Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಸಾರಿಗೆ ನೌಕರರು-ಕುಟುಂಬದವರಿಂದ ತಟ್ಟೆ-ಲೋಟ ಢಣಢಣ: ಸರ್ಕಾರಕ್ಕೆ ಢವ ಢವ- ಪ್ರತಿಭಟನೆ ನಿರತರ ಬಂಧನ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು ಮತ್ತು ಕುಟುಂಬದವರು ಇಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಟ್ಟೆ-ಲೋಟ ಬಡಿಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು. ಇದರಿಂದ ಭಯಗೊಂಡ ಸರ್ಕಾರ  ಪ್ರತಿಭಟನೆ ನಿರತರನ್ನು ಬಂಧಿಸುವ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿದೆ.

ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಒತ್ತಾಯಿಸಿ, ಸಾರಿಗೆ ನೌಕರರು ಇಂದಿಗೆ ಆರು ದಿನದಿಂದ ನಡೆಸುತ್ತಿರುವ ಮುಷ್ಕರದ ಬಗ್ಗೆ ಚಕಾರವೆತ್ತದ ಸರ್ಕಾರ, ನೌಕರರು ಮತ್ತು ಅವರ ಕುಟುಂಬದವರನ್ನು ಬಂಧಿಸಲು ಮುಂಗಿದೆ.

ಕಳೆದ ಆರು ದಿನದಿಂದ ನೌಕರರ ಮುಷ್ಕರವನ್ನು ಹತ್ತಿಕ್ಕುವಲ್ಲೇ ಮಗ್ನವಾಗಿರುವ ಸರ್ಕಾರ ಅವರನ್ನು ಕರೆದು ಮಾತನಾಡುವ ಸೌಜನ್ಯ ತೋರಿಸಿಲ್ಲ. ಇದರಿಂದ ರೊಚ್ಚಿಗೆದ್ದ ನೌಕರರ ಕುಟುಂಬದವರು ಇಂದು ತಟ್ಟೆ ಲೋಟ ಬಡಿದು ಬೃಹತ್‌ ಪ್ರತಿಭಟನೆಗೆ ಮುಂದಾಗಿದಕ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದು ದೌರ್ಜನ್ಯ ಮೆರೆದಿದ್ದಾರೆ.

ಅಂದರೆ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದ ಸರ್ಕಾರ ಪೊಲೀಸರ ಮೂಲಕ ನೌಕರರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಈ ಮೂಲಕ ಕೊಟ್ಟ ಮಾತನ್ನು ತಪ್ಪಿದ ಸರ್ಕಾರ ಇದಾಗಿದೆ.

ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾದ್ಯವಿಲ್ಲ, ಬದಲಿಗೆ ನಿಮಗೆ 6ನೇ ವೇತನ ಆಯೋಗ ಶಿಫಾರಸಿನಂತೆ ವೇತನ ನೀಡಲಾಗುವುದು ಎಂದು ಕಳೆದ 2020 ಡಿಸೆಂಬರ್‌ 14ರಂದು ಲಿಖಿತವಾಗಿ ಸರ್ಕಾರದ ಸಚಿವರೇ ಕೊಟ್ಟ ಭರವಸೆಯನ್ನು ಇಂದು ಈಡೇರಿಸದೆ ಉದ್ಧಟತನದಿಂದ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ನೌಕರರು ಮತ್ತು ಅವರ ಕುಟುಂಬದವರು ಕೇಳುತ್ತಿದ್ದು, ನಮ್ಮನ್ನು ಜೈಲಿಗೆ ಹಾಕಿದರು ಸರಿಯೇ ನಾವು ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರೆಗೂ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ರಾಜ್ಯಾದ್ಯಂತ ತಟ್ಟೆ ಲೋಟ ಬಡಿದು ನಡೆಸುತ್ತಿರುವ ಪ್ರತಿಭಟನೆಯಿಂದ ಭಯಗೊಂಡ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಎಸಗಲು ಮುಂದಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿಬಳಿಯುವ ನಡೆಯಾಗಿದೆ ಎಂದು ನೌಕರರು ಮತ್ತು ಕುಟುಂಬದವರು ಕಿಡಿಕಾರಿದ್ದಾರೆ.

ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರ ಪುಟ್ಟ ಪುಟ್ಟ ಮಕ್ಕಳನ್ನು ವಶಕ್ಕೆ ಪಡೆದಿರುವ ಪೊಲೀಸರು ಒಂದು ರೀತಿಯ ಸರ್ವಾಧಿಕಾರದ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಸಾಮಾನ್ಯ ಜನರು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟಾದರೂ ಸರ್ಕಾರ ನೌಕರರ ಬೇಡಿಕೆ ಬಗ್ಗೆ ಇನ್ನೂ ಮಾತನಾಡಲೂ ಮುಂದಾಗದಿರುವುದ ಎಷ್ಟು ಸರಿ ಎಂಬ ಆಕ್ರೋಶದ ಮಾತುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ. ಹೀಗಾಗಿ ಇನ್ನಾದರು ಸಿಎಂ ಯಡಿಯೂರಪ್ಪ ತನ್ನ ಸರ್ವಾಧಿಕಾರದ ಧೋರಣೆ ಬಿಟ್ಟು ಪ್ರಜೆಗಳಿಂದ ನಾವು ಸರ್ಕಾರ ರಚಿಸಿದ್ದೇವೆ ಎಂಬುದನ್ನು ಮರೆಯದೆ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಮ್ಮ ಪದವಿಯನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

 

Leave a Reply

error: Content is protected !!
LATEST
ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌