ವಿಜಯಪಥ ಸಮಗ್ರ ಸುದ್ದಿ
ಭೋಪಾಲ್: ಕಿರಾಣಿ ಅಂಗಡಿ ನಡೆಸುತ್ತಿದ್ದ ಯುವಕನೊಬ್ಬ ಕೊರೊನಾದ ಈ ಸಮಯದಲ್ಲಿ ಕಿರಾಣಿ ಅಂಗಡಿಯ ವಿದ್ಯುತ್ ಬಿಲ್ ಕಟ್ಟಲಾರದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧ್ಯಪ್ರದೇಶ ಕತಾಫ್ ಛತರ್ಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮುನೇಂದ್ರ ರಾಜ್ಪುತ್ ಆತ್ಮಹತ್ಯೆ ಮಾಡಿಕೊಂಡಿಕೊಂಡ ಯುವಕ.
ಆತ್ಮಹತ್ಯೆಗೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ 7ಪುಟಗಳ ಡೆತ್ನೋಟ್ ಬರೆದಿದ್ದಾನೆ. ಅದರಲ್ಲಿ ಕೊರೊನಾದ ಈ ಸಮಯದಲ್ಲಿ ವ್ಯಾಪಾರದಲ್ಲಿ ನಷ್ಟವಾಗಿದೆ. ಈ ನಡುವೆ 80,000 ರೂ. ವಿದ್ಯುತ್ ಬಿಲ್ ಬಂದಿದೆ. ಮೊದಲೇ ನಷ್ಟದಲ್ಲಿರುವ ಕಿರಣಿ ಅಂಗಡಿಯಿಂದ ಜೀವನ ಸಾಗಿಸುವುದೇ ಕಷ್ಟವಾಗಿರುವ ಈ ಸಮದಲ್ಲಿ ಅಧಿಕಾರಿಗಳು ಬಂದು ವಿದ್ಯುತ್ ನಿಲುಗಡೆ ಗೊಳಿಸಿದರು. ಇದರಿಂದ ಅಂಗಡಿ ಮುಚ್ಚಲ್ಪಟ್ಟಿತು.
ತನ್ನ ಅಂಗಡಿ ಮುಚ್ಚಿದ್ದರಿಂದ ಒಂದು ಕಡೆ ಬಡತನ ಮತ್ತೊಂದು ಕಡೆ ಅವಮಾನ. ಇವುಗಳನ್ನು ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೋದಿಯವರಿಗೆ 7 ಪುಟಗಳ ಡೆತ್ ನೋಟ್ ಬರೆದಿಟ್ಟು ಕಾರ್ಖಾನೆ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಡೆತ್ ನೋಟ್ ನಲ್ಲಿ ತಿಳಿಸಿರುವಂತೆ ಮೋದಿಯವರೇ ನಾನು ನಿಮ್ಮ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವವನ್ನು ಹೊಂದಿದ್ದೇನೆ. ಆದರೆ ಆಡಳಿತದಲ್ಲಿರುವ ಕೆಳಹಂತದ ಅಧಿಕಾರಿಗಳು ಬಡವರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅವರು ನೀಡುತ್ತಿದ್ದ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹದ ಅಂಗಾಂಗಗಳನ್ನು ಮಾರಾಟಮಾಡಿ ಅವರ ಬಿಲ್ ಪೂರೈಸಿ ಕೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾನೆ. ಆತನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Same of keb