ವಿಜಯಪಥ ಸಮಗ್ರ ಸುದ್ದಿ
ಮೈಸೂರು: ವಾಹನ ತಪಾಸಣೆ ಮಾಡಲು ಸಂಚಾರಿ ಪೊಲೀಸರು ಅಡ್ಡಗಟ್ಟಿದ ವೇಳೆ ಸವಾರ ಬಿದ್ದು ಹಿಂದಿನಿಂದ ಬರುತ್ತಿದ್ದ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರನ್ನು ಹಿಡಿದು ಥಳಿಸಿರುವ ಘಟನೆ ನಿನ್ನೆ ಸಂಜೆ ಮೈಸೂರಿನಲ್ಲಿ ನಡೆದಿದೆ.
ವಾಹನ ತಪಾಷಣೆ ಬೈಕ್ ಅಡ್ಡಗಟ್ಟಿದ್ದಾರೆ. ಆ ವೇಳೆ ನಿಲ್ಲಿಸದ ಬೈಕ್ ಸವಾರನಿಗೆ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಸವಾರ ಕೆಳಗೆ ಬಿದ್ದಿದ್ದರಿಂದ ಹಿಂಬದಿಯಿಂದ ಲಾರಿ ಹರಿದು ಸ್ಥಳದಲ್ಲೇ ಅಸುನೀಗಿರುವುದು ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮೈಸೂರು ವಿವಿ ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದ್ದು, ಎಚ್.ಡಿ.ಕೋಟೆ ತಾಲೂಕಿನ ಕನ್ನಬೇನಹಳ್ಳಿ ನಿವಾಸಿ ಸಿವಿಲ್ ಇಂಜಿನಿಯರ್ ದೇವರಾಜು (46) ಮೃತಪಟ್ಟವರು.
ಇವರ ಜೊತೆ ಇದ್ದ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆ ನಡೆದ ಬೆನ್ನಿಗೇ ಸಾರ್ವಜನಿಕರು ಪೊಲೀಸರನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರ ವಾಹವನ್ನು ಬ್ಯಾರಿಕೇಡ್ನಿಂದ ಹಾನಿಗೊಳಿಸಿ ಪಲ್ಟಿ ಹೊಡೆಸಿದ್ದಾರೆ.
ಗರುಡಾ ವಾಹನದ ಚಾಲಕ ಮಂಜುನಾಥ್, ವಿವಿಪುರಂ ಸಂಚಾರ ವಿಭಾಗದ ಎಎಸ್ಐ ಸ್ವಾಮಿನಾಯಕ್ ಅವರಿಗೆ ಜನರು ಥಳಿಸಿದ್ದಾರೆ.
ಮೈಸೂರಿನಲ್ಲಿ ಹೆಲ್ಮೆಟ್ ಹಾಕಿದ್ದರು ಪೊಲೀಸರು ಅಡ್ಡಗಟ್ಟುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಹೆಲ್ಮೆಟ್ ಹಾಕಿದ ದೇವರಾಜು ಅವರನ್ನು ಹಳೇ ಕೇಸಿನ ದಂಡ ವಸೂಲಿಗಾಗಿ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ದೇವರಾಜು ಮೇಲೆ ಪೇದೆಯೊಬ್ಬರು ಲಾಠಿ ಬೀಸಿದ್ದಾರೆ. ಅದರಿಂದ ನಿಯಂತ್ರಣ ಕಳೆದುಕೊಂಡ ಸವಾರ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಇಂಥ ದುರಂತ ಪರು ಕಳಿಸದಂತೆ ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.