NEWSನಮ್ಮರಾಜ್ಯಸಂಸ್ಕೃತಿ

ಸರಳವಾದರೂ ಅದ್ದೂರಿಯಾಗಿ ಅರಮನೆ ಆವರಣದಲ್ಲೇ ನೆರವೇರಿದ ಜಂಬೂಸವಾರಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಚಿನ್ನದ ಅಂಬಾರಿ ಮೇಲೆ ಆಸೀನಳಾಗಿದ್ದ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ದಸರಾ ಉತ್ಸವದ ವೈಭವಯುತ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಅರಮನೆಗಷ್ಟೇ ಸೀಮಿತವಾಗಿ ವಿಶ್ವ ವಿಖ್ಯಾ ತ ಜಂಬೂಸವಾರಿ ಶುಕ್ರವಾರ ಸಂಜೆಯ ಹೊನ್ನಕಿರಣಗಳ ಅಭಿಷೇಕದಲ್ಲಿ ಸಂಪನ್ನ ಗೊಂಡಿತು.

ಅದಕ್ಕೂ ಮುನ್ನ, ಮುಂಚೆಯೇಬೆಳಿಗ್ಗೆ ಚಾಮುಂಡೇಶ್ವ ರಿ ದೇವಿ ಉತ್ಸ ವಮೂರ್ತಿಯ ಮೆರವಣಿಗೆಯು ಮೊದಲ ಬಾರಿಗೆ ಬೆಟ್ಟ ದಿಂದ ಅರಮನೆವರೆಗೂ ನಡೆದು ಸಾವಿರಾರುಮಂದಿ ಕಣ್ತುಂ ಬಿಕೊಂಡು ಕೈ ಮುಗಿದರು. ಹೀಗಾಗಿ ಸಂಜೆ ಅರಮನೆ ಆವರಣದಲ್ಲಿ ನಡೆದ ಜಂಬೂಸವಾರಿ ಸಾಂಪ್ರದಾಯಿಕ ಆಚರಣೆಯಿಂದಷ್ಟೇ ಗಮನ ಸೆಳೆಯಿತು.

ಜಂಬೂಸವಾರಿ ವೀಕ್ಷಿ ಸಲು 500 ಮಂದಿಗಷ್ಟೇ ಅವಕಾಶವಿತ್ತು . ಆದರೆ ಅದರ ಹತ್ತುಪಟ್ಟಿಗೂ ಹೆಚ್ಚು ಮಂದಿ ಅರಮನೆಯಲ್ಲಿ ನೆರೆದಿದ್ದರು.

ಹಿಂದಿನ ವರ್ಷ, ಕೋವಿಡ್ ಕಾರಣದಿಂದ ಜಂಬೂಸವಾರಿಯನ್ನು ಅರಮನೆ ಆವರಣಕ್ಕಷ್ಟೇ ಸೀಮಿತಗೊಳಿಸಲಾಗಿತ್ತು . ಈ ಬಾರಿಯೂಬದಲಾವಣೆ ಇರಲಿಲ್ಲ. ಸಂಜೆ 4.45ಕ್ಕೆ ಅರಮನೆಹೊರ ಆವರಣದ ಕೋಟೆ ಆಂಜನೇಯ ಗುಡಿಯ ಎದುರಿನ ನಂದಿಧ್ವ ಜಕ್ಕೆ ಪೂಜೆ ಮಾಡಿದಮುಖ್ಯ ಮಂತ್ರಿ ಬಸವರಾಜಬೊಮ್ಮಾಯಿ, ಐರಾವತ ಬಸ್ನಲ್ಲಿ ಅರಮನೆ ಆವರಣಕ್ಕೆ ಬಂದರು.

5.20ಕ್ಕೆ ಅಭಿಮನ್ಯು ಆನೆಹೊತ್ತಿದ್ದ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವ ರಿ ಉತ್ಸ ವಮೂರ್ತಿಗೆ ಅವರು ಪುಷ್ಪ ನಮನ ಸಲ್ಲಿ ಸಿದರು. ನಂತರ ರಾಷ್ಟ್ರ ಗೀತೆ ಶುರುವಾಗಿ ಮುಗಿಯುವುದರೊಳಗೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು.

ಆನೆಗಳುಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಅದೇ ವೇಳೆ ಎಲ್ಲರೂ ನಾಡದೇವತೆಗೆ ತಲೆಬಾಗಿ ನಮಸ್ಕರಿಸಿದರು. ಎರಡನೇ ಬಾರಿ ಅಂಬಾರಿಹೊತ್ತು ನಡೆದ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರ ಹೆಜ್ಜೆಹಾಕಿದವು.

ಸಾಲಾನೆಗಳಾಗಿ ಧನಂಜಯ, ಗೋಪಾಲಸ್ವಾ ಮಿ ಮತ್ತು ಅಶ್ವ ತ್ಥಾಮ, ಆರು ಸ್ತಬ್ದ ಚಿತ್ರ ಗಳು, ಪೊಲೀಸ್ ಪಡೆ, ಅಶ್ವಾ ರೋಹಿ ಪಡೆಗಳು ಪಾಲ್ಗೊಂಡವು. ಮಂಗಳವಾದ್ಯ , ವೀರಗಾಸೆ, ಕತ್ತಿ ವರಸೆ, ನಗಾರಿ, ಡೊಳ್ಳು , ಕಂಸಾಳೆ, ತಾಳಮದ್ದ ಲೆ, ಪಟ ಕುಣಿತ, ಗೊಂಬೆ ಕುಣಿತದ ಕಲಾವಿದರು ಮೆರುಗು ತಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಕ್ಷ ಎಚ್.ವಿ. ರಾಜೀವ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಇದ್ದರು.

ಗಮನ ಸೆಳೆದ ಕೋವಿಡ್ ಸ್ತಬ್ಧ ಚಿತ್ರ: ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯುತ್ತಿರುವ ದಸರಾ ಮೆರವಣಿಗೆಗೆಮುಖ್ಯ ಮಂತ್ರಿ ಬಸವರಾಜಬೊಮ್ಮಾಯಿ ಚಾಲನೆ ನೀಡಿದ್ದು , ಸ್ತಬ್ಧ ಚಿತ್ರ ಗಳು ಗಮನ ಸೆಳೆಯುತ್ತಿವೆ. ಕಲಾವಿದರು ವೈವಿಧ್ಯ ಮಯ ಪ್ರ ದರ್ಶನ ನೀಡುತ್ತಿದ್ದಾರೆ.

ಮುಡಾ ವತಿಯಿಂದ ಮೈಸೂರಿನಲ್ಲಿ ಸದ್ಯ ದಲ್ಲೇ ನಿರ್ಮಾಣವಾಗಲಿರುವ ಗುಂಪು ವಸತಿಯೋಜನೆಯನ್ನು ಈ ಬಾರಿ ಸ್ತಬ್ಧ ಚಿತ್ರ ದಲ್ಲಿ ಬಿಂಬಿಸಿ ಪ್ರಚಾರ ನೀಡಲಾಗಿದೆ.

ಸ್ವಾ ತಂತ್ರ್ಯದ ಅಮೃತಮಹೋತ್ಸ ವ ಅಂಗವಾಗಿ ನಿರ್ಮಿಸಿರುವ ಸ್ತಬ್ಧ ಚಿತ್ರ ಆಕರ್ಷಕವಾಗಿತ್ತು.. ಕೋವಿಡ್‌ ಮೂರನೇ ಅಲೆ ಕುರಿತು ಜಾಗೃತಿಮೂಡಿಸುವ ಸ್ತಬ್ಧ ಚಿತ್ರ ಕೂಡ ಮೆರವಣಿಗೆಯಲ್ಲಿ ಹಾದು ಹೋಯಿತು.  ಪರಿಸರ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯ ತೆ ಬಿಂಬಿಸುವ ಸ್ತಬ್ಧ ಚಿತ್ರ ಗಮನ ಸೆಳೆದವು.  ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸ್ತಬ್ಧ ಚಿತ್ರ ಹಾಗೂ ಆನೆ ಗಾಡಿ ಸ್ತಬ್ಧ ಚಿತ್ರಗಳು ಸಾಗಿದವು.

ವಿದ್ಯುತ್ ದೀಪಾಲಂಕಾರ ಒಂಬತ್ತು ದಿನಗಳವರೆಗೆ ವಿಸ್ತರಣೆ: ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ತಿಳಿಸಿದರು.

 

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...