ದೇಶವ್ಯಾಪಿ ಪ್ರತಿಬಂಧಕ ವ್ಯವಸ್ಥೆಯಿಂದ ಮಾರ್ಚ್ 23 ರಿಂದ ಇಲ್ಲಿಯವರೆಗೆ ದೇಶದ ಜನರನ್ನು ಕೋವಿಡ್ -19 ರ ಸೋಂಕಿನಿಂದ ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳು ಬಹಳಷ್ಟು ಯಶಸ್ವಿಯಾಗಿಸಿವೆ.
ಪ್ರತಿಬಂಧಕ ವ್ಯವಸ್ಥೆಯಿಂದ ಮತ್ತೆ ನಿತ್ಯದ ಜೀವನಕ್ಕೆ ಮರಳುವ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ದೇಶವಾಸಿಗಳಿಗೆ ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳುವ ಉಪಾಯವನ್ನು ಮನಮುಟ್ಟುವಂತೆ ಹೇಳಿಕೊಟ್ಟಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಧಾರಣೆ, ರಸ್ತೆಯಲ್ಲಿ ಉಗುಳದಿರುವುದು, ಪದೇ ಪದೇ ಸಾಬೂನಿನಿಂದ ಕೈ ತೊಳೆಯುವುದು ಸ್ಯಾನಿಟೈಜರ್ ಉಪಯೋಗಿಸುವದು. ಇವು ವ್ಯಕ್ತಿಯು ಕೋವಿಡ್-19 ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳುವ ಅತ್ಯುತ್ತಮ ಉಪಾಯ ಕ್ರಮಗಳಾಗಿವೆ. ಇವುಗಳನ್ನು ನಾವು ಸರಿಯಾಗಿ ಅನುಸರಿಸದಿದ್ದರೆ ನಮ್ಮನ್ನು ನಾವು ಕೋವಿಡ್-19 ಸೋಂಕಿಗೆ ಆಹ್ವಾನ ನೀಡಿದಂತೆ ಸರಿ.
ಇದರ ಜೊತೆಗೆ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ತಕ್ಷಣ ಸಮೀಪದ ಜ್ವರ ತಪಾಸಣೆ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳುವುದು ಅಷ್ಟೇ ಅಲ್ಲ ಅಂತಹ ಲಕ್ಷಣಗಳಿರುವವರನ್ನು ಕಂಡರೆ ಆರೋಗ್ಯ ಸಹಾಯವಾಣಿ ೧೦೪ ಕ್ಕೆ ಮಾಹಿತಿಯನ್ನು ನೀಡಿದಲ್ಲಿ ಅದು ಕೂಡಾ ದೇಶದ ಮೇಲೆ ಶತ್ರುಗಳ ಆಕ್ರಮಣ ತಡೆವ ಒಂದು ದೇಶ ಸೇವೆಯೇ ಆಗಿದೆ.
ತಮ್ಮ ಸುತ್ತಮುತ್ತಲು ವಿದೇಶಗಳಿಂದ, ಕೋವಿಡ್-೧೯ ಸೋಂಕಿನ ಪ್ರದೇಶಗಳಿಂದ ಆಗಮಿಸಿದವರು ಇದ್ದಲ್ಲಿ ತಕ್ಷಣ ಅವರು ಆರೋಗ್ಯ ಪರೀಕ್ಷೆಗೆ ಒಳಗಾಗುವುದು ಇಡೀ ಸಮಾಜದ ಆರೋಗ್ಯ ಹಾಗೂ ದೇಶ ರಕ್ಷಣೆಗೆ ಸೇವೆ ಸಲ್ಲಿಸಿದಂತೆ.
ಜೀವನ ಮೊದಲಿನಂತೆ ಧಾವಂತವಾಗಿ ನಡೆಸುವುದು ಸಲ್ಲ. ಕೋವಿಡ್ -19 ಸೋಂಕು ಯಾವ ರೂಪದಲ್ಲಿ ಯಾವಾಗ ತಗಲುವುದು ಎನ್ನುವುದು ಯಾರಿಂದಲೂ ಮುಂಚಿತವಾಗಿ ತಿಳಿಯಲಾಗುವುದಿಲ್ಲ. ತಲೆ ಗಟ್ಟಿಯಿದೆ ಎಂದು ಕಲ್ಲು ಬಂಡೆಗೆ ಹೊಡೆದುಕೊಳ್ಳುವುದು ಒಂದೇ ಬೇಕಾಬಿಟ್ಟಿಯಾಗಿ ನಾನೇನಾದರೂ ಮಾಡುವೆ ಯಾರೇಕೆ ನನಗೆ ಅಡ್ಡಿಪಡಿಸಬೇಕು ಎನ್ನುವ ಮನೋಭಾವ ಸ್ವತ: ಅಂದುಕೊಂಡವರನ್ನು ಅಷ್ಟೇ ಅಲ್ಲ ಸುತ್ತಲಿನವರ ಜೀವಕ್ಕೆ ಅಪಾಯ ತರುವ ಸಾಧ್ಯತೆ ಹೆಚ್ಚಿದೆ.
ಸರ್ಕಾರಗಳ ರಕ್ಷಣೆಯಲ್ಲಿ ಆರಂಭದ ವಿಪತ್ತಿನಿಂದ ಪಾರಾಗಿದ್ದೆವೆ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರ ತಿಳಿಸಿಕೊಟ್ಟಿರುವ ಪಾಠವನ್ನು ತಿಳಿದು ಆಚರಿಸದೇ ಹೋದರೆ ಅಪಾಯವು ಕಟ್ಟಿಟ್ಟ ಬುತ್ತಿ. ಕೋವಿಡ್ -19 ಸೋಂಕು ಬರೀ ಒಂದು ವ್ಯಕ್ತಿಯ ವಿಷಯವಲ್ಲ ಇಡೀ ಕುಟುಂಬ ಸಮಾಜ ದೇಶದ ರಕ್ಷಣೆಯ ವಿಷಯವಾಗಿದೆ ಎಂಬುದನ್ನು ನಾವು ಸರಿಯಾಗಿ ಅರಿತುಕೊಳ್ಳುವ ತುರ್ತು ಇದೆ.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ದೇಶವಾಸಿಗಳಿಗೆ ಲಾಕ್ಡೌನ್ ಮೂಲಕ ತಿಳಿಸಿದ ಸ್ವ ಪ್ರತಿಬಂಧ, ಸಾಮಾಜಿಕ ಅಂತರ ಹಾಗೂ ಸ್ವಯಂ ಸುರಕ್ಷತೆಗಳ ಪಾಲನೆ ಲಾಕ್ಡೌನ್ ನಂತರದ ಜೀವನದಲ್ಲಿ ಕಟ್ಟುನಿಟ್ಟಿನ ಪಾಲನೆ ನಮ್ಮ ಜೀವನದ ಸುರಕ್ಷಾಚಕ್ರ ಎಂಬುದನ್ನು ಮರೆಯುವಂತಿಲ್ಲ. ಮರೆತರೆ ಯಾವುದೇ ರೀತಿಯಲ್ಲಿ ಇರಬಹುದಾದ ಕೊವಿಡ್-19 ವೈರಾಣು ಸೋಂಕು ತಗಲುವಿಕೆ ತಡೆ ತಪ್ಪಿಸಲು ಸಾಧ್ಯವಿಲ್ಲ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail