NEWSನಮ್ಮರಾಜ್ಯಶಿಕ್ಷಣ-

ಇಂದಿನಿಂದ ಅನ್ ಲೈನ್ ಕ್ಲಾಸ್‌ ಆರಂಭ: ಪಾಠ ಕೇಳಲು ಮಾಡಲು ನೂರಾರು ಸಮಸ್ಯೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಕಡಿಮೆಯಾಗಿದೆ. ಆದರೆ ಮೂರನೇ ಅಲೆಯ ಆತಂಕ ಹೆಚ್ಚಾಗಿದೆ. ಈ ಹಿನ್ನೆಯಲ್ಲಿ ಶಾಲೆ ಪುನಾರಂಭಕ್ಕೆ ತಡೆ ನೀಡಿದ್ದು, ನೇರವಾಗಿ ಪಾಠ ಶುರು ಮಾಡಲು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದರಂತೆ ಇಂದಿನಿಂದ ಪಾಠ ಶುರು ಆಗಬೇಕಿತ್ತು. ಆದರೆ ನೂರೆಂಟು ಸಮಸ್ಯೆಗಳು ಎದುರಾಗಿದೆ.

ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಇಂದಿನಿಂದ ಸರ್ಕಾರಿ ಮಕ್ಕಳಿಗೆ ಚಂದನ ವಾಹಿನಿ ಮೂಲಕ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಅನ್ ಲೈನ್ ಮೂಲಕ ಪಾಠ ಮಾಡಲು ಸೂಚನೆ ನೀಡಿದೆ. ಆದರೆ, ಇಂದು ಆನ್​ಲೈನ್ ಎಜುಕೇಶನ್ ನೀಡಲು ನೂರೆಂಟು ಸಮಸ್ಯೆ ಇದೆ ಎಂದು ರುಪ್ಸಾ ಸಂಘಟನೆಯ ಅಧ್ಯಕ್ಷ ಹಲನೂರು ಲೇಪಾಕ್ಷಿ ಹಾಗೂ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ನಿನ್ನೆ ಸಭೆ ನಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಆನ್​ಲೈನ್ ಕ್ಲಾಸ್ ಶುರು ಮಾಡಲು ಶೇ. 5ರಷ್ಟು ಮಕ್ಕಳನ್ನು ಕೂಡ ಅಡ್ಮಿಷನ್ ಮಾಡಿಲ್ಲ. ಮತ್ತೊಂದು ಕಡೆ RTE ಅಡಿಯಲ್ಲಿ ಬರುವ ಮಕ್ಕಳಿಗೆ ಉಚಿತ ಶಿಕ್ಷಣ ಮುಂದುವರಿಸಲು ಉನ್ನತಿಕರಣ ಅರ್ಜಿಯೇ ಬಿಡುಗಡೆ ಮಾಡಿಲ್ಲ. ಹೀಗಾಗಿ ಸುಮಾರು 4 ರಿಂದ 5 ಸಾವಿರ ಮಕ್ಕಳಿಗೆ ಅನ್ ಲೈನ್ ಪಾಠ ನಡೆಸೋದು ಹೇಗೆ ಸಾಧ್ಯ ಅಂತ ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿದ್ರು ರುಪ್ಸಾ ಅಧ್ಯಕ್ಷ ಹಲನೂರು ಲೇಪಾಕ್ಷಿ.

ಬಹುತೇಕ ಪೋಷಕರು ಪೂರ್ತಿ ಫೀಸ್ ಕಟ್ಟಲು ಆಗಲ್ಲ ಅಂತ ಶುಲ್ಕ ಕಡಿತಕ್ಕೆ ಒತ್ತಾಯ ಹಾಕುತ್ತಿದ್ದಾರೆ. ಆದರೆ ರುಪ್ಸಾ ಸಂಘಟನೆ ಯಾವುದೇ ಕಾರಣಕ್ಕೂ ಬಜೆಟ್ ಶಾಲೆಗಳಲ್ಲಿ ಈ ಬಾರಿ ಶುಲ್ಕ ಕಡಿತ ಸದ್ಯಕ್ಕೆ ಇಲ್ಲ ಎಂದಿದೆ. ಕಾರ್ಪೊರೇಟ್ ಶಾಲೆಗಳಿಗೆ ಶುಲ್ಕ ಕಡಿತ ಮಾಡಿ. ಬಜೆಟ್ ಶಾಲೆಗಳು ಕೇವಲ 15ರಿಂದ 20 ಸಾವಿರ ರೂ. ಮಾತ್ರ ಫೀಸ್ ಪಡೆಯುತ್ತದೆ. ಯಾವುದೇ ಕಾರಣಕ್ಕೂ ಈ ಬಾರಿ ಶುಲ್ಕ ಕಡಿತ ಅಸಾಧ್ಯ ಎಂದು ರುಪ್ಸಾ ತಿಳಿಸಿದೆ.

ಒಟ್ಟಾರೆ ತರಗತಿ ಆರಂಭ ಮಾಡಿದರೂ ಕೂಡ ಈಗ ಎಲ್ಲರಿಗೂ ಪಾಠ ತಲುಪೋದು ಅಸಾಧ್ಯವಾಗಿದೆ. ಹೀಗಾಗಿ ಇಲಾಖೆ ಎಚ್ಚೆತ್ತುಕೊಂಡು ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುವ ಅಗತ್ಯ ಇದೆ. ಇಲ್ಲವಾದರೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಗುಣಮಟ್ಟದ ಶಿಕ್ಷಣ ಸಿಗದೇ ವಿಶ್ವ ಸಂಸ್ಥೆಯ ಅಂದಾಜಿನಂತೆ ಸುಮಾರು 30% ರಷ್ಟು ಮಕ್ಕಳು ಶಾಲೆಗಳಿಂದ ದೂರ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ