ಮಡಿಕೇರಿ: ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಬಳಿಕ ಸಾರಿಗೆ ನೌಕರರನ್ನು ಒಂದಲ್ಲ ಒಂದು ರೀತಿ ಕಾಡುತ್ತಿರುವ ಸಾರಿಗೆ ಅಧಿಕಾರಿಗಳು ಚಿತ್ರಹಿಂಸೆ ನೀಡುವ ಮೂಲಕ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದ್ದಾರೆ.
ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕಿರಿಯ ಸಹಾಯಕನಿಗೆ ಕಲ್ಲಿನಲ್ಲಿ ಹೊಡೆಯಲು ಹೋಗುತ್ತಾನೆ. ಅಲ್ಲದೆ ವಿಡಿಯೋ ಮಾಡುತ್ತಿದ್ದೀಯ ನೀನು ಏನು ಮಾಡಿಕೊಳ್ಳೊಕ್ಕಾಗುತ್ತೆ ಎಂದು ಮತ್ತೆ ಹೊಡೆಯಲು ಹೋಗುತ್ತಾನೆ.
ನೀವು ನನಗೆ ಬೈಯಬೇಡಿ ಎಂದು ಆತ ಹೇಳಿದರೆ ಇನ್ನೇನು ಮಾಡಬೇಕು ಎಂದು ಒದೆಯಲು ಹೋಗುತ್ತಾನೆ. ನೀನು ಅಪ್ಪನಿಗೆ ಹುಟ್ಟಿದವನ ಸೂ…ಗನೆ ಎಂದೆಲ್ಲ ಬೈಯುತ್ತಿದ್ದಾನೆ.
ಈ ದೌರ್ಜನ್ಯ ಮಾಡುವ ವಿಡಿಯೋ ಈಗ ವೈರಲ್ ಆಗಿದ್ದು ಒಬ್ಬ ನೌಕರನ ಮೇಲೆ ಕೈ ಮಾಡುವುದಲ್ಲದೆ ಅವಾಚ್ಯವಾಗಿ ನಿಂದಿಸುತ್ತಿರುವ ಈತನನ್ನು ಕೂಡಲೇ ಅಮಾನತು ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ರಾಜ್ಯದ ಜನರ ಸೇವೆಗಾಗಿ ಸರ್ಕಾರದಿಂದ ಇರುವ ಒಂದು ಸಂಸ್ಥೆ ಹೀಗೆ ಹಿಂಸೆ ಮಾಡಿದರೆ ನೌಕರರು ಎಲ್ಲಿಗೆ ಹೋಗಬೇಕು ಎಂದು ನೊಂದ ನೌಕರರು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆ ಮುಷ್ಕರದ ನಂತರ ನೌಕರರು ಒಂದು ರೀತಿ ಜೀತದಾಳುಗಳಂತೆ ಆಗಿಬಿಟ್ಟಿದ್ದಾರೆ. ಇದರಿಂದ ಮಾನಸಿಕವಾಗಿ ಬಳಲುತ್ತಿರುವ ನೌಕರರು ಖಿನ್ನತೆಗೆ ಒಳಗಾಗುತ್ತಿದ್ದರೆ. ಈ ರೀತಿ ಆದರೆ ಸಾರ್ವಜನಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸಲು ಸಾಧ್ಯವೆ ಎಂದು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ.
ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳ ವೇತನವನ್ನು ಸಮರ್ಪಕವಾಗಿ ಕೊಡಿಸಲು ಆಗದ ಇಂಥ ನೀಚರು ನೌಕರರ ಮೇಲೆ ದೌರ್ಜನ್ಯ ಎಸಗುವುದಕ್ಕೆ ಮಾತ್ರ ಉತ್ತರನ ಪೌರುಷ ತೋರಿಸುವುದರಲ್ಲಿ ನಿಸ್ಸೀಮರು ಎಂದು ನೌಕರರು ಕಿಡಿಕಾರುತ್ತಿದ್ದಾರೆ.