ಲ ಎಂದರು.
ಕುಮಾರಸ್ವಾಮಿ ತಂದೆ ಪ್ರಧಾನಿಯಾಗಬಹುದು, ರಾಜ್ಯದ ಮುಖ್ಯ ಮಂತ್ರಿ ಆಗಬಹುದು, ಪತ್ನಿ ಎಂಎಲ್ಎ ಆಗಬಹುದು, ಮಗ ಎಂಪಿ ಅಭ್ಯ ರ್ಥಿಯಾಗಿ ನಿಲ್ಲಬಹುದು, ರೇವಣ್ಣ ಎಂಎಲ್ಎ ಹಾಗೂ ಮಂತ್ರಿ
ಆಗಬಹುದು, ಭವಾನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಗಬಹುದು.
ಹೀಗೆ ಇವರ ಕುಟುಂಬದವರು ಪ್ರಧಾನಿ, ಎಂಪಿ, ಎಂಎಲ್ಎ, ಮಂತ್ರಿ ಆಗಬಹುದು. ಆರೆಸ್ಸೆಸ್ ಕಾರ್ಯಕರ್ತರು ಶ್ರಮಪಟ್ಟು ಐಎಎಸ್, ಐಪಿಎಸ್ ಅಧಿಕಾರಿಗಳಾದರೆ ನಿಮಗೇನು ಕಷ್ಟ ? ಈ ರೀತಿ ಅಪಪ್ರಚಾರಮಾಡುವುದು ಬಿಡಿ’ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಟ್ವೀಟರ್ ಮೂಲಕ ಸ್ಪಷ್ಟನೆ: ಆರೆಸ್ಸೆಸ್ ವಿರುದ್ಧ ವಾಗ್ದಾಳಿ ಬೆನ್ನಲ್ಲೇ ಈ ಕುರಿತು ಟ್ವೀಟ್‌ಮೂಲಕ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಸಂಘ, ಪಕ್ಷದ ವಿರುದ್ಧ ನಾನು ಟೀಕೆಮಾಡಿಲ್ಲ. ಆರೆಸ್ಸೆಸ್ ಕುರಿತು ಕೆಲವು ಲೇಖಕರು ಬರೆದ ಪುಸ್ತಕಗಳನ್ನು ಓದಿದ್ದು , ಆ ಅಂಶಗಳನ್ನಷ್ಟೇ ಹೇಳಿದ್ದೇನೆ. ಪ್ರಸ್ತುತ ದೇಶಹೋಗುತ್ತಿರುವ ಹಾದಿ ಗಮನಿಸಿದರೆ ಜನರ ಮುಂದೆ ಸತ್ಯ ಇಡುವುದು ಅಗತ್ಯ ವೆಂದು ನನಗೆ ಅನಿಸಿತು.
ಸತ್ಯ ಹೇಳಲು ನನಗೆಯಾವ ಹಿಂಜರಿಕೆಯೂ ಇಲ್ಲ . ಈ ಬಗ್ಗೆ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಹೇಳಿದ್ದಾರೆ.