ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಹಣ ದಿನದ ಅಂಗವಾಗಿ ಇಲ್ಲಿನ ‘ಸಾರಿಪುತ್ರ ಬುದ್ಧ ವಿಹಾರ’ದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ ರವಾದ) ಯನೂರಾರು ಕಾರ್ಯಕರ್ತರು ಬೌದ್ದ ಧರ್ಮವನ್ನು ಸ್ವೀಕರಿಸಿದರು.
ನಾನು ಬ್ರ ಹ್ಮ, ವಿಷ್ಣು, ಮಹೇಶ್ವ ರರನ್ನು ದೇವರೆಂದು ನಂಬುವುದಿಲ್ಲ ಮತ್ತು ಆಚರಿಸುವುದಿಲ್ಲ ನಾನು ರಾಮ, ಕೃಷ್ಣರನ್ನು ದೇವರೆಂದು ನಂಬುವುದಿಲ್ಲ ಮತ್ತು ಅವರನ್ನು ಪೂಜಿಸುವುದಿಲ್ಲ. ಗೌರಿ, ಗಣಪತಿ ಇತ್ಯಾದಿ ಹಿಂದೂ ಧರ್ಮದ ಯಾವುದೇ ದೇವ, ದೇವತೆಗಳನ್ನು ನಂಬುವುದಿಲ್ಲ ಮತ್ತು ಪೂಜಿಸುವುದಿಲ್ಲ.
ನಾನು ದೇವರ ಅವತಾರಗಳಲ್ಲಿ ವಿಶ್ವಾಸ ಇಡುವುದಿಲ್ಲ. ಭಗವಾನ್ ಬುದ್ಧರನ್ನು ವಿಷ್ಣುವಿನ ಅವತಾರ ಎನ್ನುವುದನ್ನು ನಂಬುವುದಿಲ್ಲ. ನಾನು ಇಂತಹ ಪ್ರಚಾರವನ್ನು ಮೂರ್ಖತನದ ಮತ್ತು ಅಪಪ್ರಚಾರವೆಂದು ತಿಳಿಯುತ್ತೇನೆ.
ನಾನು ಎಂದು ಶ್ರದ್ದಾ ಮಾಡುವುದಿಲ್ಲ, ಪಿಂಡದಾನ ನೀಡುವುದಿಲ್ಲ. ಬೌದ್ದ ಧರ್ಮದ ವಿರುದ್ದವಾದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಯಾವುದೇ ಕ್ರಿಯಾ ಸಂಸ್ಕಾರಗಳನ್ನು ಬ್ರಾಹ್ಮಣರಿಂದ ಮಾಡಿಸುವುದಿಲ್ಲ. ನಾವೆಲ್ಲ ಕರಾಳ ಹಿಂದೂ ಹಿಂದೂಧರ್ಮವನ್ನು ತೆಜಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ ರವಾದ) ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ ಬೌದ್ಧ ಧರ್ಮದ ಪ್ರ ತಿಜ್ಞೆ ಬೋಧಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ನಾವೆಲ್ಲರೂ ಯಾವುದೇ ಒತ್ತಡ, ಆಸೆ, ಆಮಿಷಕ್ಕೆ ಒಳಗಾಗದೇ ಸ್ವ ಇಚ್ಛೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇವೆ ಎಂದರು.
ಮುಖಂಡರಾದ ಸುಖದೇವ ಮೇಲಿನಕೇರಿ, ಚಂದ್ರು ಮೇಲಿನಕೇರಿ, ಶಂಕರ ಚಲವಾದಿ, ಸಂಗಪ್ಪ ಪಡಗಾರ, ಸುನಂದಾದೊಡಮನಿ, ಸಂಗು ಕಿರಸೂರ, ಮಲ್ಲು ಮಡ್ಡಿ ಮನಿ, ಭೀಮುಉತ್ನಾ ಳಸೋಮನಾಥ ರಣದೇವಿ, ಯಲ್ಲಪ್ಪ ಕಾಂಬಳೆ, ಹುಚ್ಚ ಪ್ಪ ಲೋಕೂರಮುರಗೇಶದೊಡ್ಡ ಣ್ಣ ವರ ಮಹಾಂತೇಶ ರಾಠೋಡ ಪಾಲ್ಗೊಂಡಿದ್ದರು.