NEWSನಮ್ಮರಾಜ್ಯರಾಜಕೀಯ

ಕೋಟ್ಯಂತರ ರೂ. ಭ್ರಷ್ಟಾಚಾರದ ಕಡತಗಳ ಸುಟ್ಟು ಹಾಕಲು ಸಿಎಂರಿಂದ ಸಂತೋಷ್ ನೇಮಕ: ಎಎಪಿ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭ್ರಷ್ಟಾಚಾರದ ಕಡತಗಳು, ಅಕ್ರಮ ಟೆಂಡರ್‌ಗಳು ಹಾಗೂ ಇನ್ನಿತರ ಅವ್ಯವಹಾರಗಳ ಕಡತಗಳನ್ನು ಸುಟ್ಟು ಹಾಕಲು ಎನ್.ಆರ್ ಸಂತೋಷ್ ಎಂಬ ಖಾಸಗಿ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ತಮ್ಮ ತಂಗಿಯ ಮೊಮ್ಮಗನಾದ ಈ ಕುಟುಂಬದ ವ್ಯಕ್ತಿಯನ್ನು ರಾಜ್ಯ ಸರ್ಕಾರದ ಶಾಸನಾತ್ಮಕ ಆಡಳಿತ ನಿರ್ವಹಣೆಯಲ್ಲಿ ಸೇರಿಸಿಕೊಂಡು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳನ್ನು, ಕಚೇರಿ ನಿರ್ವಹಣೆಗೆ ಸಿಬ್ಬಂದಿಯನ್ನು ನೀಡಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ನೀಡಿರುವ ಉದ್ದೇಶ ನಿಧಾನಕ್ಕೆ ಬಯಲಾಗುತ್ತಿದೆ. ಎಲ್ಲಾ ಇಲಾಖೆಯಲ್ಲೂ ಕೈಯಾಡಿಸುತ್ತಿರುವ ಸಂತೋಷ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿಯ ನಾಯಕರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಸೇರಿ ಇತರ ಸಹೋದ್ಯೋಗಿಗಳು ಎಲ್ಲಾ ಇಲಾಖೆಗಳಲ್ಲಿ ನಡೆಸಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ಕಡತಗಳನ್ನು ಹುಡುಕಿ ಸುಟ್ಟು ಹಾಕಲು ಎಂದು ಕಿಡಿಕಾರಿದರು.

ಈ ನೇಮಕಾತಿ ಸಂವಿಧಾನ ವಿರೋಧಿ ಹಾಗೂ ಕಾನೂನು ವಿರೋಧಿಯಾಗಿದ್ದು ಮುಖ್ಯಮಂತ್ರಿ ತಮ್ಮ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ನಡೆಸುತ್ತಿರುವುದು ಸ್ಪಷ್ಟವಾಗಿದೆ ಸಿಎಂ ಈ ನಡೆಯನ್ನು ತೀವ್ರವಾಗಿ ಪಕ್ಷವು ಖಂಡಿಸುತ್ತದೆ ಎಂದರು.

ಈಗಾಗಲೇ ಸಿಎಂ ಮಗ ವಿಜಯೇಂದ್ರ ವಿರುದ್ಧವೂ ಅನೇಕ ಹಗರಣಗಳು ಕೇಳಿ ಬಂದು ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಈ ಮೂಲಕ ಬಿಎಸ್‌ವೈ ಅಕ್ರಮ ಕೂಟ ರಚನೆ ಮಾಡಿಕೊಂಡಿದ್ದಾರೆ.

ಈ ವ್ಯಕ್ತಿ ವಿರುದ್ಧ ಈಗಾಗಲೇ ಆಪರೇಷನ್ ಕಮಲದಂತಹ ಅಸಂವಿಧಾನಿಕ ಪ್ರಜಾಪ್ರಭುತ್ವ ವಿರೋಧಿ ಕುಕೃತ್ಯಗಳಲ್ಲಿ ಭಾಗಿಯಾಗಿರುವ ನೇರ ಸಾಕ್ಷಿಗಳು ರಾಜ್ಯದ ಜನತೆ ಮುಂದಿವೆ. ಈ ವ್ಯಕ್ತಿಯ ವಿರುದ್ಧ ಈಗಾಗಲೇ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳು ಸಹ ದಾಖಲಾಗಿವೆ.ಈ ವ್ಯಕ್ತಿಯ ವಿರುದ್ಧ ಬಿಜೆಪಿಯ ಪ್ರಮುಖ ನಾಯಕ ಈಶ್ವರಪ್ಪನವರು ಸಹ ಈ ಹಿಂದೆ ಗುರುತರವಾದ ಆರೋಪವನ್ನು ಮಾಡಿದ್ದರು ಎಂದು ವಿವರಿಸಿದರು.

ರಾಜಕೀಯ ಎಂದರೆ ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ಅಸಂವಿಧಾನಿಕವಾಗಿ ಈ ಹುದ್ದೆಯನ್ನು ತಮ್ಮ ಆಪ್ತನಿಗೆ ಹಂಚಿ, ಈ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿ ಕೂಡ ಅಲುಗಾಡುತ್ತಾ ಇರುವುದರಿಂದ, ಈ ಸಮಯದ ಒಳಗೆ ತಮ್ಮ ಆಪ್ತರಿಗೆ ಗಂಟು ಮಾಡಿಟ್ಟು ಕೊಳ್ಳಲು ಆಸ್ಪದ ನೀಡಿದ್ದಾರೆ ಎಂದು ದೂರಿದರು.

ಕಷ್ಟ ಕಾಲದಲ್ಲಿ ಜತೆಯಲ್ಲಿ ಇದ್ದವರಿಗೆಲ್ಲ ಪಟ್ಟ ಕಟ್ಟಲು ಇದೇನು ರಾಜ ಪ್ರಭುತ್ವವೇ? ಖಾಸಗಿ ವ್ಯಕ್ತಿಯೊಬ್ಬನಿಗೆ ಪ್ರಮುಖ ಹುದ್ದೆ ನೀಡಲು ನಾಚಿಕೆ ಆಗುವುದಿಲ್ಲವೇ ಮುಖ್ಯಮಂತ್ರಿಗಳೆ ಹಿರಿಯರಾದ ನೀವು ಕುರ್ಚಿಯ ಆಸೆಗಾಗಿ ಸ್ವಾಭಿಮಾನ ಮರೆತು ಕಂಡಕಂಡವರಿಗೆಲ್ಲ ಅಧಿಕಾರ ಹಂಚುವ ಪರಿಪಾಠವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ಈ ವ್ಯಕ್ತಿಯನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಜನನಿ ಭರತ್, ಮುತ್ತುರಾಜ್ ಚುಂಚನಘಟ್ಟ ಇದ್ದರು.

1 Comment

  • ಸಿಎಂ ಬಿಎಸ್‌ವೈ ಅವರು ಏನೇ ಮಾಡಿದರೂ ಅಧಿಕಾರದಿಂದ ಕೆಳಗೆ ಇಳಿಯುವುದಿಲ್ಲ ಬಿಡಿ ಸಾರ್.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ