Breaking NewsNEWSನಮ್ಮರಾಜ್ಯ

ಸಣ್ಣ, ಮಧ್ಯಮ ಉದ್ಯಮಗಳ ಉಳಿಸಿ: ಎಎಪಿ ನಾಗಣ್ಣ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಎರಡನೇ ಅಲೆಯ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕರ್ನಾಟಕ ಸರಕಾರ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿ ತತ್ತರಿಸಿ ಹೋಗಿರುವ ರಾಜ್ಯದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನೆಲಕ್ಕಚ್ಚಲಿವೆ. ಮುಂದಿನ ಆರು ವಾರಗಳಲ್ಲಿ ಉದ್ದಿಮೆಗಳು ಸ್ಥಗಿತಗೊಳ್ಳಲಿವೆ. ಇವುಗಳನ್ನು ಉಳಿಸದೇ ಇದ್ದಲ್ಲಿ ರಾಜ್ಯ ಭೀಕರವಾದ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಬೇಕಾದೀತು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಘಟಕದ ಉಪಾಧ್ಯಕ್ಷ ಬಿ ಟಿ ನಾಗಣ್ಣ ಎಚ್ಚರಿಸಿದರು.

ಹಲವಾರು ಅಂಗಡಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವಿಲ್ಲದೆ ಹೆಣಗಾಡುತ್ತಿದ್ದಾರೆ. ಅನೇಕ ಉದ್ದಿಮೆಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ವೇತನ ಪಾವತಿ ವಿಳಂಬ ಮಾಡುತ್ತಿವೆ. ಉದ್ಯಮವನ್ನು ವಿಸ್ತರಿಸುವ ಯೋಜನೆಗಳನ್ನು ಸ್ಥಗಿತಗೊಳಿಸಿವೆ. ಇವುಗಳಿಗೆ ಸರಕಾರದಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ.

ಇವು ರಾಜ್ಯದ ಜಿಡಿಪಿಯ ಬಹುಪಾಲು ಭಾಗವನ್ನು ಹೊಂದಿವೆ. ಅರ್ಧ ಪಾಲು ಉದ್ದಿಮೆಗಳು ಬಾಡಿಗೆ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ. ಅಲ್ಲದೆ ಇವು 18 ಲಕ್ಷ ಮಹಿಳಾ ಮತ್ತು 52 ಲಕ್ಷ ಪುರುಷ ನೌಕರರಿಗೆ ಉದ್ಯೋಗ ನೀಡಿವೆ. ಇವು ಸ್ಥಗಿತಗೊಂಡರೆ ರಾಜ್ಯದಲ್ಲಿ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ, ನಿರುದ್ಯೋಗ ಸಮಸ್ಯೆ ತಲೆದೋರಲಿದೆ ಎಂದು ಇಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

ಈ ಕಳೆದ ವರ್ಷದಲ್ಲಿ ಕರ್ನಾಟಕ ಮತ್ತು ಭಾರತದಲ್ಲಿ ದೊಡ್ಡ ಉದ್ಯಮಗಳು ಲಾಭ ಗಳಿಸಿವೆ ಎಂಬುದು ಸ್ಪಷ್ಟವಾಗಿದೆ. ಉನ್ನತ ಕಂಪನಿಗಳ ಹೆಚ್ಚುತ್ತಿರುವ ಷೇರು ಬೆಲೆಗಳು, ಗೌತಮ್ ಅದಾನಿಯಂತಹ ಶ್ರೀಮಂತರ ಹೆಚ್ಚಿರುವ ಸಂಪತ್ತು ಇದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವು ಸಣ್ಣ ಉದ್ಯಮಗಳನ್ನು ಹತ್ತಿಕ್ಕುತ್ತಿವೆ ಎಂದು ಆರೋಪಿಸಿದರು.

ದೊಡ್ಡ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳ ಪರವಾಗಿ ಒಲವು ತೋರುವ ಬದಲು ಆರ್ಥಿಕತೆಯ ಜೀವನಾಡಿಯಾಗಿರುವ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಕರ್ನಾಟಕ ಸರ್ಕಾರ ನಿಜವಾದ ಬೆಂಬಲವನ್ನು ತೋರಿಸುವ ಸಮಯ ಬಂದಿದೆ ಎಂದು ತಿಳಿಸಿದರು.

ಎಎಪಿಯ ಒತ್ತಾಯ
* ಸರ್ಕಾರ ಲಾಕ್‌ಡೌನ್ ಅವಧಿಯಲ್ಲಿ ಸ್ಥಿರ ವಿದ್ಯುತ್, ನೀರು ಮತ್ತು ಇತರ ದರಗಳ 100% ಮನ್ನಾ ಮತ್ತು ವೇರಿಯಬಲ್ ದರಗಳಲ್ಲಿ 50% ಕಡಿತ ಮಾಡಬೇಕು.
* ವ್ಯವಹಾರಗಳು ಕಾರ್ಯನಿರ್ವಹಿಸುತ್ತಿರುವ ಆಸ್ತಿಗಳಿಗೆ 100% ಆಸ್ತಿ ತೆರಿಗೆ ಮತ್ತು ಇತರ ವಾಣಿಜ್ಯ ದರಗಳನ್ನು ಮನ್ನಾ ಮಾಡಬೇಕು.

* ಲಾಕ್‌ಡೌನ್ ಅವಧಿಯಲ್ಲಿ ಪಿಎಫ್ ಮತ್ತು ಇಎಸ್‌ಐ ಪಾವತಿಗಳನ್ನು (ಕಂಪನಿ ಮತ್ತು ನೌಕರರ ಪಾಲು) ಒದಗಿಸಬೇಕು.
* ಏಪ್ರಿಲ್ 2022 ರಿಂದ ಪ್ರಾರಂಭವಾಗುವ ಸಮಾನ ಕಂತುಗಳಲ್ಲಿ ಮೂರು ವರ್ಷಗಳಲ್ಲಿ ಮರುಪಾವತಿ ಮಾಡಲು ಒಂದು ತಿಂಗಳ ಮಾರಾಟಕ್ಕೆ ಸಮಾನವಾದ ಬಡ್ಡಿರಹಿತ ಬಂಡವಾಳ ಸಾಲ ನೀಡಬೇಕು.

* ಹೆಚ್ಚುವರಿ ಬಡ್ಡಿ ಹೊರೆಯಿಲ್ಲದೆ, ಲಾಕ್‌ಡೌನ್ ಅವಧಿಗೆ ಮತ್ತು ಅದರ ನಂತರ 2 ತಿಂಗಳುಗಳವರೆಗೆ ಎಲ್ಲಾ ಸಾಲ ಮರುಪಾವತಿಯನ್ನು ಮುಂದೂಡಲು ಅನುವು ಮಾಡಿಕೊಡಬೇಕು.
* ಲಾಕ್‌ಡೌನ್ ಸಮಯದಲ್ಲಿ ಅಂಗಡಿ ಮುಚ್ಚಲು ಅಥವಾ ವಿಸ್ತರಣೆ ಯೋಜನೆಗಳನ್ನು ಸ್ಥಗಿತಗೊಂಡ ಉದ್ದಿಮೆಗಳಿಗೆ ಅತ್ಯಲ್ಪ ಬಡ್ಡಿದರದಲ್ಲಿ ಪುನರ್ನಿರ್ಮಾಣ ಹಣಕಾಸು ಒದಗಿಸಬೇಕು.

ರಾಜ್ಯ ಸರಕಾರ ಈ ಎಲ್ಲಾ ಕ್ರಮಗಳನ್ನು ತಕ್ಷಣ ಜಾರಿ ಮಾಡಿ ರಾಜ್ಯದ ಆರ್ಥಿಕತೆಯ ಜೀವನಾಡಿಯಾಗಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಕಾಪಾಡಿ ಅವುಗಳ ಮೇಲೆ ಅವಲಂಬಿತರಾಗಿರುವ ದೊಡ್ಡ ಸಂಖ್ಯೆಯ ಜನತೆಯ ಬದುಕನ್ನು ಕಾಪಾಡಬೇಕು ಎಂದು ನಾಗಣ್ಣ ಆಗ್ರಹಿಸಿದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ